ADVERTISEMENT

ಕಲಿಯೋಣ ಬನ್ನಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 19:30 IST
Last Updated 8 ಫೆಬ್ರುವರಿ 2017, 19:30 IST
ಕಲಿಯೋಣ ಬನ್ನಿ
ಕಲಿಯೋಣ ಬನ್ನಿ   

ತಂಡದ ತಂತ್ರ
ಆಧುನಿಕ ಜಗತ್ತಿನ ಹೆಚ್ಚಿನ ಎಲ್ಲಾ ವೃತ್ತಿಗಳಲ್ಲಿಯೂ ತಂಡವೊಂದರ ಸದಸ್ಯನಾಗಿ ಕೆಲಸ ಮಾಡುವ ಅಥವಾ ತಂಡವೊಂದಕ್ಕೆ ನೇತೃತ್ವ ನೀಡುವ ಅಗತ್ಯ ಎಲ್ಲರಿಗೂ ಒಂದಲ್ಲಾ ಒಂದು ಹಂತದಲ್ಲಿ ಒದಗಿಬರುತ್ತದೆ. ಮನುಷ್ಯ ಸಂಘ ಜೀವಿಯಾದಾಗಲೇ ಇಂಥದ್ದೊಂದು ಅಗತ್ಯವಿತ್ತು. ಆದರೆ ವೃತ್ತಿ ಸಂಬಂಧಿಯಾದ ತಂಡಗಳ ಒಳಗೆ ಬಹಳ ವಿಚಿತ್ರವಾದ ಬಿಕ್ಕಟ್ಟುಗಳು ಎದುರಾಗುತ್ತವೆ.

ಇವುಗಳನ್ನು ನಿವಾರಿಸಿಕೊಳ್ಳುವುದು ತಂಡದ ಸದಸ್ಯರಿಗೆ ಎಷ್ಟು ಅಗತ್ಯವೋ ಅದನ್ನು ನಿರ್ವಹಿಸುವ ನಾಯಕರಿಗೆ ಇನ್ನೂ ಹೆಚ್ಚಿನ ಅಗತ್ಯ. ಆಗ ಮಾತ್ರ ತಂಡದ ಒಬ್ಬೊಬ್ಬ ಸದಸ್ಯರು ವೈಯಕ್ತಿಕವಾಗಿ ಹಾಗೂ ಒಟ್ಟು ಒಂದು ತಂಡವಾಗಿ ಉತ್ಪಾದಕವಾಗಿರಲು ಸಾಧ್ಯವಾಗುತ್ತದೆ. ಇದನ್ನು ತಾತ್ವಿಕವಾಗಿ ಕಲ್ಪಿಸಿಕೊಳ್ಳುವುದಕ್ಕೆ ಬಹಳ ಸುಲಭ. ತಂಡವೊಂದರ ಒಳಗಿನ ಚಲನೆಗಳು ಸರಳರೇಖಾತ್ಮಕವಾಗಿ ಇರುವುದಿಲ್ಲ.

ಇದನ್ನೆಲ್ಲಾ ಹೇಗೆ ಅರಿತು ಕಾರ್ಯ ನಿರ್ವಹಿಸಬೇಕು ಎಂಬುದನ್ನು ವಿವರಿಸುವುದಕ್ಕಾಗಿಯೇ ಆಸ್ಟ್ರೇಲಿಯಾದ ಯೂನಿವರ್ಸಿಟಿ ಆಫ್ ಕ್ವೀನ್ಸ್‌ಲ್ಯಾಂಡ್ ಒಂದು ಕೋರ್ಸ್ ರೂಪಿಸಿದೆ. ತಂಡವಾಗಿ ಕೆಲಸ ಮಾಡುವುದಕ್ಕೆ ಅಗತ್ಯವಿರುವ ಪ್ರಾಯೋಗಿಕ ಮಾರ್ಗದರ್ಶಿಯೊಂದನ್ನು ಈ ಕೋರ್ಸ್ ಒದಗಿಸುತ್ತದೆ. ಇದು ಎಲ್ಲಾ ಬಗೆಯ ಕೆಲಸದಲ್ಲಿ ಇರುವವರಿಗೂ ಉಪಕಾರಿ. ಇದನ್ನು ನಮ್ಮದೇ ವೇಗದಲ್ಲಿ ಕಲಿಯಬಹುದು. ಕೋರ್ಸ್‌ಗೆ ಸೇರುವ ಆಸಕ್ತಿ ಇರುವವರು ಇಲ್ಲಿರುವ ಲಿಂಕ್ ಬಳಸಿ ನೋಂದಾಯಿಸಿಕೊಳ್ಳಬಹುದು: http://bit.ly/2jTLA7g

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.