ADVERTISEMENT

ಗ್ರೀನ್‌ ಟೀ ಪ್ರಿಯರಿಗೆ ಶುಭ ಸುದ್ದಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2017, 19:30 IST
Last Updated 9 ಫೆಬ್ರುವರಿ 2017, 19:30 IST
ಗ್ರೀನ್‌ ಟೀ ಪ್ರಿಯರಿಗೆ ಶುಭ ಸುದ್ದಿ
ಗ್ರೀನ್‌ ಟೀ ಪ್ರಿಯರಿಗೆ ಶುಭ ಸುದ್ದಿ   

ಮಲ್ಟಿಪಲ್‌ ಮಿಲೋಮಾ (ಅಸ್ತಿಮಜ್ಜೆಗೆ ಸಂಬಂಧಿಸಿದ ಕ್ಯಾನ್ಸರ್‌) ಕಾಯಿಲೆ ಗುಣಪಡಿಸುವ ಅಂಶಗಳು ಗ್ರೀನ್‌ ಟೀಯಲ್ಲಿ ಇವೆ ಎಂದು ಅಧ್ಯಯನವೊಂದು ಸಾರಿ ಹೇಳಿದೆ.

ವಾಷಿಂಗ್‌ಟನ್ ವಿಶ್ವವಿದ್ಯಾಲಯ ಸಂಶೋಧಕರ ಪ್ರಕಾರ ಗ್ರೀನ್‌ ಟೀ ಎಲೆಗಳಲ್ಲಿ ಇರುವ ಫಾಲಿಫಿನಾಲ್ ಎಂಬ ಅಂಶ ಮಲ್ಟಿಪಲ್‌ ಮಿಲೋಮಾನಿಂದ  (ಅಸ್ತಿಮಜ್ಜೆಗೆ ಸಂಬಂಧಿಸಿದ ಕ್ಯಾನ್ಸರ್‌) ಬಳಲುತ್ತಿರುವ ರೋಗಿಗಳಿಗೆ ವರದಾನವಾಗಲಿದೆ.

ಮಲ್ಟಿಪಲ್‌ ಮಿಲೋಮಾ ಕಾಯಿಲೆಯಿಂದ ಬಳಲುತ್ತಿರುವ  ಒಂಬತ್ತು ರೋಗಿಗಳ ಅಸ್ತಿಮಜ್ಜೆಯ ಮಾದರಿಗಳನ್ನು ಸಂಗ್ರಹಿಸಿ ಸಂಶೋಧಕರು ಅಧ್ಯಯನ ನಡೆಸಿದರು. ಈ ಸಂದರ್ಭ ಅವುಗಳ ಮೇಲೆ ಗ್ರೀನ್‌ ಟೀಯ ಫಾಲಿಫಿನಾಲ್ ಅಂಶ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಶೋಧಕರು ಪರೀಕ್ಷಿಸಿದ್ದಾರೆ.

ಈ ಸಂದರ್ಭ ಗ್ರೀನ್‌ ಟೀಯಲ್ಲಿ ಅಸ್ತಿಮಜ್ಜೆ ಸಮಸ್ಯೆಗಳು ಗುಣ ಕಾಣಿಸುವ ಲಕ್ಷಣಗಳು ಗೋಚರಿಸಿದವು. ಆದರೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದು ತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.