ADVERTISEMENT

ಫ್ಯಾಷನ್ ಜಗತ್ತಿನ ಅನಾವರಣ

ದಿ ಗ್ರೇಟ್ ಗರುಡಾ ಶಾಪಿಂಗ್ ಉತ್ಸವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2014, 19:30 IST
Last Updated 4 ಡಿಸೆಂಬರ್ 2014, 19:30 IST

ಫ್ಯಾಷನ್ ಜಗತ್ತಿಗೆ ವಯೋಮಾನದ ಹಂಗಿಲ್ಲ. ಆಯ್ಕೆ ಮತ್ತು ಬಯಕೆಯ ವಿಷಯ ಬಂದಾಗ ಪ್ರತಿಯೊಬ್ಬರಿಗೂ ವಯೋಮಿತಿಯ ಹಂಗು ತೊರೆದು ಸಂಭ್ರಮಿಸುವ ಮನಸ್ಸು ಇದ್ದೇ ಇರುತ್ತದೆ. ಅಂತಹ ಫ್ಯಾಷನ್ ಪ್ರಿಯರಿಗೆ ಸೂಕ್ತ ತಾಣ ನಗರದ ಗರುಡಾ ಮಾಲ್.
ಮಾಲ್ ಇದೀಗ ನೂತನ ಫ್ಯಾಷನ್ ತಾಣವಾಗಿ ಮರುಹುಟ್ಟು ಪಡೆದಿದೆ. ‘ದಿ ಗ್ರೇಟ್ ಗರುಡಾ ಶಾಪಿಂಗ್ ಫೆಸ್ಟ್ ೨೦೧೪’ ಮತ್ತೊಮ್ಮೆ ಆರಂಭವಾಗುವ ಮೂಲಕ ಫ್ಯಾಷನ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.

‘ಎವೆರಿಥಿಂಗ್ ಯು ಡಿಸೈರ್’ ಎನ್ನುವುದು ಈ ಬಾರಿಯ ಶಾಪಿಂಗ್ ಫೆಸ್ಟ್‌ನ ಘೋಷಣೆ. ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ಜತಲಿಖಾ ಮಲ್ಹೋತ್ರಾ ಅವರ ಮೋಹಕ ನಡಿಗೆಯ ಮೂಲಕ ಆರಂಭವಾದ ಉತ್ಸವ ಇದೀಗ ನಗರದ ಎಲ್ಲಾ ವಯೋಮಾನದ ಮಹಿಳೆಯರ ಮನ ಗೆದ್ದಿದೆ.

ಜನವರಿ ೧ರವರೆಗೆ ನಡೆಯಲಿರುವ ‘ದಿ ಗ್ರೇಟ್ ಗರುಡಾ ಫೆಸ್ಟ್‌’ನಲ್ಲಿ ಫ್ಯಾಷನ್‌ಗೆ ಸಂಬಂಧಿಸಿದಂತೆ ಗ್ರಾಹಕರು ಬಯಸುವ ಎಲ್ಲಾ ಪರಿಕರಗಳು ಲಭ್ಯ. ಪ್ಯಾರಿಸ್, ಲಂಡನ್, ನ್ಯೂಯಾರ್ಕ್ ಸೇರಿದಂತೆ ಜಗತ್ತಿನ ಎಲ್ಲಾ ಫ್ಯಾಷನ್ ಬ್ರಾಂಡ್‌ಗಳು ಈಗ ಒಂದೇ ಸೂರಿನಡಿ ಸಿಗುತ್ತಿವೆ. ಉತ್ಸವಕ್ಕೆ ಕಳೆ ಕಟ್ಟಲು ಪ್ಯಾರಿಸ್‌ನ ಐಫೆಲ್ ಟವರ್, ಲಂಡನ್ ಬ್ರಿಡ್ಜ್, ನ್ಯೂಯಾರ್ಕ್‌ನ ಹಾಲಿವುಡ್‌ನ ಮರ್ಲಿನ್ ಮನ್ರೋ ಹಾಗೂ ಮಿಲನ್‌ನ ದೊಡ್ಡ ಶೂನ ಪ್ರತಿಕೃತಿಗಳು ಇಲ್ಲಿ ಕಳೆ ಕಟ್ಟಿವೆ.

ಫಾರೆವೆರ್ ೨೧, ಆಲ್ಡೊ, ಪ್ರಮೋದ್, ಇಂಗೋಲ್ಟ್, ಕಾಲ್ ಇಟ್, ಸ್ಪ್ರಿಂಗ್, ಫಾರೆವೆರ್ ನ್ಯೂ ಸೇರಿದಂತೆ ಹತ್ತು ಹಲವು ಪ್ರಮುಖ ಬ್ರಾಂಡ್‌ಗಳು ಗರುಡಾ ಮಾಲ್‌ನಲ್ಲಿ ಲಭ್ಯ ಇವೆ. ಸಾಂಪ್ರದಾಯಿಕ ಸಂಗ್ರಹದಿಂದ ಹಿಡಿದು ಆಧುನಿಕ, ಸಮಕಾಲೀನ, ಟ್ರೆಂಡಿ ಉತ್ಪನ್ನಗಳು, ವಸ್ತುಗಳನ್ನು ಇಲ್ಲಿ ಪಡೆಯಬಹುದು. ಫ್ಯಾಷನ್ ಪ್ರಿಯರ ಬಯಕೆ ತಣಿಸುವ ಪ್ರತಿಯೊಂದು ವಸ್ತು ಇಲ್ಲಿ ಸಿಗುತ್ತದೆ.

ಅಲ್ಲದೇ, ವಾರಾಂತ್ಯದಲ್ಲಿ ಬಹುಮಾನ ಗೆಲ್ಲುವ ಅವಕಾಶವೂ ಗ್ರಾಹಕರಿಗಿದೆ. ಶಾಪಿಂಗ್ ಅನುಭೂತಿಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿಯನ್ನೂ ಸವಿಯಬಹುದು. ಗರುಡಾ ಮಾಲ್‌ನಲ್ಲಿ ಶಾಪಿಂಗ್ ಮಾಡುವ ಅದೃಷ್ಟಶಾಲಿಗೆ ₨ 1 ಲಕ್ಷ ಬಹುಮಾನ ಸಿಗಲಿದೆ. ಬಂಪರ್ ಬಹುಮಾನ ಮರ್ಸಿಡೀಸ್ ಬೆಂಜ್ ಎ ಕ್ಲಾಸ್ ಕಾರು ಇದೆ. ಇದು ಶಾಪಿಂಗ್‌ನ ಕಿಕ್ಕನ್ನು ಮತ್ತಷ್ಟು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.