ADVERTISEMENT

ಟಿ–ಶರ್ಟ್‌ ಮೂಲಕ ಮತದಾನದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 19:30 IST
Last Updated 7 ಏಪ್ರಿಲ್ 2014, 19:30 IST
ಟಿ–ಶರ್ಟ್‌ ಮೂಲಕ ಮತದಾನದ ಜಾಗೃತಿ
ಟಿ–ಶರ್ಟ್‌ ಮೂಲಕ ಮತದಾನದ ಜಾಗೃತಿ   

ಮತದಾನದ ಹಕ್ಕು ಚಲಾಯಿಸುವಂತೆ ಪ್ರಜ್ಞಾವಂತರು ಪ್ರತಿಯೊಬ್ಬ ನಾಗರಿಕರನ್ನೂ ಹುರಿದುಂಬಿಸುವ ಕೆಲಸವನ್ನು ರಾಜಕೀಯೇತರ ವ್ಯಕ್ತಿಗಳು, ಸಂಘಟನೆಗಳು ಚುನಾವಣಾ ದಿನಾಂಕ ಪ್ರಕಟವಾದಾಗಿನಿಂದಲೂ  ಮಾಡುತ್ತಿವೆ. ಅಂತಹ ಉಮೇದನ್ನು ಇದೀಗ ಬಹು ಬ್ರಾಂಡ್‌ ವಸ್ತ್ರಗಳ ಮಳಿಗೆ ಶಾಪರ್ಸ್‌ ಸ್ಟಾಪ್‌ ವ್ಯಕ್ತಪಡಿಸಿರುವುದು ವಿಶೇಷ.

ಶಾಪರ್ಸ್‌ ಸ್ಟಾಪ್‌ ಬಿಡುಗಡೆ ಮಾಡಿರುವ ಹೊಸ ಬಗೆಯ ವಿನ್ಯಾಸದ ಟಿ–ಶರ್ಟ್‌ಗಳಲ್ಲಿ ‘ಮತದಾನದ ಮಹತ್ವ’, ‘ಭ್ರಷ್ಟಾಚಾರ ನಿವಾರಣೆಗೆ ಉತ್ತಮ ಅಭ್ಯರ್ಥಿಗಳ ಆಯ್ಕೆಯೇ ಉತ್ತಮ ದಾರಿ’, ‘ಮತದಾನ ನಿಮ್ಮ ಹಕ್ಕು’ ಎಂಬಿತ್ಯಾದಿ ಒಕ್ಕಣೆಗಳನ್ನು ಕಾಣಬಹುದು. ಕಣ್ಸೆಳೆಯುವ ವಿನ್ಯಾಸ ಹಾಗೂ ಗ್ರಾಫಿಕ್ಸ್‌ ಬಳಸಿರುವ ಈ ಟಿ–ಶರ್ಟ್‌ಗಳು ಕಪ್ಪು, ಕೆಂಪು, ಕಡು ನೀಲಿ, ಬಿಳಿ ಹಾಗೂ ಬೂದಿ ಬಣ್ಣಗಳಲ್ಲಿ ಲಭ್ಯ. ಆರಂಭಿಕ ಬೆಲೆ ೩೪೯ ರೂಪಾಯಿ. ಎರಡು ಟಿ–ಶರ್ಟ್ ಖರೀದಿಗೆ ಒಂದು ಉಚಿತ ಎಂಬ ಕೊಡುಗೆಯೂ ಇದ್ದು, ಮೇ 15ರವರೆಗೆ ಮಾತ್ರ ಈ ಸಂಗ್ರಹ ಮಾರುಕಟ್ಟೆಯಲ್ಲಿರುತ್ತದೆ ಎಂದು ಶಾಪರ್ಸ್‌ ಸ್ಟಾಪ್‌ ಹೇಳಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಹೊಸದೊಂದು ಗ್ರಾಹಕ ವರ್ಗವನ್ನು ತನ್ನೆಡೆ ಸೆಳೆಯುವ ಮಾರುಕಟ್ಟೆ ತಂತ್ರ ಇದಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.