ADVERTISEMENT

ಮಹಿಳೆಯ ಸುರಕ್ಷತೆಗೆ ‘ಪಿಂಕ್ ಸಮ್ಯಾರಿಟನ್’ ಆ್ಯಪ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST
ಮಹಿಳೆಯ ಸುರಕ್ಷತೆಗೆ  ‘ಪಿಂಕ್ ಸಮ್ಯಾರಿಟನ್’ ಆ್ಯಪ್
ಮಹಿಳೆಯ ಸುರಕ್ಷತೆಗೆ ‘ಪಿಂಕ್ ಸಮ್ಯಾರಿಟನ್’ ಆ್ಯಪ್   
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್ ಬೆಂಬಲದೊಂದಿಗೆ  ‘ಪಿಂಕ್ ಸಮ್ಯಾರಿಟನ್‌’ ಎಂಬ ಆ್ಯಪ್ಅನ್ನು ಏಷ್ಯಾನೆಟ್ ನ್ಯೂಸ್ ಆರಂಭಿಸಿದೆ.
 
ಮಹಿಳಾ ದೌರ್ಜನ್ಯ ವಿರುದ್ಧ ಇರುವ ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕೆಂದು ಒತ್ತಾಯಿಸುವ ಅಭಿಯಾನಕ್ಕೆ ಈ ಪಿಂಕ್ ಸಮ್ಯಾರಿಟನ್‌ ಆ್ಯಪ್ ಹೆಚ್ಚಿನ ಒತ್ತು ನೀಡಲಿದೆ.
 
ಆ್ಯಪ್‌ನಲ್ಲಿ ಹತ್ತಿರದ ಪೊಲೀಸ್ ಠಾಣೆ, ಸಂಕಷ್ಟಕ್ಕೆ ಸಿಲುಕುವ ಮಹಿಳೆಯರು ಇರುವ ಸ್ಥಳದ ಮ್ಯಾಪ್ ಮತ್ತು ಮಾಹಿತಿ, ಆಸ್ಪತ್ರೆ, ಔಷಧಿ ಅಂಗಡಿಗಳ ಮಾಹಿತಿಗಳು ಲಭ್ಯವಿವೆ.
ಸಂಕಷ್ಟಕ್ಕೆ ಸಿಲುಕಿದಾದ ಆ್ಯಪ್‌ನಲ್ಲಿರುವ ‘ಹೆಲ್ಪ್‌’ ಅನ್ನೋ ಆಟೊಮ್ಯಾಟಿಕ್ ಬಟನ್ ಒತ್ತಿದರೆ 5 ಸೆಕೆಂಡ್‌ನಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಹೋಗುತ್ತದೆ.

ಇದಲ್ಲದೇ, ಪಿಂಕ್ ಸಮ್ಯಾರಿಟನ್‌ಗೆ ಜಿಪಿಎಸ್ ಟ್ರ್ಯಾಕರ್ ಮೂಲಕ ಸಂದೇಶ ಹೋಗುತ್ತದೆ. ಈ ಆ್ಯಪ್‌ನಲ್ಲಿ ಮಹಿಳೆಯರ ರಕ್ಷಣಾ ಸಾಮಗ್ರಿಗಳನ್ನು ಇ-ಕಾಮರ್ಸ್ ಮೂಲಕ ಖರೀದಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಇದರ ವಿಳಾಸ urdoorstep.com.
 
ಜೊತೆಗೆ ಮಹಿಳೆಯರ ರಕ್ಷಣೆಗೆ ಸ್ವಯಂಪ್ರೇರಿತವಾಗಿ ಮುಂದೆ ಬರುವ ಮಹಿಳೆ ಅಥವಾ ಪುರುಷರು ಈ ಆ್ಯಪ್‌ನಲ್ಲಿ ಸೈನ್-ಅಪ್ ಮಾಡಿಕೊಂಡು ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು.
 
ಈ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಏಷ್ಯಾನೆಟ್ ನ್ಯೂಸ್ ಮೀಡಿಯಾ ಅಂಡ್ ಮನರಂಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೂಪ್ ಎನ್. ‘ಪಿಂಕ್ ಸಮ್ಯಾರಿಟನ್‌ ಆ್ಯಪ್ ಮಹಿಳೆಯರ ರಕ್ಷಣೆಗೆಂದು ಆರಂಭಿಸಿರುವ ಅತ್ಯುತ್ತಮ ಆ್ಯಪ್. ಈ ಆ್ಯಪ್ ಮೂಲಕ ಸಮಾಜದ ವಿವಿಧ ಸ್ತರದ ಜನರು ಮಹಿಳೆಯರ ರಕ್ಷಣೆಗೆ ಮುಂದಾಗಬಹುದಾಗಿದೆ’ ಎಂದರು.
 
ಫೇಸ್‌ಬುಕ್‌ನ ಭಾರತ ಮತ್ತು ದಕ್ಷಿಣ ಏಷ್ಯಾದ ಮುಖ್ಯಸ್ಥ ರಿತೇಶ್ ಮೆಹ್ತಾ ಮಾತನಾಡಿ, ‘ಎಲ್ಲರ ರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಅದೇ ರೀತಿ, ಪಿಂಕ್ ಸಮ್ಯಾರಿಟನ್‌ ಜತೆಯಲ್ಲಿಯೂ ಮಹಿಳಾ ರಕ್ಷಣೆ ವಿಚಾರದಲ್ಲಿ ಕೈಜೋಡಿಸಿದ್ದೇವೆ. ಈ ಆ್ಯಪ್ ಮೂಲಕ ನಾವು ಮಾಹಿತಿಗಳನ್ನು ಹಂಚಿಕೊಳ್ಳಲಿದ್ದೇವೆ. ಈ ಮೂಲಕ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರ ರಕ್ಷಣೆಗೆ ಬದ್ಧರಾಗಿದ್ದೇವೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.