ADVERTISEMENT

ಬಿಗ್‌ಬಿ ‘ಸಿಲ್‌ಸಿಲಾ’ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

“ಯೇ ಕಹಾಂ... ಆಗಯೇ ಹಂ’ ಲತಾ ಮಂಗೇಶ್ಕರ್‌ ಹಾಡು ನೆನಪಾದರೆ ಸಾಕು, ಚುಮುಚುಮು ಚಳಿಯಲ್ಲಿ ಮಾದಕ ಚೆಲುವೆ ರೇಖಾ ಜೊತೆಗೆ ಅಮಿತಾಭ್‌ ಎಲ್ಲರೂ ಒಟ್ಟೊಟ್ಟಾಗಿ ನೆನಪಾಗುತ್ತಾರೆ. ಎಂದೂ ಮುಗಿಯದ ಪ್ರೇಮಕಥನವಾಗಿದೆ ‘ಸಿಲ್‌ ಸಿಲಾ’. ಇದೀಗ ಮತ್ತೆ ಈ ಚಿತ್ರದ ಚರ್ಚೆಗೆ ಕಾರಣವೆಂದರೆ ಬಿಗ್‌ಬಿಯ ಪ್ರೇಮಕಥನವೇ. ಆದರೆ ರೇಖಾ ಜೊತೆಗಲ್ಲ. ಮಾನವೀಯ ಪ್ರೇಮ.

ಬಿಗ್‌ಬಿಯ ಮಾನವೀಯ ಪ್ರೇಮಕ್ಕೂ ಸಿಲ್‌ಸಿಲಾ ಚಿತ್ರಕ್ಕೂ ಏನ್ರಿ ಸಂಬಂಧ ಎನ್ನಬೇಡಿ. ಸಂಬಂಧ ಇದೆ. ನೇರವಾದ ಸಂಬಂಧವೇ ಇದೆ. ಅಮಿತಾಭ್‌ ಆ ಚಿತ್ರದಲ್ಲಿ ತೊಟ್ಟಿದ ಹಾಲ್ಕೆನೆಯ ಬಣ್ಣದ ಜ್ಯಾಕೆಟ್‌ ಅನ್ನು ಒಬ್ಬ ಕಟ್ಟಡ ಕಾರ್ಮಿಕನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಪ್ರೇರಣೆಯಾಗಿದ್ದು ಅವರ ಟೀವಿ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಇಬ್ಬರು ಮಕ್ಕಳು.

ಜ್ಯಾಕೆಟ್‌ ಉಡುಗೊರೆಯಾಗಿ ನೀಡಿದ್ದು ಕ್ಷಯ ರೋಗ ಮುಕ್ತ ಹರಿಯಾಣಾ’ಕ್ಕೆ ಸಂಕಲ್ಪ ತೊಟ್ಟಿರುವ ರಾಜ್ಯವು ಬಿಗ್‌ಬಿಗೆ ಸಹಕರಿಸಲು ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿರುವ ಅಮಿತಾಭ್‌ ತಮ್ಮದೊಂದು ಜ್ಯಾಕೆಟ್‌ ಅನ್ನು ದೇಣಿಗೆಯಾಗಿ ನೀಡುವ ಮೂಲಕ ಹೇಳುವುದಷ್ಟೇ ಅಲ್ಲ, ಮಾಡುವುದೂ ಮುಖ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅಮಿತಾಭ್‌ಗೆ ಒಂದು ಸಾರ್ಥಕ ಕೆಲಸ ಮಾಡಿದ ಸಮಾಧಾನವಿದೆಯಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.