ADVERTISEMENT

ಬಿಸಿ ಬಿಸಿ ಎಣ್ಣೆಗೆ ಕೈ ಹಾಕುವ ಬಾಣಸಿಗ!

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ಬಿಸಿ ಬಿಸಿ ಎಣ್ಣೆಗೆ ಕೈ ಹಾಕುವ ಬಾಣಸಿಗ!
ಬಿಸಿ ಬಿಸಿ ಎಣ್ಣೆಗೆ ಕೈ ಹಾಕುವ ಬಾಣಸಿಗ!   
ಥಾಯ್ಲೆಂಡ್‌ನ ರಸ್ತೆ ಬದಿಯಲ್ಲಿ ಆ ವ್ಯಕ್ತಿ ಚಿಕನ್‌ ಕಬಾಬ್‌ ಮಾಡುತ್ತಿದ್ದರೆ ಒಂದಷ್ಟು ಮಂದಿ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುತ್ತಿರುತ್ತಾರೆ. ಅದೆಂತಾ ಕಬಾಬ್‌ ಅಂತೀರಾ?
 
ಇಲ್ಲಿ ವಿಶೇಷ ಇರುವುದು ಕಬಾಬ್‌ನಲ್ಲಿ ಅಲ್ಲ. ಕಬಾಬ್‌ ಮಾಡುವ ವ್ಯಕ್ತಿಯಲ್ಲಿ. 
 
ಗರಿಗರಿಯಾಗಿ ಕರಿದ ಕಬಾಬ್‌ಗಳನ್ನು ಅವರು ತಟ್ಟೆಗೆ ಹಾಕಲು ಬಳಸುವುದು ಜಾಲರಿ ಸೌಟನ್ನಲ್ಲ, ಬರಿಗೈಗಳನ್ನು!
 
ಹೌದು. ಟ್ರಿಚಾನ್‌ ಎಂಬ ಈ ಬಾಣಸಿಗನ ವಿಶೇಷ ಇದು.
 
 ರಸ್ತೆ ಬದಿಯಲ್ಲಿ ಕೋಳಿ ಕಬಾಬ್‌ ಮಾರಾಟ ಮಾಡುವ ಇವರು, ಅದನ್ನು ಕರಿದು ತೆಗೆಯುವುದು ಬರೀ ಕೈಯಲ್ಲಿಯೇ. 480 ಡಿಗ್ರಿ ಕಾದ ಎಣ್ಣೆಯಲ್ಲಿ ಕೈಹಾಕಿ ಕೋಳಿ ಕಬಾಬ್‌ ಎತ್ತುವ ಪರಿಯನ್ನು ನೋಡುವುದೇ ಸೊಗಸು. ಹೀಗೆ ಅದನ್ನು ತೆಗೆದರೂ ಇವರ ಕೈ ಕೆಂಪಾಗುವುದಾಗಲಿ, ಬೊಬ್ಬೆ ಏಳುವುದಾಗಲಿ ಆಗುವುದಿಲ್ಲ. 
 
ಒಮ್ಮೆ ಇವರ ಮೈಮೇಲೆ ಬಿಸಿ ಎಣ್ಣೆ ಬಿತ್ತಂತೆ. ಆದರೂ ಇವರಿಗೆ ನೋವಾಗಿಲ್ಲ. ಮೈ ಮೇಲೆ ಯಾವ ಕಲೆಯೂ ಆಗಲಿಲ್ಲ. ಇದನ್ನು ಕಂಡ ಮನೆಯವರಿಗೆ ಆಶ್ಚರ್ಯ. ಸ್ವತಃ ಟ್ರಿಚಾನ್‌ಗೂ.
 
ಕಬಾಬ್‌ ಅಂಗಡಿ ಇಟ್ಟುಕೊಂಡಿದ್ದ ಇವರಿಗೆ ಬಿಸಿ ಎಣ್ಣೆ ತಮ್ಮ ದೇಹದ ಮೇಲೆ ಬಿದ್ದರೂ, ಏನು ಆಗುವುದಿಲ್ಲ ಎಂಬ ಅರಿವಾಗಿದ್ದು ಆಗಲೇ. ಅದಕ್ಕಾಗಿಯೇ ಅವರು ಅಂದಿನಿಂದ ಬರೀ ಕೈಯಲ್ಲಿಯೇ ಕಾದ ಎಣ್ಣೆಯಿಂದ ಕಬಾಬ್‌ ತೆಗೆಯುತ್ತಾರೆ. ಇವರ ಈ ‘ಸಾಹಸ’ವನ್ನು ನೋಡಲೇ ಪ್ರತಿದಿನ ಬಹುಸಂಖ್ಯೆಯ ಜನರು ಬರುತ್ತಾರಂತೆ. ಇದರಿಂದ ಇವರ ವ್ಯಾಪಾರವೂ ಚುರುಕಾಗಿದೆ. 

 

‘ಜನರು ಇಷ್ಟಪಟ್ಟು ನನ್ನ ಅಂಗಡಿಗೆ ಬರುತ್ತಾರೆ. ನಾನು ಕೈಯಲ್ಲಿಯೇ ಕಬಾಬ್‌ ತೆಗೆಯುತ್ತಿದ್ದರೆ ಅವರು ಆಶ್ಚರ್ಯದಿಂದ ನೋಡುತ್ತಾರೆ. ಈಗಂತೂ ನಾನು ತುಂಬಾ ಬ್ಯುಸಿಯಾಗಿದ್ದೇನೆ’ ಎನ್ನುತ್ತಾರೆ ಅವರು.\

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.