ADVERTISEMENT

ಚೀನಾ ಹೋಟೆಲ್‌ನಲ್ಲಿ 3ಡಿ ಕಾಡು

​ಪ್ರಜಾವಾಣಿ ವಾರ್ತೆ
Published 27 ಜೂನ್ 2017, 19:30 IST
Last Updated 27 ಜೂನ್ 2017, 19:30 IST
ಚೀನಾ ಹೋಟೆಲ್‌ನಲ್ಲಿ 3ಡಿ ಕಾಡು
ಚೀನಾ ಹೋಟೆಲ್‌ನಲ್ಲಿ 3ಡಿ ಕಾಡು   

ಸೊಗಸಾದ ಪರಿಸರ, ಹಾರುವ ಚಿಟ್ಟೆಗಳು, ಇನ್ನೇನು ತಟ್ಟೆಯಲ್ಲಿ ವಿಭಿನ್ನ ಬಣ್ಣದ ಎಲೆಗಳು ಬೀಳುತ್ತವೆ ಎನ್ನುವ ಅನುಭವ. ಇಂತಹ ಪರಿಸರವಿರುವ ಹೋಟೆಲ್‌ನಲ್ಲಿ ಊಟ ಮಾಡುವ ಅದೃಷ್ಟ ಎಷ್ಟು ಜನರಿಗೆ ಸಿಗಲು ಸಾಧ್ಯ?

ಇಂಥದ್ದೊಂದು ರೆಸ್ಟೊರೆಂಟ್‌ ಇರುವುದು ಟೊಕಿಯೊದಲ್ಲಿ. ಇದರ ಹೆಸರು ಸಾಗಾ ಬೀಫ್‌ ರೆಸ್ಟೊರೆಂಟ್‌. ಟೀಮ್‌ ಲ್ಯಾಬ್‌ ಎಂಬ ಆರ್ಟ್‌ ಕಂಪೆನಿ ಇದರ ಒಳಾಂಗಣ ವಿನ್ಯಾಸವನ್ನು ಮಾಡಿದೆ. ಪ್ರಕೃತಿ ಮಡಿಲಿನಲ್ಲಿ ಕೂತು ತಿನ್ನುವ ಅನುಭವ ನೀಡುವ ಈ ಹೋಟೆಲ್‌ಗೆ ದಿನಕ್ಕೆ ಎಂಟು ಮಂದಿಗೆ ಮಾತ್ರವೇ ಪ್ರವೇಶ.

12 ಬಗೆಯ ಖಾದ್ಯ ವೈವಿಧ್ಯಗಳು ಇಲ್ಲಿ ದೊರಕುತ್ತದೆ. ಪ್ರತಿ ಬಾರಿ ಖಾದ್ಯವನ್ನು ಟೇಬಲ್‌ ಮೇಲೆ ಇರಿಸಿದಾಗ ಗೋಡೆ ಮತ್ತು ಟೇಬಲ್‌ ಮೇಲೆ ಮೂಡುವ ಚಿತ್ರಗಳು ಬದಲಾಗುತ್ತವೆ.

ADVERTISEMENT

ರೆಸ್ಟೊರೆಂಟ್‌ ಗ್ರಾಹಕರ ಮನಸಿನ ಭಾವನೆಗಳಿಗೆ ಸ್ಪಂದಿಸುವಂತಿರಬೇಕು. ಗ್ರಾಹಕರಿಗೆ ವಿಶಿಷ್ಟ ಅನುಭೂತಿ ನೀಡಬೇಕು ಎನ್ನುವುದು ಈ ರೆಸ್ಟೊರೆಂಟ್‌ನ ಧ್ಯೇಯವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.