ADVERTISEMENT

ಟಿಟಾನಿಯಂಗೆ ರೆಡ್ ಡಾಟ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 19:30 IST
Last Updated 25 ಜುಲೈ 2014, 19:30 IST
ಟಿಟಾನಿಯಂಗೆ ರೆಡ್ ಡಾಟ್ ಪ್ರಶಸ್ತಿ
ಟಿಟಾನಿಯಂಗೆ ರೆಡ್ ಡಾಟ್ ಪ್ರಶಸ್ತಿ   

ಎಂ.ಜಿ.ರಸ್ತೆಯಲ್ಲಿರುವ ಟೈಟಾನ್‌ ಮಳಿಗೆಯಲ್ಲಿ ಗುರುವಾರ (ಜುಲೈ 24) ಹಬ್ಬದ ಸಂಭ್ರಮ. ಹೊಸ ಹೊಸ ವಿನ್ಯಾಸದ ವಾಚ್‌ಗಳು, ಕಟ್ಟಿದ ಬಣ್ಣದ ಬಲೂನ್‌ಗಳು ಯಾವುದೋ ತೃಪ್ತಿಯಿಂದ ಬೀಗುತ್ತಿದ್ದಂತೆ ಕಾಣುತ್ತಿದ್ದವು. ಇದಕ್ಕೆ ಕಾರಣ ‘ರೆಡ್‌ ಡಾಟ್’ ಪ್ರಶಸ್ತಿ.

ಟೈಟಾನ್ ಕಂಪೆನಿಯ ಟಿಟಾನಿಯಂ ಎಡ್ಜ್ ಕೈಗಡಿಯಾರ 2ನೇ ವರ್ಷ ರೆಡ್‌ ಡಾಟ್ ಪ್ರಶಸ್ತಿ ದಕ್ಕಿಸಿಕೊಂಡಿದೆ. ಬೇರೆ ಬೇರೆ ದೇಶಗಳಿಂದ ಉತ್ಪಾದಕರು, ವಿನ್ಯಾಸಗಾರರು ಮತ್ತು ಕಲಾವಿದರು ತಮ್ಮ ಉತ್ಪನ್ನ ಹಾಗೂ ವಿನ್ಯಾಸದೊಂದಿಗೆ ಈ ವರ್ಷ ರೆಡ್‌ ಡಾಟ್‌ಗೆ ಪ್ರವೇಶಿಸಿದ್ದರು. ವಿನ್ಯಾಸ ಮತ್ತು ಉತ್ತಮ ಗುಣಮಟ್ಟವನ್ನು ಆಧರಿಸಿ ಟಿಟಾನಿಯಂ ಎಡ್ಜ್ ಈ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ. 

‘ಟೈಟಾನ್ ವಿನ್ಯಾಸ ವಿಭಾಗಕ್ಕೆ ಸತತ ಎರಡನೇ ವರ್ಷ ರೆಡ್‌ ಡಾಟ್ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ. ಟಿಟಾನಿಯಂ ಎಡ್ಜ್ ಒಂದು ಅತ್ಯುತ್ತಮ ಉತ್ಪನ್ನವೆಂದು ಗುರುತಿಸಿರುವುದು ನಮಗೆಲ್ಲಾ ಹೆಮ್ಮೆ ಉಂಟು ಮಾಡಿದೆ’ ಎನ್ನುತ್ತಾರೆ ಮಳಿಗೆಯ ಕೈಗಡಿಯಾರ ಮತ್ತು ಸರಕು ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಜಿ.ರಘುನಾಥ್

‘ಇದು ಸೂಕ್ಷ್ಮವಾದ ಕೈಗಡಿಯಾರ.  ಹೆಚ್ಚು ದಪ್ಪ ಕೂಡ ಇಲ್ಲ. ಜತೆಗೆ 34 ಗ್ರಾಂ ತೂಕ ಹೊಂದಿದೆ’ ಎನ್ನುವುದು ವಿನ್ಯಾಸ ಮತ್ತು ಸರಕು ವಿಭಾಗದ ಮುಖ್ಯಸ್ಥ ಸನಿಲ್ ಧಾದ್ವಲ್ ವಿವರಣೆ.

ರೆಡ್‌ಡಾಟ್ ಪ್ರಶಸ್ತಿ ವಿಜೇತ ಟಿಟಾನಿಯಂ ಎಡ್ಜ್ ಕೈಗಡಿಯಾರ ಎಲ್ಲ ವರ್ಲ್ಡ್‌ ಆಫ್ ಟೈಟಾನ್ ಮಳಿಗೆಗಳಲ್ಲಿ ಲಭ್ಯ. ಬೆಲೆ ₨ 17, 995.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.