ADVERTISEMENT

ಮತ್ತೆ ಬರಲಿವೆ ಮ್ಯಾಮೊತ್‌ಗಳು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 19:30 IST
Last Updated 9 ಮಾರ್ಚ್ 2017, 19:30 IST

ಸುಮಾರು 4000 ವರ್ಷಗಳ ಹಿಂದೆಯೇ ಅವಸಾನಗೊಂಡಿದ್ದ ಭಾರಿ ಗಾತ್ರದ ಆನೆ ಮ್ಯಾಮೊತ್‌ಗಳು ಮತ್ತೆ ಭೂಮಿಯ ಮೇಲೆ ಕಾಣಿಸಿಕೊಳ್ಳಲಿವೆ ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಭಾರಿ ಆಕಾರ ಮತ್ತು ಉಣ್ಣೆಯ ಹೊದಿಕೆಯ ಚರ್ಮ ಹೊಂದಿದ್ದ ಮ್ಯಾಮೊತ್‌ಗಳು ಪ್ರಕೃತಿ ಬದಲಾವಣೆಗೆ ಹೊಂದಿಕೊಳ್ಳಲಾಗದೆ ಅವಸಾನ ಹೊಂದಿದ್ದವು. ಇತ್ತೀಚೆಗೆ ಬೋಸ್ಟನ್‌ನಲ್ಲಿ ನಡೆದ ‘ಅಮೆರಿಕ ಅಸೋಸಿಯೇಶನ್ ಫಾರ್ ದಿ ಅಡ್ವಾನ್ಸ್‌ಮೆಂಟ್‌ ಆಫ್‌ ಸೈನ್ಸ್‌’ ವಾರ್ಷಿಕ ಸಭೆಯಲ್ಲಿ ವಿಜ್ಞಾನಿಗಳು, ಇನ್ನು ಎರಡು ವರ್ಷದಲ್ಲಿ ಏಷ್ಯಾದ ಆನೆಗಳಿಗೆ ಹೈಬ್ರಿಡ್‌ ಗರ್ಭಧಾರಣೆ ವಿಧಾನದ ಮೂಲಕ ಮ್ಯಾಮೊತ್‌ಗಳನ್ನು ಪುನಃ ಸೃಷ್ಟಿಸುವುದಾಗಿ ಹೇಳಿದ್ದಾರೆ.
ಮೂಲ: ದಿ ಗಾರ್ಡಿಯನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.