ADVERTISEMENT

ಪಿಚ್ಚರ್ ನೋಡಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2017, 19:30 IST
Last Updated 22 ಫೆಬ್ರುವರಿ 2017, 19:30 IST
ಪಿಚ್ಚರ್ ನೋಡಿ
ಪಿಚ್ಚರ್ ನೋಡಿ   
ಲೂಸಿಯಾ
2013ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ‘ಲೂಸಿಯಾ’. ಇದು ನಿರ್ದೇಶಕ ಪವನ್‌ ಕುಮಾರ್‌ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿರುವ ಚಿತ್ರವೂ ಹೌದು.  
 
ಎರಡು ಭಿನ್ನ ಟ್ರ್ಯಾಕ್‌ಗಳಲ್ಲಿ ಈ ಸಿನಿಮಾ ವಿಸ್ತರಿಸಿಕೊಳ್ಳುತ್ತದೆ. ಒಬ್ಬ ಸೂಪರ್‌ ಸ್ಟಾರ್‌, ಮತ್ತೊಬ್ಬ ಚಿತ್ರಮಂದಿರದಲ್ಲಿ ಟಾರ್ಚ್‌ ಬಿಡುವ ಹುಡುಗ. ‘ಲೂಸಿಯಾ’ ಎಂಬ ಮಾತ್ರೆ ಸೇವಿಸಿ ಕನಸಿನ ಲೋಕಕ್ಕೆ ತೆರಳುವ ಮನುಷ್ಯ ತಾನು ಏನಾಗಬೇಕು ಎಂದು ಬಯಸುತ್ತಾನೆಯೋ ಅದೇ ರೀತಿ ಆಗುವ ಅನುಭೂತಿ ಪಡೆದುಕೊಳ್ಳುತ್ತಾನೆ.
 
ಕನಸು ಮತ್ತು ವಾಸ್ತವ ಎರಡನ್ನೂ ಸಂಕೀರ್ಣವಾಗಿ ಹೆಣೆದು ಯಾವುದು ಸತ್ಯ ಯಾವುದು ಮಿಥ್ಯೆ ಎಂಬ ಅಯೋಮಯ ಭಾವದಲ್ಲಿಯೇ ಇಡೀ ಚಿತ್ರ ನಡೆಯುತ್ತದೆ. ಕನ್ನಡ ಚಿತ್ರರಂಗಕ್ಕೆ ‘ಕ್ರೌಡ್‌ ಫಂಡಿಂಗ್’ನ ಸಾಧ್ಯತೆಯನ್ನು ಪರಿಚಯಿಸಿದ ಸಿನಿಮಾ ಇದು. ಹಾಗೆಯೇ ನೀನಾಸಮ್‌ ಸತೀಶ್‌, ಶ್ರುತಿ ಹರಿಹರನ್‌ ಅವರ ವೃತ್ತಿಜೀವನಕ್ಕೆ ತಿರುವು ನೀಡಿದ್ದೂ ಇದೇ ಸಿನಿಮಾ.
 
ಪೂರ್ಣಚಂದ್ರ ತೇಜಸ್ವಿ  ಸಂಗೀತ, ಸಿದ್ಧಾರ್ಥ್‌ ನೂನಿ ಛಾಯಾಗ್ರಹಣ, ಸನತ್‌–ಸುರೇಶ್‌ ಸಂಕಲನ ಈ ಚಿತ್ರಕ್ಕಿದೆ. ಲಂಡನ್‌ ಇಂಡಿಯನ್‌ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಯನ್ನೂ ಬಾಚಿಕೊಂಡಿರುವ ಈ ಸಿನಿಮಾವನ್ನು ಯೂ ಟ್ಯೂಬ್‌ನಲ್ಲಿ goo.gl/qAOvrv ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.