ADVERTISEMENT

ಗೋಧಿ ಹಿಟ್ಟಿನಿಂದ ಸೌಂದರ್ಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST
ಗೋಧಿ ಹಿಟ್ಟಿನಿಂದ ಸೌಂದರ್ಯ
ಗೋಧಿ ಹಿಟ್ಟಿನಿಂದ ಸೌಂದರ್ಯ   

ಗೋಧಿ ಹಿಟ್ಟು, ಹಾಲು, ಗುಲಾಬಿ ಜಲ ಮತ್ತು ಜೇನನ್ನು ಬೆರೆಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ನೀರಿನಿಂದ ತೊಳೆಯಿರಿ. ಇದರಿಂದ ಮುಖದಲ್ಲಿನ ಎಣ್ಣೆ ಅಂಶ ನಿವಾರಣೆಯಾಗುತ್ತದೆ. ಮುಖವೂ ಕಾಂತಿಯುತವಾಗುತ್ತದೆ.

ಸ್ವಚ್ಛವಾದ ಮುಖಕ್ಕೆ ಹಾಲಿನ ಕೆನೆ ಮತ್ತು ಗೋಧಿ ಹಿಟ್ಟು, ಚಿಟಕೆ ಅರಶಿಣ ಮಿಶ್ರಣ ಮಾಡಿ ಹಚ್ಚಿ. ಒಣಗಿದ ನಂತರ ಬಿಸಿ ನೀರಿನಲ್ಲಿ ತೊಳೆಯಿರಿ. ಇದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

ಮುಖದಲ್ಲಿನ ಬೇಡವಾದ ರೋಮವನ್ನು ತೆಗೆಯಬೇಕು ಎಂದರೆ ಸಬ್ಬಕ್ಕಿಯನ್ನು ನೀರಿನಲ್ಲಿ ನೆನೆಸಿ ಪೇಸ್ಟ್‌ ಮಾಡಿಕೊಳ್ಳಿ ಇದಕ್ಕೆ ಗೋಧಿ ಹಿಟ್ಟು, ಹಾಲು ಮಿಶ್ರಣ ಮಾಡಿ ಹಚ್ಚಿ. ಒಣಗಿದ ನಂತರ ಪೀಲ್‌ಆಫ್‌ನಂತೆ ತೆಗೆಯಿರಿ. ಈ ಪೇಸ್ಟ್‌ ಒಣಗಿದಂತೆ ರೋಮಕ್ಕೂ ಅಂಟಿಕೊಂಡಿರುತ್ತದೆ. ಇದರಿಂದ ಚರ್ಮಕ್ಕೆ ಸ್ವಲ್ಪ ನೋವಾಗುತ್ತದೆ. ಈ ಒಣಗಿದ ಪೇಸ್ಟ್‌ನೊಂದಿಗೆ ರೋಮಗಳು ಬರುತ್ತವೆ. ಇದರಿಂದ ಕೂದಲು ಮುಕ್ತ ಚರ್ಮ ನಿಮ್ಮದಾಗುತ್ತದೆ.

ADVERTISEMENT

ರಾತ್ರಿ ಮಲಗುವ ಮುನ್ನ ಕಿತ್ತಲೆ ಹಣ್ಣಿನ ರಸ, ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ ಹಚ್ಚಿ, ಒಣಗಿದ ನಂತರ ತೊಳೆಯಿರಿ. ನಂತರ ಗುಲಾಬಿ ಜಲವನ್ನು ಹಚ್ಚಿ ಮಲಗಿರಿ. ಇದರಿಂದ ತ್ವಚೆ ಸ್ವಚ್ಚವಾಗಿ, ಕಪ್ಪು ಕಲೆ ನಿವಾರಣೆಯಾಗುತ್ತದೆ.

ಬಿಸಿಲಿನಿಂದ ಕಪ್ಪಾದ ಚರ್ಮವನ್ನು ತಿಳಿಗೊಳಿಸಲು ನಿಂಬೆ ರಸ ಅಥವ ಟೊಮೆಟೊ ರಸದೊಂದಿಗೆ ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ ಹಚ್ಚಿ.

ಗೋಧಿಯನ್ನು ರಾತ್ರಿ ನೆನೆಸಿ, ನಂತರ ರುಬ್ಬಿ ಗೋಧಿ ಹಾಲು ತೆಗೆದು ಕೂದಲಿಗೆ ಹಚ್ಚುವುದರಿಂದ ಕೂದಲು ಆರೋಗ್ಯ ಪೂರ್ಣವಾಗುತ್ತದೆ. ಮತ್ತು ಕೂದಲಿಗೆ ಹೊಳಪು ಹೆಚ್ಚುತ್ತದೆ.

ಗೋಧಿ ಹಾಲು ಒಂದು ಬಟ್ಟಲು, ತೆಂಗಿನ ಹಾಲು ಒಂದು ಬಟ್ಟಲು ಮಿಶ್ರಣ ಮಾಡಿ ಇದಕ್ಕೆ ನಿಂಬೆ ರಸ ಸೇರಿಸಿ ಕೂದಲಿನ ಬುಡಕ್ಕೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.