ADVERTISEMENT

ನಾಯಿಗಳ ಹೋಟೆಲ್‌!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 11:14 IST
Last Updated 18 ಏಪ್ರಿಲ್ 2017, 11:14 IST
ನಾಯಿಗಳ ಹೋಟೆಲ್‌!
ನಾಯಿಗಳ ಹೋಟೆಲ್‌!   

ನಾಯಿ ಪ್ರೇಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಅವುಗಳಿಗೆ ನೀಡುವ ಸೌಕರ್ಯವೂ ವಿಸ್ತಾರವಾಗುತ್ತಿದೆ. ಈಗ ಅವುಗಳಿಗಾಗಿಯೇ ಒಂದು ಹೋಟೆಲ್‌ ಕೂಡ ಪ್ರಾರಂಭವಾಗಿದೆ.

ಅಂದಹಾಗೆ ಈ ಹೋಟೆಲ್‌ ಇರುವುದು ಅಮೆರಿಕದಲ್ಲಿ. ಡೆನ್ನಿಸ್‌ ಸುಲಿವನ್‌ ಮತ್ತು ಫ್ರಾನ್ಸೆನ್ಸ್‌ ಕಾಕ್ಲಿನ್‌ ಇದರ ವಿನ್ಯಾಸಕರು. ಹೋಟೆಲ್‌ನ ಎತ್ತರ ಮೂವತ್ತು ಅಡಿ.

ನಾಯಿಯ ಆಕಾರದಲ್ಲಿಯೇ ಇರುವ ಈ ಹೋಟೆಲ್‌ ಅದ್ಭುತವಾಗಿದೆ. ಇದೇನು ನಾಯಿಯೋ ಅಥವಾ ಕಟ್ಟಡವೋ ಎನ್ನುವ ಅನುಮಾನವೂ ಬರುತ್ತದೆ. ಅಷ್ಟು ಸೊಗಸಾಗಿದೆ ಇದರ ಹೊರಾಂಗಣ ವಿನ್ಯಾಸ.

ಒಳಗೆ ಅಡಿಯಿಟ್ಟರಂತೂ ಮತ್ತೆ ಮತ್ತೆ ಕಣ್ತುಂಬಿಕೊಳ್ಳಬೇಕೆಂಬ ಮರದಿಂದ ಮಾಡಿದ ನಾಯಿಗಳ ಕಲಾಕೃತಿಗಳು ರಾರಾಜಿಸುತ್ತವೆ. ಜೊತೆಗೆ ಎರಡು ಬೆಡ್‌ ರೂಂಗಳೂ ಇವೆ! ನಾಯಿಗಳನ್ನು ಇಲ್ಲಿಗೆ ಕರೆದುಕೊಂಡು ಹೋಗಬಹುದು. ಅಂದಹಾಗೆ ಇಲ್ಲಿ ಊಟ ದೊರಕುವುದಿಲ್ಲ. ಬೆಳಗ್ಗಿನ ಉಪಹಾರ ಮಾತ್ರವೇ ಸಿಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.