ADVERTISEMENT

ಜನಪದ ಗೀತೆ ಉಳಿಸುವ ಪ್ರಯತ್ನ

ಮಂಜುನಾಥ ರಾಠೋಡ
Published 12 ಮೇ 2017, 19:30 IST
Last Updated 12 ಮೇ 2017, 19:30 IST
ಜನಪದ ಗೀತೆ ಉಳಿಸುವ ಪ್ರಯತ್ನ
ಜನಪದ ಗೀತೆ ಉಳಿಸುವ ಪ್ರಯತ್ನ   

ಮೊಬೈಲ್ ಯುಗದಲ್ಲಿ ಜನಪದ ಗೀತೆಗಳು ನಿಧಾನಕ್ಕೆ ಹಿನ್ನೆಲೆಗೆ ಸರಿಯುತ್ತಿವೆ. ಇಂಥ ಗೀತೆಗಳನ್ನು ಜೀವಂತವಾಗಿಡುವ ಪ್ರಯತ್ನ ಜನಪದ ಹಾಡುಗಳ ಕನ್ನಡ ಆ್ಯಪ್ ಮೂಲಕ ನಡೆಯುತ್ತಿದೆ.

ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ದೊರೆಯುವ ‘ಕನ್ನಡ ಜಾನಪದ’ (Kannada Janapada Songs) ಆ್ಯಪ್ ಜನಪ್ರಿಯ ಕನ್ನಡ ಜನಪದ ಹಾಡುಗಳನ್ನು ಬಳಕೆದಾರರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ.

ಆ್ಯಪ್‌ ನಲ್ಲಿ ಸುಮಾರು 70ಕ್ಕೂ ಹೆಚ್ಚು ಕನ್ನಡ ಜನಪದ ಹಾಡುಗಳು ಓದಲು ಲಭ್ಯವಿದೆ. ‘ಭಾಗ್ಯದ ಬಳೆಗಾರ’, ‘ಕೋಲು ಕೋಲಣ್ಣ’, ‘ಚೆಲ್ಲಿದರು ಮಲ್ಲಿಗೆಯ’ ರೀತಿಯ ಜನಪ್ರಿಯ ಹಾಡುಗಳ ಜೊತೆಗೆ ‘ಕರ್ರನ್ನವಳೆ’, ‘ನಡಿಸ್ಯಾರೊ ಪ್ರೀತಿ’, ‘ಸ್ವಾಮಿ ಹುಸೇನ’ ರೀತಿಯ ಹೆಚ್ಚು ಪರಿಚಿತವಲ್ಲದ ಹಾಡುಗಳ ಸಾಹಿತ್ಯ ಆ್ಯಪ್‌ನಲ್ಲಿ ಅಡಕವಾಗಿವೆ.

‘ಕರ್ಲ’ ತಂಡ ಅಭಿವೃದ್ಧಿಪಡಿಸಿರುವ ಈ ಆ್ಯಪ್ ಬಳಸಲು ಬಹಳ ಸುಲಭ. ಹೆಚ್ಚಿನ ಆಯ್ಕೆಗಳು ಇಲ್ಲ. ಅಕ್ಷರಗಳನ್ನು ಸುಲಭವಾಗಿ ಓದಬಹುದು. ಅಕ್ಷರಗಳ ಗಾತ್ರ ಹೆಚ್ಚು ಕಡಿಮೆ ಮಾಡಿಕೊಳ್ಳಲು ಆಯ್ಕೆ ನೀಡಲಾಗಿದೆ.

ಆ್ಯಪ್‌ ಬಳಸಲು ಅಂತರ್ಜಾಲ ಸಂಪರ್ಕ ಬೇಕಿಲ್ಲ, ಬಳಕೆದಾರರು ಹಾಡುಗಳನ್ನು ಸೂಚಿಸುವ ಹಾಡುಗಳನ್ನೂ ಅಳವಡಿಸಲಾಗುವುದು ಎಂದು ಆ್ಯಪ್ ಅಭಿವೃದ್ಧಿ ತಂಡ ಹೇಳಿದೆ.

ಜನಪದ ಗೀತೆಗಳನ್ನು ಕೇಳಲು ಅವಕಾಶ ನೀಡಬೇಕಿತ್ತು. ಹಾಡಿನ ಸಾಹಿತ್ಯದ ಜೊತೆಗೆ ಗೀತೆಯನ್ನು ಕೇಳುವ ಅವಕಾಶವೂ ಸಿಕ್ಕಿದ್ದರೆ ಕಲಿಯುವ ಆಸಕ್ತಿ ಇರುವವರಿಗೆ ಅನುಕೂಲವಾಗುತ್ತಿತ್ತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇಲ್ಲಿಯವರೆಗೆ ಆ್ಯಪ್ ಸುಮಾರು 10 ಸಾವಿರ ಡೌನ್‌ಲೋಡ್‌ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT