ADVERTISEMENT

ಬ್ಯಾಂಡೇಜ್‌ ಮದುವೆ!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಬ್ಯಾಂಡೇಜ್‌ ಮದುವೆ!
ಬ್ಯಾಂಡೇಜ್‌ ಮದುವೆ!   

ಮದುವೆ ಆಗುವ ವಧು-ವರರಿಗೆ ಸಾವಿರ ಕನಸುಗಳಿರುತ್ತವೆ. ಅದರಲ್ಲೂ ವಧುವಿಗೆ ತಾನು ಹೇಗೆಲ್ಲ ಅಲಂಕಾರ ಮಾಡಿಕೊಳ್ಳಬಹುದು ಎಂಬುದೇ ಚಿಂತೆ. ಹೀಗಿರುವಾಗ ಇನ್ನೇನು ಮದುವೆಗೆ ಒಂದು ವಾರ ಇರುವಾಗ ಕೈ ಮುರಿದರೆ ಹೇಗಾಗಬೇಡಿ. ಕೊಲಂಬಿಯಾದ ವಧು ಜಾಕ್ಲಿ ಸಮರ್ಸ್‌ ಅವರಿಗೂ ಇಂಥದ್ದೇ ಪರಿಸ್ಥಿತಿ ಎದುರಾಯಿತು.

ಮದುವೆ ಸಮೀಪವಿರುವಾಗ ಮನೆಯ ಮೆಟ್ಟಿಲಿನಿಂದ ಕೆಳಗೆ ಬಿದ್ದು, ಕೈ ಮೂಳೆ ಮುರಿಯಿತು. ಮದುವೆಯ ದಿನ ಬೇಸರದಿಂದಲೇ ಬ್ಯಾಂಡೇಜ್‌ ಹಾಕಿಕೊಂಡು ಚರ್ಚ್‌ಗೆ ಬಂದ ಜಾಕ್ಲಿ ಅವರಿಗೆ ಅಚ್ಚರಿಯೊಂದು ಕಾದಿತ್ತು.

ಮದುವೆಗೆ ಬಂದಿದ್ದ ವರ, ಗೆಳೆಯರು, ಬಂಧುಗಳೆಲ್ಲ ಕೈಗೆ ಬ್ಯಾಂಡೇಜ್‌ ಹಾಕಿಕೊಂಡಿದ್ದರು. ಜಾಕ್ಲಿಗೆ ಖುಷಿ ಪಡಿಸುವ ಸಲುವಾಗಿ ಅವರೆಲ್ಲ ಕೈಗೆ ಹೀಗೆ ಬ್ಯಾಂಡೇಜ್‌ ಕಟ್ಟಿಕೊಂಡಿದ್ದರು. ಇದೆಲ್ಲ ಸಂಗಾತಿ ಜೋನಾಥನ್‌ ಅವರ ಯೋಚನೆ ಎಂಬುದು ತಿಳಿದು, ಜಾಕ್ಲಿಗೆ ಅವರ ಮೇಲಿನ  ಪ್ರೀತಿ ಇನ್ನಷ್ಟು ಹೆಚ್ಚಿತಂತೆ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.