ADVERTISEMENT

ಶಕ್ತಿವರ್ಧಕ ಪೇಯಗಳಿಂದ ಹೃದಯಾಘಾತ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಶಕ್ತಿವರ್ಧಕ ಪೇಯಗಳಿಂದ ಹೃದಯಾಘಾತ
ಶಕ್ತಿವರ್ಧಕ ಪೇಯಗಳಿಂದ ಹೃದಯಾಘಾತ   

ಕೆಫೀನ್ ಅಂಶ ಇರುವ ಶಕ್ತಿ ವರ್ಧಕ ಪೇಯಗಳ ಸೇವನೆಯಿಂದ ವೇಗವಾದ, ಅನಿಯಮಿತ ಹೃದಯ ಬಡಿತ ಉಂಟಾಗುತ್ತದೆ. ಇದು ಹೃದಯಾಘಾತಕ್ಕೂ ಕಾರಣವಾಗುತ್ತದೆ. ಅನುವಂಶೀಯವಾಗಿ ಹೃದಯ ಸಮಸ್ಯೆ (congenital long QT syndrome –LQTS) ಇದ್ದರೆ ಈ ಸಮಸ್ಯೆ ಇನ್ನೂ ಬೇಗ ಉಂಟಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಹೃದಯದ ರಕ್ತನಾಳಗಳು ಶಕ್ತಿ ವರ್ಧಕ ಪೇಯಗಳಲ್ಲಿ ಇರುವ ಕೆಫೀನ್‌ ಅಂಶವನ್ನು ಬೇಗ ಹೀರಿಕೊಳ್ಳುತ್ತವೆ. ಹೀಗಾಗಿ ಹೃದಯ ಸಮಸ್ಯೆಗಳು ಹೆಚ್ಚು. ಯೂನಿವರ್ಸಿಟಿ ಆಫ್ ಸಿಡ್ನಿ ಮತ್ತು  ಆಸ್ಟ್ರೇಲಿಯಾದ ಸೆಂಟೆನರಿ ಇನ್‌ಸ್ಟಿಟ್ಯೂಟ್‌ನ ಸಂಶೋಧನಾ ತಂಡ ಈ ಮಾಹಿತಿಯನ್ನು ಹೊರಹಾಕಿದೆ. ಟೌರೀನ್ ಮತ್ತು ಕೆಫೀನ್‌ ಅಂಶಗಳು  ರಕ್ತದ ಹರಿವಿನ ಮೇಲೆ ಒತ್ತಡ ಉಂಟುಮಾಡುತ್ತವೆ. ಅನುವಂಶೀಯವಾಗಿ ಹೃದಯ ಸಮಸ್ಯೆ ಇರುವವರು ಈ ಶಕ್ತಿ ವರ್ಧಕ ಪೇಯಗಳನ್ನು ಸೇವಿಸುವುದರಿಂದ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಶಕ್ತಿ ವರ್ಧಕ ಪೇಯಗಳನ್ನು ನಿಯಮಿತವಾಗಿ ಸೇವಿಸುವ 16 ರಿಂದ 50 ವಯಸ್ಸಿನೊಳಗಿನ ಅರ್ಧದಷ್ಟು ವ್ಯಕ್ತಿಗಳು ಬೀಟಾ ಬ್ಲಾಕರ್ ಥೆರಪಿಯನ್ನು ಮಾಡಿಸಿಕೊಂಡಿದ್ದಾರೆ.

‘ಅನುವಂಶೀಯವಾಗಿ ಹೃದಯ ಸಮಸ್ಯೆ ಇರುವ ವ್ಯಕ್ತಿಗಳು ಶಕ್ತಿ ವರ್ಧಕ ಪೇಯಗಳನ್ನು ಸೇವಿಸಲೇಬಾರದು ಎಂದು ಸೂಚನೆ ನೀಡಿದ್ದೇವೆ’ ಎನ್ನುತ್ತಾರೆ ಯೂನಿವರ್ಸಿಟಿ ಆಫ್ ಸಿಡ್ನಿ ಪ್ರಾಧ್ಯಾಪಕ ಕ್ರಿಸ್ಟೋಫರ್. ಈ ಸಂಶೋಧನಾ ವರದಿಯು ಇಂಟರ್‌ ನ್ಯಾಷನಲ್ ಜರ್ನಲ್ ಆಫ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.