ADVERTISEMENT

ಜೇನುಗಳ ಜತೆ ಫೋಟೊ ಶೂಟ್‌!

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 19:30 IST
Last Updated 12 ನವೆಂಬರ್ 2017, 19:30 IST
ಜೇನುಗಳ ಜತೆ ಫೋಟೊ ಶೂಟ್‌!
ಜೇನುಗಳ ಜತೆ ಫೋಟೊ ಶೂಟ್‌!   

ಇದು ವಿಚಿತ್ರವಾದ ಫೋಟೊ ಶೂಟ್‌. ಸಾಮಾನ್ಯವಾಗಿ ಫೋಟೊ ಶೂಟ್ ಎಂದರೆ ಫೋಟೊ ತೆಗೆಯುವವನು ಮತ್ತು ತೆಗೆಸಿಕೊಳ್ಳುವವರು ಮುಖ್ಯವಾಗಿ ಇರುತ್ತಾರೆ. ವಾಸ್ತವಿಕವಾಗಿ ಇಲ್ಲಿ ನಡೆಯುತ್ತಿರುವುದು ಗರ್ಭಿಣಿಯ ಫೋಟೊ ಶೂಟ್. ಇಲ್ಲಿ ಒಬ್ಬ ವಿಶೇಷ ಅತಿಥಿ ಇದ್ದಾರೆ. ಅವರೇ ಈ ಶೂಟ್‌ನ ಪ್ರಮುಖ ಆಕರ್ಷಣೆ. ಅವರೇ ಜೇನುನೊಣಗಳು!

ಈ ಫೋಟೊ ಶೂಟ್‌ನ ಹೆಸರು ‘ಬೆಲ್ಲಿ ಬೀ’ ಎಮಿಲಿ ಮುಲ್ಲರ್, 33 ವರ್ಷದ ಈ ಮಹಿಳೆ ಈ ಸಾಹಸ ಮಾಡಿದವರು. ಇವರು ವೃತ್ತಿಪರ ಜೇನು ಕೃಷಿಕರು. ಆದ್ದರಿಂದಲೇ ಇವರಿಗೆ ಜೇನು ನೊಣಗಳ ಗುಣಗಳು ತಿಳಿದಿವೆ. ‘Mueller Honey Bee’ ಎಂಬ ಕಂಪೆನಿಯನ್ನೂ ನಡೆಸುತ್ತಿದ್ದಾರೆ.

ಈ ರೀತಿಯ ಫೋಟೊ ಶೂಟ್‌ ಮಾಡಿಸಿಕೊಳ್ಳುವ ಕಾರಣ ಕೇಳಿದರೆ, ‘ಜೇನು ನೊಣಗಳು ಬದುಕು ಮತ್ತು ಸಾವು ಎರಡನ್ನೂ ಪ್ರತಿನಿಧಿಸುತ್ತವೆ. ಈ ಹಿಂದೆ ಮೂರು ಬಾರಿ ಗರ್ಭಪಾತವಾಗಿತ್ತು. ನಾಲ್ಕನೆಯ ಬಾರಿಗೆ ನಾನು ಗರ್ಭ ಧರಿಸಿರುವ ಕಾರಣ ಈ ಫೋಟೊ ಶೂಟ್‌ ನನ್ನ ಆ ಮೂರು ಮಕ್ಕಳಿಗಾಗಿ’.

ADVERTISEMENT

ಈ ಶೂಟ್‌ ನನಗೆ ಆಧ್ಯಾತ್ಮಿಕ ಅನುಭವವನ್ನು ನೀಡಿತು. ಇದರ ಜೊತೆಯಲ್ಲಿ ಜೇನು ನೊಣಗಳ ಸಂರಕ್ಷಣೆಯ ಸಣ್ಣ ಪ್ರಯತ್ನವೂ ಆಗಿದೆ ಎನ್ನುತ್ತಾರೆ ಎಮಿಲಿ. ಅಂದಹಾಗೆ, ಈ ಶೂಟ್‌ ಮಾಡಿದವರು ಕೆನ್‌ಡ್ರಾ ಡಮಿಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.