ADVERTISEMENT

ಕಲಿಕೆ ಸುಲಭವಾಗಿಸಿದ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST
ಡಿಕ್ಷನರಿ.ಕಾಮ್‌ (dictionary.com):
ಡಿಕ್ಷನರಿ.ಕಾಮ್‌ (dictionary.com):   

ವಿದ್ಯಾರ್ಥಿಗಳ ಕಲಿಕೆ ಈಗ ಪುಸ್ತಕಷ್ಟೇ ಸೀಮಿತವಾಗಿಲ್ಲ. ಕಲಿಕಾ ಹಾದಿಯನ್ನು ಸುಲಭಗೊಳಿಸುವ ಸಲುವಾಗಿಯೇ ಹಲವು ಆ್ಯಪ್‌ಗಳು ರೂಪುಗೊಂಡಿವೆ. ಶಾಲೆ, ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳನ್ನು ಎಬ್ಬಿಸುವುದರಿಂದ ಹಲವು ವಿಷಯಗಳ ಜ್ಞಾನಾರ್ಜನೆಗೂ ಇದು ಸಹಾಯಕವಾಗಿದೆ. ವಿದ್ಯಾರ್ಥಿ ಸ್ನೇಹಿಯಾಗಿರುವ ಕೆಲವು ಆ್ಯಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮೈ ಕ್ಲಾಸ್‌ ಶೆಡ್ಯೂಲ್‌: ಟೈಮ್‌ಟೇಬಲ್‌ (my class schedule:timetable): ಪರೀಕ್ಷೆ, ತರಗತಿಯ ವೇಳಾಪಟ್ಟಿಯನ್ನು ಹಾಳೆಯಲ್ಲಿ ಬರೆದಿಟ್ಟುಕೊಳ್ಳುವ ಅಗತ್ಯ ಈಗಿಲ್ಲ. ಪರೀಕ್ಷೆಯ ದಿನಾಂಕ, ತರಗತಿಯಲ್ಲಿ ಮಾಡಬೇಕಾದ ಕೆಲಸವನ್ನು ಮೊದಲೇ ನಮೂದಿಸಿದ್ದರೆ ಸಮಯಕ್ಕೆ ಸರಿಯಾಗಿ ಈ ಆ್ಯಪ್‌ ನೆನಪು ಮಾಡುತ್ತದೆ. ತರಗತಿಯಲ್ಲಿರಬೇಕಾದರೆ ಆ್ಯಪ್‌ ಮ್ಯೂಟ್‌ ಮಾಡುವ ಅವಕಾಶವೂ ಇದೆ.

**

ADVERTISEMENT

ಡಿಕ್ಷನರಿ.ಕಾಮ್‌ (dictionary.com): ಇದು ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಪದಗಳ ಅರ್ಥ ಇದರಲ್ಲಿ ನೀಡಲಾಗಿದೆ. ಸಮನಾರ್ಥಕ ಪದ, ಪದಗಳ ಧ್ವನಿ ಉಚ್ಚರಣೆ, , ನುಡಿಗಟ್ಟು, ಪದದ ವೈಶಿಷ್ಟ್ಯ ಮಾಹಿತಿಯೂ ಇದೆ. ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ಡೌನ್‌ಲೋಡ್‌ ಮಾಡಿದ್ದಾರೆ. ದಿನಕ್ಕೊಂದು ಪದದ ವಿವರಣೆಯೂ ವಿದ್ಯಾರ್ಥಿಗಳ ಪದ ಸಂಪತ್ತು ಹೆಚ್ಚುತ್ತದೆ.

**

ವೋಲ್ಫ್ರಾಮ್‌ ಆಲ್ಫಾ (WolframAlpha): ವಿದ್ಯಾರ್ಥಿಗಳು ಬಳಸಲೇಬೇಕಾದ ಆ್ಯಪ್‌ ಇದು. ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ವಸ್ತುಗಳು, ಎಂಜಿನಿಯರಿಂಗ್, ಖಗೋಳ ವಿಜ್ಞಾನ, ಭೂ ವಿಜ್ಞಾನ, ಜೀವ ವಿಜ್ಞಾನಗಳ ವಿದ್ಯಾರ್ಥಿಗಳಿಗೆ ಇದು ಪ್ರಯೋಜನಕಾರಿ. ಇದು ಕಂಪ್ಯೂಟರ್‌ ರೀತಿಯಲ್ಲಿಯೇ ಕೆಲಸ ಮಾಡುತ್ತದೆ. ಈ ಆ್ಯಪ್‌ ಅಭಿವೃದ್ಧಿಗೆ ಇಪ್ಪತ್ತೈದು ವರ್ಷ ವ್ಯಯಿಸಲಾಗಿದೆ. ಸ್ಟೀಫನ್‌ ವೋಲ್ಫ್ರಾಮ್‌ ಅವರ ಶ್ರಮದ ಫಲವಿದು. ಮೂವತ್ತ್ಮೂರಕ್ಕೂ ಹೆಚ್ಚು ಮಂದಿ ಇದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

**

ಟ್ರೆಲೊ ಆ್ಯಪ್‌ (ಟ್ರೆಲೊ): ಪರೀಕ್ಷೆ ಸಮೀಪಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಮನನ ಮಾಡಿಕೊಳ್ಳಲು 'ಗುಂಪು ಅಧ್ಯಯನ' ಒಂದು ಉತ್ತಮ ವಿಧಾನ. ಸ್ನೇಹಿತರ ಮನೆಗೆ ಹೋಗಿ ಅಧ್ಯಯನ ಮಾಡಲು ಸಾಧ್ಯವಾಗದಿರುವ ಸಮಯದಲ್ಲಿ ಈ ಆ್ಯಪ್‌ ಸಹಾಯಕ್ಕೆ ಬರುತ್ತದೆ. ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಯೋಜನೆಗಳನ್ನು ಮಾಡಬಹುದು.  ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ಸಂವಹನ ನಡೆಸಲು ಮತ್ತು ಮಾಡುತ್ತಿರುವ ಕಾರ್ಯವನ್ನು ಗಮನಿಸಲು ಅನುವು ಮಾಡಿಕೊಡುತ್ತದೆ. ಅರವತ್ತಾರೂ ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

**

ಡ್ರಾಪ್‌ಬಾಕ್ಸ್‌ (drop box): ಇದು ವಿದ್ಯಾರ್ಥಿಗಳು ಓದಿಗೆ ಸಂಬಂಧಿಸಿದ ವಿಷಯಗಳನ್ನು ಒಂದೇ ಕಡೆ ಇಟ್ಟುಕೊಳ್ಳಲು ನೆರವಾಗಿದೆ. ವಿಷಯಗಳು ಒಂದೆಡೆ ಸಿಗುವುದರಿಂದ ಓದುವುದು ಸುಲಭವಾಗಿಸಿದೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ವಿಷಯಗಳನ್ನು ಒಬ್ಬರಿಂದ ಇನ್ನೊಬ್ಬರು ಕಳುಹಿಸಿಕೊಳ್ಳಬಹುದು. ಆಫ್‌ಲೈನ್‌ನಲ್ಲಿಯೂ ಇದನ್ನು ಬಳಸಬಹುದು. ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

**

ಕ್ಯಾಮ್‌ಸ್ಕ್ಯಾನರ್‌ (cam scanner): ಇದು ಬೋಧನಾ ವಿಷಯವನ್ನು ಸ್ಕ್ಯಾನ್‌ ಮಾಡಿ ಅದು ಪಿಡಿಎಫ್‌ಗೆ ಬದಲಾಯಿಸಲು ಸಹಾಯಕವಾಗಿದೆ. ಇದನ್ನು ಸ್ನೇಹಿತರಿಗೆ ಮೇಲ್‌ ಮಾಡಬಹುದು. ಈ ಆ್ಯಪ್‌ ಅನ್ನು ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.