ADVERTISEMENT

ಶಾರುಕ್‌ಗೆ ಡಿಗ್ರಿ ಸರ್ಟಿಫಿಕೇಟ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 5:11 IST
Last Updated 9 ಸೆಪ್ಟೆಂಬರ್ 2017, 5:11 IST
ಶಾರುಕ್‌
ಶಾರುಕ್‌   

ಬಾಲಿವುಡ್‌ ನಟ ಶಾರುಕ್‌ ಖಾನ್ ದೆಹಲಿಯ ಹಂಸರಾಜ್‌ ಕಾಲೇಜ್‌ನಲ್ಲಿ ಪದವಿ ಮುಗಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಬರೋಬ್ಬರಿ 30 ವರ್ಷಗಳ ನಂತರ ತಮ್ಮ ಕಾಲೇಜಿಗೆ ಹೋಗಿ ಪದವಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.

‘ಈ ದಿನ ನನಗೆ ಬಹಳ ವಿಶೇಷ. 1988ರಲ್ಲಿ ಕಾಲೇಜು ಬಿಟ್ಟ ನಂತರ ಮತ್ತೆ ಇದೀಗ ಕಾಲೇಜಿಗೆ ಬರುತ್ತಿದ್ದೇನೆ. ಈ ಸಂದರ್ಭ ನನ್ನ ಮಕ್ಕಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ನನ್ನ ಜೊತೆಗೆ ಬಂದಿದ್ದರೆ, ಈ ಕಾಲೇಜಿನ ಪ್ರತಿಯೊಂದು ಮೂಲೆಯನ್ನು ಅವರಿಗೆ ತೋರಿಸುತ್ತಿದ್ದೆ' ಎಂದು ಹೇಳಿದ್ದಾರೆ.

‘ನನ್ನ ಮಕ್ಕಳು ಮೊದಲು ವಿದ್ಯಾಭ್ಯಾಸವನ್ನು ಮುಗಿಸಿ ಆ ನಂತರ ಚಿತ್ರರಂಗಕ್ಕೆ ಬರಲಿ. ನನ್ನ ಮಗಳು ಈಗ ಪಿಯುಸಿ ಓದುತ್ತಿದ್ದಾಳೆ. ಆಕೆಗೆ ನಟನೆಯಂದ್ರೆ ತುಂಬಾ ಇಷ್ಟ. ಆಕೆ ಉತ್ತಮ ನಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಆಕೆಯ ಪದವಿ ಮುಗಿದ ನಂತರವೇ ನಟನೆಗೆ ಪ್ರೋತ್ಸಾಹ ನೀಡುತ್ತೇವೆ’ ಎಂದಿದ್ದಾರೆ ‘ಬಾಲಿವುಡ್‌ ಬಾದ್‌ಶಾ’.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.