ADVERTISEMENT

ನಯನತಾರಾ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ನಯನತಾರಾ
ನಯನತಾರಾ   

ಡಯಾನಾ ಮರಿಯಂ ಕುರಿಯನ್ ಹಾಗೆಂದರೆ ಬಹುತೇಕರಿಗೆ ಯಾರೆಂದು ಅರ್ಥವಾಗದು. ನಯನ ತಾರಾ ಅಂದರೆ ಸಾಕು ಸಿನಿರಸಿಕರ ಕಣ್ಣರಳುತ್ತವೆ. ದಕ್ಷಿಣ ಭಾರತದ ಖ್ಯಾತ ನಟಿ ನಯನ ತಾರಾ ಅವರು ಹುಟ್ಟಿದ ದಿನವಿಂದು (ನವೆಂಬರ್ 18, 1984).

‘ಮನಸ್ಸಿನಕ್ಕರೆ’ ಎನ್ನುವ ಮಲಯಾಳಂ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನಯನ ಅಲ್ಪಾವಧಿಯಲ್ಲೇ ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ತಾರೆಯಾಗಿ ಗುರುತಿಸಿಕೊಂಡವರು.

ತಮ್ಮ ಪಾತ್ರಗಳ ವಿಶಿಷ್ಟ ಆಯ್ಕೆಗಾಗಿಯೂ ನಯನ ಅಭಿಮಾನಿಗಳ ಮನದಲ್ಲಿ ಸ್ಥಾನ ಗಳಿಸಿಕೊಂಡ ನಟಿ. ಕನ್ನಡದಲ್ಲಿ ನಟ ಉಪೇಂದ್ರ ಜತೆ ‘ಸೂಪರ್’ ಸಿನಿಮಾದಲ್ಲಿ ನಟಿಸಿರುವ ನಯನ ತಮ್ಮ ಅಭಿನಯ ಪ್ರತಿಭೆ ಮತ್ತು ಗ್ಲ್ಯಾಮರ್ ಕಾರಣಕ್ಕಾಗಿ ಚಿತ್ರಪ್ರೇಮಿಗಳ ಮನ ಗೆದ್ದವರು.

ADVERTISEMENT

ಬೆಂಗಳೂರಿನಲ್ಲಿ ಹುಟ್ಟಿದ ನಯನ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಇಂಗ್ಲಿಷ್ ಸಾಹಿತ್ಯ ಪದವೀಧರೆಯಾಗಿರುವ ಅವರು, ನಟ ಸಿಂಬು ಜತೆಗಿನ ಲವ್ ಅಫೇರ್ ಕಾರಣಕ್ಕಾಗಿ ವಿವಾದಕ್ಕೊಳಗಾಗಿದ್ದರು.

ನಂತರ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಮದುವೆಯಾಗುವುದಾಗಿ ನಯನ, ಸುದ್ದಿಯಾಗಿದ್ದರು. ಆದರೆ, ಪ್ರಭುದೇವ ಪತ್ನಿ ಲತಾ ಕೋರ್ಟ್ ಮೆಟ್ಟಿಲೇರಿದ್ದರಿಂದ ಮದುವೆ ಮುರಿದುಬಿತ್ತು.

ಇತ್ತೀಚೆಗೆ ನಿರ್ದೇಶಕ ವಿಘ್ನೇಶ್ ಶಿವನ್ ಜತೆಗಿರುವ ನಯನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.