ADVERTISEMENT

ನೀರಿನಾ ಅಳದ ಮಾರ್ಗ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 19:30 IST
Last Updated 10 ಸೆಪ್ಟೆಂಬರ್ 2017, 19:30 IST
ನೀರಿನಾ ಅಳದ ಮಾರ್ಗ
ನೀರಿನಾ ಅಳದ ಮಾರ್ಗ   

ನೀರಿನ ಮೇಲೆ 8 ಕಿ.ಮೀ. ಮತ್ತು ನೀರಿನ ಒಳಗೆ 4 ಕಿ.ಮೀ. ಇರುವ ಒರೆಸುಂದರ್‌ ಮಾರ್ಗ ವಿಶಿಷ್ಟ ವಿನ್ಯಾಸದಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಸ್ವೀಡನ್‌ನಿಂದ ಡೆನ್ಮಾರ್ಕ್‌ಗೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಕೃತಕ ದ್ವೀಪ ಪೆಬರ್‌ಹಾಲ್ಮ್‌ ಮಾರ್ಗವಾಗಿ ಡ್ರಾಗ್ಡೆನ್‌ ಟನಲ್‌ ಮೂಲಕ ಡೆನ್ಮಾರ್ಕ್‌ನ ಅಮಾಗರ್‌ ದ್ವೀಪ ಸೇರುತ್ತದೆ.

ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಉತ್ತಮ ಗುಣಮಟ್ಟದ ರಸ್ತೆ ಇದೆ. ಅದರ ಜತೆಗೆ ರೈಲು ಹಳಿಯೂ ಇರುವುದು ವಿಶೇಷ. ವಾಹನ ಮತ್ತು ರೈಲು ಓಡಾಟ ಸಾಧ್ಯವಿರುವ ವಿಶ್ವದ ಅತಿ ಉದ್ದದ ಸೇತುವೆ ಎಂಬ ಶ್ರೇಯವೂ ಇದರದು.

ADVERTISEMENT

ದ್ವೀಪದ ಹತ್ತಿರದಲ್ಲೇ ಕೋಪನ್‌ಹೇಗನ್‌ ವಿಮಾನ ನಿಲ್ದಾಣ ಇದೆ. ಸೇತುವೆಯಿಂದ ವಿಮಾನ ಸಂಚಾರಕ್ಕೆ ತೊಂದರೆಯಾದೀತು ಎಂಬ ಮುಂದಾಲೋಚನೆ ಮತ್ತು ಹಡಗು ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಕಾಳಜಿಯಿಂದ ಎಂಜಿನಿಯರ್‌ಗಳು ಸೇತುವೆಯನ್ನು ನೀರಿನಾಳಕ್ಕೆ ಇಳಿಸುವ ಯೋಜನೆ ರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.