ADVERTISEMENT

‘ಕಂಗನಾ ಜೊತೆ ಜಗಳವಾಗಿಲ್ಲ’

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST
‘ಕಂಗನಾ ಜೊತೆ ಜಗಳವಾಗಿಲ್ಲ’
‘ಕಂಗನಾ ಜೊತೆ ಜಗಳವಾಗಿಲ್ಲ’   

ಕಂಗನಾ ಮತ್ತು ಶಾಹಿದ್‌ಕಪೂರ್ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬುದು ಸದ್ಯದ ಬಾಲಿವುಡ್ ಗುಲ್ಲು.
‘ಆದರೆ ಇದು ಕೇವಲ ಗಾಸಿಪ್‌. ನಮ್ಮಿಬ್ಬರ ನಡುವೆ ಯಾವ ಜಗಳವೂ ನಡೆದಿಲ್ಲ. ನಮ್ಮ ಸಂಬಂಧ ಚೆನ್ನಾಗಿಯೇ ಇದೆ’ ಎಂದು ಗಾಳಿ ಸುದ್ದಿಗೆ ಪೂರ್ಣ ವಿರಾಮ ಹಾಕಲು ಪ್ರಯತ್ನಿಸಿದ್ದಾರೆ ಶಾಹಿದ್‌.

‘ರಂಗೂನ್’ ಶಾಹಿದ್‌ ಮತ್ತು ಕಂಗನಾ ಜೊತೆಯಾಗಿ ನಟಿಸಿರುವ ಮೊದಲ ಸಿನಿಮಾ. ಆದರೆ ಇಬ್ಬರೂ ಒಮ್ಮೆಯೂ ಜೊತೆಯಾಗಿ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಕೋಳಿ ಜಗಳ ನಡೆದಿದೆ ಎಂಬ ಗುಲ್ಲು ಹಬ್ಬಿತ್ತು.

ಆದರೆ ಈ ಸುದ್ದಿ ಶುದ್ಧ ಸುಳ್ಳು ಎನ್ನುತ್ತಿದ್ದಾರೆ ಶಾಹಿದ್‌, ‘ನೋಡಿ, ನಮ್ಮಿಬ್ಬರ ನಡುವೆ ಯಾವ ಜಗಳವೂ ಆಗಿಲ್ಲ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಪತ್ರಿಕೆಗಳಲ್ಲಿ ನಮ್ಮಿಬ್ಬರ ಬಗ್ಗೆ ತಪ್ಪು ಸುದ್ದಿ ಹರಿದಾಡುತ್ತಿರುವುದನ್ನು ಓದಿದ್ದೇನೆ. ನಾನು ಸಂತೋಷದಿಂದ ಎಲ್ಲಿ ಬೇಕಾದರೂ, ಯಾವಾಗಲಾದರೂ, ಕಂಗನಾ ಜೊತೆ ಸಿನಿಮಾ ಪ್ರಚಾರ ಮಾಡಲು ತಯಾರಿದ್ದೇನೆ’ ಎಂದು ಸುದ್ದಿ ಹಬ್ಬಿಸುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ ಶಾಹಿದ್‌.

ADVERTISEMENT

‘ಕೆಲವು ಕಾರಣಗಳಿಂದ ನನಗೆ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಳಲು ಸಾಧ್ಯವಾಗಿಲ್ಲ. ಅದನ್ನೇ ದೊಡ್ಡ ಸುದ್ದಿ ಮಾಡುವುದು ಸರಿಯಲ್ಲ’ ಎನ್ನುತ್ತಾರೆ ಅವರು.
ವಿಶಾಲ್‌ ಭಾರಧ್ವಾಜ್‌ ನಿರ್ದೇಶನದ ‘ರಂಗೂನ್‌ ಸಿನಿಮಾ ಫೆಬ್ರುವರಿಯಲ್ಲಿ ತೆರೆಕಾಣಲಿದೆ. ಶಾಹಿದ್‌, ವಿಶಾಲ್‌ ನಿರ್ದೇಶನದಲ್ಲಿ ನಟಿಸುತ್ತಿರುವ ಮೂರನೇ ಸಿನಿಮಾ ಇದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.