ADVERTISEMENT

ಕಣ್ಣ ಗುಟ್ಟು

ಅಚ್ಚರಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಕಣ್ಣ ಗುಟ್ಟು
ಕಣ್ಣ ಗುಟ್ಟು   

ಪ್ರಪಂಚದ ಅಂದಚೆಂದ ಸವಿಯೋದು ಮನಸ್ಸನ್ನು ಖುಷಿಯಾಗಿರಿಸೋದು ಕಣ್ಣು. ಆದರೆ ಕಣ್ಣಿಗೆ ಸಂಬಂಧಿಸಿದ ಅವೆಷ್ಟೋ ವಿಷಯಗಳು ನಮಗೆ ಗೊತ್ತೇ ಇರುವುದಿಲ್ಲ. ಮನಸ್ಸಿನ ಮಾತನ್ನು ಕೇಳಿ ಕಣ್ಣುಗಳು ಹೇಗೆಲ್ಲಾ ಸ್ಪಂದಿಸುತ್ತವೆ ಗೊತ್ತಾ. ಇಲ್ಲಿದೆ ಕಣ್ಣಿನ ಕೆಲ ವಿಶೇಷ ಸಂಗತಿ.

* ನಮಗಿಷ್ಟವಾದವರನ್ನು ನೋಡುವಾಗ ಕಣ್ಣಿನ ಪಾಪೆ (pupi* s) ಎರಡು ಪಟ್ಟು ಹಿಗ್ಗುತ್ತೆ.

* ಕಣ್ಣಿನ ಅಂದ ಹೆಚ್ಚಿಸುವ ಕಣ್ರೆಪ್ಪೆಯ ಕೂದಲಿನ ಆಯಸ್ಸು ಸುಮಾರು ಐದು ತಿಂಗಳು.

ADVERTISEMENT

* ಒಮ್ಮೆ ಕಣ್ಣು ಮಿಟುಕಿಸಲು 100–150 ಮಿಲಿಸೆಕೆಂಡ್‌ ಬೇಕಾಗುತ್ತದೆ. ಒಂದು ಸೆಕೆಂಡ್‌ಗೆ ಐದು ಬಾರಿ ಕಣ್ಣು ಮಿಟುಕಿಸಬಹುದು.

* ಹತ್ತು ಸಾವಿರ ವರ್ಷಗಳ ಹಿಂದಷ್ಟೇ ನೀಲಿ ಬಣ್ಣದ ಕಣ್ಣು ಕಾಣಿಸಿಕೊಂಡಿದ್ದು. ಇದಕ್ಕೆ ವಂಶವಾಹಿಗಳ ರೂಪಾಂತರ ಕಾರಣ.

* ಭೂಮಿಯ ಮೇಲಿರುವ ಒಟ್ಟು ಜನಸಂಖ್ಯೆಯಲ್ಲಿ ಶೇ 2ರಷ್ಟು ಜನರ ಕಣ್ಣು ಮಾತ್ರ ಹಸಿರು ಬಣ್ಣದ್ದಾಗಿರುತ್ತದೆ.

* ಶೇ 1ರಷ್ಟು ಜನರ ಎರಡೂ ಕಣ್ಣು ಪ್ರತ್ಯೇಕ ಬಣ್ಣಗಳನ್ನು ಹೊಂದಿರುತ್ತವೆ.

* ಅಂದಾಜಿನ ಪ್ರಕಾರ ಜೀವಮಾನದಲ್ಲಿ 2 ಕೋಟಿ 40 ಲಕ್ಷದಷ್ಟು (24 ಮಿಲಿಯನ್‌) ವಿಭಿನ್ನ ಬಗೆಯ ಚಿತ್ರಗಳನ್ನು ನೋಡಿರುತ್ತೇವೆ.

* ಮನುಷ್ಯನ ಕಣ್ಣಿನ ಕಾರ್ನಿಯಾಕ್ಕೂ ಶಾರ್ಕ್‌ ಮೀನಿನ ಕಣ್ಣಿನ ಕಾರ್ನಿಯಾಕ್ಕೂ ಸಾಮ್ಯತೆ ಇದೆ.
ವಿಡಿಯೊ ನೋಡಲು: bit.* y/2nOP5cM

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.