ADVERTISEMENT

ಊಟದಲ್ಲಿ ಉಪ್ಪಿನಕಾಯಿ ಇದ್ದರೆ...

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST
ಊಟದಲ್ಲಿ ಉಪ್ಪಿನಕಾಯಿ ಇದ್ದರೆ...
ಊಟದಲ್ಲಿ ಉಪ್ಪಿನಕಾಯಿ ಇದ್ದರೆ...   

ಊಟಕ್ಕೆ ಉಪ್ಪಿನಕಾಯಿ ಇಲ್ಲದಿದ್ದರೆ ಆ ಉಪ್ಪಿನಕಾಯಿಗೆ ‘ಊಟಕ್ಕಿಲ್ಲದ ಉಪ್ಪಿನಕಾಯಿ’ ಎಂಬ ಹಣೆಪಟ್ಟಿ ಬರುತ್ತದೆ. ಹಾಗಾಗಿ ಊಟದಲ್ಲಿ ಉಪ್ಪಿನಕಾಯಿಗೇ ಅಗ್ರಸ್ಥಾನ. ಉಪ್ಪಿನಕಾಯಿ ಸೇವನೆ ಆರೋಗ್ಯಕ್ಕೂ ಉತ್ತಮ. ಉಪ್ಪಿನಕಾಯಿ ಸೇವನೆ ಮಾಡುವಾಗ ಹವಾಮಾನವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ತಿಂದರೆ ಹೆಚ್ಚು ಬಾಯಾರಿಕೆಯಾಗಬಹುದು. ಇದರ ಸೇವನೆಯಿಂದ ದೇಹಕ್ಕೆ ಆಗುವ ಲಾಭಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

* ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ಮನೆಯಲ್ಲಿ ಉಪ್ಪಿನಕಾಯಿ ಮಾಡುವಾಗ ಹೋಳುಗಳನ್ನು ಉಪ್ಪಿನಲ್ಲಿ ಮುಳುಗಿಸಿರುತ್ತಾರೆ. ಉಪ್ಪಿನಕಾಯಿಗೆ ಬಳಸುವ ಸಾಮಗ್ರಿಗಳು ಹಾಗೂ ಹೋಳುಗಳು  ಜೀರ್ಣಕ್ರಿಯೆಯನ್ನು ಸುಧಾರಿಸುವ ಪ್ರೋಬಯೊಟಿಕ್ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ.

* ಚರ್ಮದ ಅಲರ್ಜಿಗೆ ಉತ್ತಮ ಮದ್ದು: ತರಕಾರಿ, ಮಾವು, ನಿಂಬೆಗಳಿಂದ ಸಾಮಾನ್ಯವಾಗಿ ಉಪ್ಪಿನಕಾಯಿ ಮಾಡಲಾಗುತ್ತದೆ. ಇದರಲ್ಲಿನ ಆ್ಯಂಟಿಆಕ್ಸಿಡೆಂಟ್‌ ಗುಣ ಚರ್ಮದ ಅಲರ್ಜಿ ಹಾಗೂ ಇತರ ಚರ್ಮರೋಗಳು ಬಾಧಿಸದಂತೆ ತಡೆಯುತ್ತದೆ.

ADVERTISEMENT

* ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ: ಉಪ್ಪಿನಕಾಯಿಗಳ ನಿಯಮಿತ ಬಳಕೆ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಅದು ದೇಹ ಹಾಗೂ ಮಿದುಳಿನ ಸಂವಹನ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಿಂದ ಒಮ್ಮಿಂದೊಮ್ಮೆಲೆ ಮನಸ್ಥಿತಿ ಬದಲಾವಣೆ ಹಾಗೂ ಆತಂಕದಂತಹ ರೋಗ ಲಕ್ಷಣಗಳು ಬಾಧಿಸುವುದಿಲ್ಲ.

* ಅಗತ್ಯ ಪೋಷಕಾಂಶಗಳ ಆಗರ: ಮನೆಯಲ್ಲೇ ಮಾಡಿದ ಉಪ್ಪಿನಕಾಯಿಗಳಲ್ಲಿ ನಾರಿನಾಂಶ ಹೆಚ್ಚು ಇರುತ್ತದೆ. ಇದರಲ್ಲಿ ಅತಿ ಹೆಚ್ಚು ವಿಟಮಿನ್‌ ಹಾಗೂ ಸತ್ವಗಳಿವೆ. ಆದರೆ ಸೂರ್ಯನ ಬೆಳಕಿಗೆ ನೇರವಾಗಿ ಉಪ್ಪಿನಕಾಯಿ ಬಾಟಲಿಗಳನ್ನು ಇಟ್ಟರೆ ಅದರಲ್ಲಿನ ಸತ್ವಗಳು ಕಡಿಮೆಯಾಗುತ್ತವೆ.

* ಮಧುಮೇಹ ನಿಯಂತ್ರಕ: ಉಪ್ಪಿನಕಾಯಿಗೆ ಬಳಸುವ ವಿನೆಗರ್‌ ಹಿಮೋಗ್ಲೋಬಿನ್‌ ಮಟ್ಟವನ್ನು ಸುಧಾರಿಸುತ್ತದೆ. ಇದು ಮಧುಮೇಹ ನಿಯಂತ್ರಣದಲ್ಲಿಡುತ್ತದೆ.

* ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: 12 ವರ್ಷಕ್ಕಿಂತ ಸಣ್ಣ ಮಕ್ಕಳು ಉಪ್ಪಿನಕಾಯಿ ಸೇವಿಸಿದರೆ ಅದು ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರಿಂದ ಅವರಿಗೆ ಪದೇ ಪದೇ ಶೀತ, ಸಾಮಾನ್ಯ ಜ್ವರ, ಚರ್ಮದ ಅಲರ್ಜಿಯಂತಹ ಕಾಯಿಲೆಗಳು ಕಾಣಿಸಿಕೊಳ್ಳುವುದಿಲ್ಲ. 

ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿಯಾದರೆ
ಉಪ್ಪಿನಕಾಯಿ ಸೇವನೆಯಿಂದ ಎಷ್ಟು ಲಾಭವೋ, ದೇಹಕ್ಕೆ ಹಾನಿಯೂ ಇದೆ. ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿಯಾದರೆ, ಅನ್ನನಾಳದ ಕ್ಯಾನ್ಸರ್‌ ಆಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

ಇದರಲ್ಲಿ ಅತಿ ಹೆಚ್ಚು ಉಪ್ಪು ಇರುವುದರಿಂದ ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ ಕಾಣಿಸಿಕೊಂಡು ಲಕ್ವಾ ಅಥವಾ ಹೃದಯಾಘಾತ ಸಂಭವಿಸಬಹುದು. ಮಾರುಕಟ್ಟೆಗಳಲ್ಲಿ ಸಿಗುವ ಪ್ಯಾಕ್ಡ್‌ ಉಪ್ಪಿನಕಾಯಿಗಳನ್ನು ತಿನ್ನಬಾರದು. ಮನೆಯಲ್ಲೇ ಮಾಡಿದ ಉಪ್ಪಿನಕಾಯಿಗಿಂತ ಇದರಿಂದ ಕಡಿಮೆ ಸತ್ವ ಇರುತ್ತದೆ. ತುಂಬ ದಿನ ಹಾಳಾಗದಂತೆ ಇಡಲು ಬಳಸುವ ರಾಸಾಯನಿಕ ಹಾಗೂ ಮಾ ವಿಧಾನಗಳಿಂದ ಇವುಗಳ ಸೇವನೆಯಿಂದ ದೇಹಕ್ಕೆ ಹಾನಿಯೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.