ADVERTISEMENT

ತಾಜಾ ಗಾಳಿಗೆ ಟ್ರೀಪೆಕ್ಸ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 19:30 IST
Last Updated 15 ನವೆಂಬರ್ 2017, 19:30 IST
ತಾಜಾ ಗಾಳಿಗೆ ಟ್ರೀಪೆಕ್ಸ್
ತಾಜಾ ಗಾಳಿಗೆ ಟ್ರೀಪೆಕ್ಸ್   

ಮಾಲಿನ್ಯದ ವ್ಯಾಪ್ತಿ ವಿಸ್ತರಿಸುತ್ತಲೇ ಇದೆ. ನಗರ ಪ್ರದೇಶದಲ್ಲಂತೂ ವಾಯುಮಾಲಿನ್ಯದ ಕಾರುಬಾರು ಅತಿಯೇ ಎನ್ನಿಸುವಷ್ಟು ಆಗಿದೆ. ಮುಂದೊಂದು ದಿನ ಉಸಿರಾಡಲೂ ಹರಸಾಹಸ ಪಡಬೇಕಾದ ಪರಿಸ್ಥಿತಿ ಬರುವ ಸಾಧ್ಯತೆಯ ಕುರಿತು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದೇ ಎಚ್ಚರಿಕೆಯನ್ನು ಮುಂದಿಟ್ಟುಕೊಂಡು ಹೊಸ ಉತ್ಪನ್ನವೊಂದನ್ನು ವಿನ್ಯಾಸಗೊಳಿಸಲಾಗಿದೆ, ಅದೇ ಟ್ರೀಪೆಕ್ಸ್.

ಮಲಿನ ಗಾಳಿಯನ್ನು ಶೋಧಿಸಿ ಕೇವಲ ತಾಜಾ ಗಾಳಿಯನ್ನು ಉಸಿರಾಡಲು ನೀಡುವಂತಿರುವ ಮಾದರಿಯಿದು. ಫ್ರೆಶ್ ಏರ್ ಮಾಸ್ಕ್‌, ಪೋರ್ಟೆಬಲ್ ಆಕ್ಸಿಜನ್ ಕಂಟೇನರ್‌ಗಳು... ಹೀಗೆ ಉಸಿರಾಟದ ಸಾಧನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹಲವಿವೆ. ಆದರೆ ಸಾಧನವನ್ನು ಇನ್ನಷ್ಟು ಸ್ಮಾರ್ಟ್ ಆಗಿಸುವ ನಿಟ್ಟಿನಲ್ಲಿ ಟ್ರೀಪೆಕ್ಸ್ ಎಂಬ ಪಾಕೆಟ್ ಡಿವೈಸ್ ತರಲಾಗಿದೆ.

ಮಲಿನಗೊಂಡ ಗಾಳಿಯನ್ನು ಸೋಸಲು ಕ್ಯಾಟ್ರಿಜ್ ಇದೆ. ಹೊಗೆ, ಲೋಹ, ಇನ್ನಿತರ ಹಾನಿಕಾರಕ ಅಂಶಗಳನ್ನು ಮಾಡ್ಯೂಲ್‌ಗಳು ಸೋಸುತ್ತವೆ. ಮರದಿಂದ ತೆಗೆದ ಡಿಎನ್‌ಎ ಯನ್ನು ಕ್ಯಾಟ್ರಿಜ್‌ಗೆ ಅಳವಡಿಸಲಾಗಿದೆ. ಸಾವಿರಾರು ಎಲೆಗಳು ಸೇರಿ ನೀಡುವ ಆಮ್ಲಜನಕ ಪ್ರಮಾಣವನ್ನು ಈ ಗ್ಯಾಜೆಟ್‌ ನೀಡಬಲ್ಲದಂತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.