ADVERTISEMENT

ಉಗ್ರರ ಮೇಲೆ ಕಣ್ಣಿಡುವ ಬೋಟ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST
ಉಗ್ರರ ಮೇಲೆ ಕಣ್ಣಿಡುವ ಬೋಟ್‌
ಉಗ್ರರ ಮೇಲೆ ಕಣ್ಣಿಡುವ ಬೋಟ್‌   

ಉಗ್ರರಿಗೆ ಸಾಗರಗಳೇ ಕೇಂದ್ರಬಿಂದು. ಸಾಗರ ಮುಖೇನವೇ ಉಗ್ರರು ದಾಳಿ ನಡೆಯಲು ಯೋಜನೆ ರೂಪಿಸುವುದು. 2008ರ ಮುಂಬೈನ ಅವಳಿ ಕಟ್ಟಡಗಳ ಮೇಲೆ ನಡೆದಿರುವ ದಾಳಿ ಕೂಡ ಸಾಗರದ ಮಾರ್ಗದ ಮೂಲಕವೇ ನಡೆದಿತ್ತು.

ಆದ್ದರಿಂದ ನೀರಿನ ಮೂಲಕದ ದಾಳಿಯನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಿರುವ ತಂತ್ರಜ್ಞರು ಈಗ ಮಾನವ ರಹಿತ ಸ್ವಯಂ ಚಾಲಿತ ಬೋಟ್‌ ಒಂದನ್ನು ನಿರ್ಮಿಸಿದ್ದಾರೆ. ಈ ಬೋಟ್‌ ಭಯೋತ್ಪಾದಕರ ಮೇಲೆ ಒಂದು ಕಣ್ಣನ್ನು ಇಡುತ್ತದೆಯೇ ವಿನಾ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವುದಿಲ್ಲ. ಆಕ್ರಮಣ ಮಾಡಲು ಕೂಡ ಇದನ್ನು ಬಳಕೆ ಮಾಡಲಾಗುವುದಿಲ್ಲ. ಬದಲಾಗಿ ಕುಟಿಲ ತಂತ್ರದೊಂದಿಗೆ ಶರವೇಗದಲ್ಲಿ ಚಲಿಸುವ ಮೂಲಕ ಶತ್ರು ಪಾಳೇಯದ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಿದೆ.

ಬ್ರಿಟನ್ನಿನ ಪ್ರಸಿದ್ಧ ಥೇಮ್ಸ್ ನದಿಯಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಬಲ್ಲ ಡ್ರೋನ್ ಮೂಲಕ ಈ ನೂತನ ಬೋಟಿನ ಪರೀಕ್ಷಾರ್ಥ ಸಂಚಾರ ಸಾಗುತ್ತಿದೆ.

ಬ್ರಿಟನ್‌ನ ಈ ರಾಯಲ್ ಬೋಟ್, ನೀರಿನಿಂದ ಎದುರಾಗುವ ಭಯೋತ್ಪಾದನೆಯನ್ನು ತಡೆಯಲಿದೆ.  2ಸಾವಿರ ಕೆ.ಜಿ. ಭಾರ ಹೊಂದಿರುವ ಈ ಬೋಟ್‌ನಲ್ಲಿ 360 ಡಿಗ್ರಿ ಕ್ಯಾಮೆರಾ, ಜಿಪಿಎಸ್, ರಾಡಾರ್ ಹಾಗೂ ರೇಡಿಯೊ ವ್ಯವಸ್ಥೆಗಳನ್ನು ಆಳವಡಿಸಲಾಗಿದೆ. ಅಲ್ಲದೆ ಈ ಸ್ಪೀಡ್ ಬೋಟ್ ನಿರ್ಮಾಣದಲ್ಲಿ ಬ್ಲೇಡ್ ರನ್ನರ್ ಹಲ್ ವಿನ್ಯಾಸ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ.

ಅಂದಹಾಗೆ ಮಾನವ ರಹಿತ ಈ ಬೋಟ್‌ ಅನ್ನು ರಿಮೋಟ್ ಮೂಲಕ ನಿರ್ವಹಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.