ADVERTISEMENT

ದೊಡ್ಡ ಜಲಮಾರ್ಗ

ಮಂಜುಶ್ರೀ ಎಂ.ಕಡಕೋಳ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST

ಜಗತ್ತಿನ ಅತಿ ದೊಡ್ಡ ಒಳನಾಡು ಜಲಸಾರಿಗೆಗಳ ಪೈಕೆ ಉತ್ತರ ಅಮೆರಿಕದ ಸೇಂಟ್ ಲಾರೆನ್ಸ್‌ ಜಲಮಾರ್ಗ ನಾಲ್ಕನೇ ಸ್ಥಾನದಲ್ಲಿದೆ.

ಈ  ಜಲಮಾರ್ಗ ಉತ್ತರ ಅಮೆರಿಕದ ಪ್ರಮುಖ ಒಳನಾಡು ಜಲಸಾರಿಗೆಯಾಗಿದ್ದು, ಅಮೆರಿಕದ ಮತ್ತು ಕೆನಡಾ ದೇಶಗಳ ಆಧಾರಸ್ತಂಭವಾಗಿದೆ. ಫೆಸಿಫಿಕ್ ಮಹಾ ಸಾಗರದಿಂದ ಒಳನಾಡಿಗೆ ಜಲಮಾರ್ಗ ಕಲ್ಪಿಸುವಲ್ಲಿ ಇದು ಮುಖ್ಯವಾದದ್ದು. ಈ ಜಲಮಾರ್ಗದಲ್ಲಿ ದುಲತ್ ಮತ್ತು ಬಫೆಲೊ ಎನ್ನುವ ಎರಡು ಬಂದರುಗಳು ಕೂಡಾ ಇರುವುದು ವಿಶೇಷ.

ಈ ಜಲಮಾರ್ಗದಲ್ಲಿ ಸುಮಾರು 450 ಕಿ.ಮೀ.ಗಳ ದೂರದವರೆಗೆ ದೊಡ್ಡ ಹಡಗುಗಳು ಸುಲಭವಾಗಿ ಸಂಚರಿಬಹುದು. ಅಷ್ಟೇ ಅಲ್ಲ ಈ ಮಾರ್ಗಮಧ್ಯೆ ಉತ್ತಮ ಅಮೆರಿಕ ಮತ್ತು ಕೆನಡಾ ದೇಶಗಳ ಶೇ 45ರಷ್ಟು ವ್ಯಾಪಾರವೂ ನಡೆಯುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.