ADVERTISEMENT

ಹೂಗೂಚ್ಛದ ಬದಲು ಕೈಸೇರಿದ ನಾಯಿಗಳು

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಹೂಗೂಚ್ಛದ ಬದಲು ಕೈಸೇರಿದ ನಾಯಿಗಳು
ಹೂಗೂಚ್ಛದ ಬದಲು ಕೈಸೇರಿದ ನಾಯಿಗಳು   

ಆ ಮದುವೆಯಲ್ಲಿ ಬರೀ ನಾಯಿಗಳದ್ದೇ ರಾಜ್ಯಭಾರ. ಮದುವೆಗೆಂದು ಬಂದಿದ್ದ ಅತಿಥಿಗಳ ಕೈಯಲ್ಲಿ ಹೂಗೂಚ್ಛದ ಬದಲು ಇದ್ದುದ್ದು ನಾಯಿ ಮರಿಗಳು. ಕುಂಯ್‌..ಕುಂಯ್‌ ಎಂದು ಅತ್ತಿಂದಿತ್ತ ತಿರುಗುತ್ತಿದ್ದ ಮರಿಗಳಿಗೆ ಸಂಭ್ರಮವೋ ಸಂಭ್ರಮ. ಹೀಗೊಂದು ಸನ್ನಿವೇಶ ಕಂಡಿದ್ದು ಪೆನ್ಸಿಲ್ವೇನಿಯಾದಲ್ಲಿ ನಡೆದ ಮದುವೆಯೊಂದರಲ್ಲಿ.

ಈಗಂತೂ ನಾಯಿ ಪ್ರೇಮಿಗಳು ಹೆಚ್ಚುತ್ತಿದ್ದಾರೆ. ಆದರೆ ಇಲ್ಲೊಂದು ನವಜೋಡಿ ನಾಯಿ ಪ್ರೀತಿಯನ್ನು ವಿಶೇಷವಾಗಿ ಪ್ರದರ್ಶಿಸಿದ್ದಾರೆ. ವಧು ಸಾರಾ ಮಲೌಕ್‌ಗೆ ನಾಯಿಗಳೆಂದರೆ ವಿಶೇಷ ಪ್ರೀತಿ. ಇದೇ ಕಾರಣಕ್ಕೆ ಅವರು ನಾಯಿ ಸಂರಕ್ಷಣಾ ಸಂಘವನ್ನು ಕಟ್ಟಿಕೊಂಡಿದ್ದಾರೆ. ಮದುವೆ, ಬದುಕಿನ ವಿಶೇಷ ಕ್ಷಣ.

ಅಲ್ಲಿ ನಡೆಯುವ ಪ್ರತಿಯೊಂದು ಸನ್ನಿವೇಶವೂ ಕೊನೆಯವರೆಗೂ ನೆನಪಿರಬೇಕು ಎಂಬ ಕಾರಣಕ್ಕೆ ಮದುವೆ ಮನೆ ತುಂಬಾ ನಾಯಿ ಮರಿಗಳಿರುವಂತೆ ಅವರು ವ್ಯವಸ್ಥೆ ಮಾಡಿದ್ದಾರೆ.

ADVERTISEMENT

ಮದುವೆಯ ಮೊದಲ ಫೋಟೊ ಶೂಟ್‌ ಕೂಡಾ ನಾಯಿ ಮರಿಗಳ ಜೊತೆಗೆ ಸೆರೆಹಿಡಿದಿದ್ದಾರೆ. ಹೀಗೆ ವಿಭಿನ್ನವಾಗಿ ಮದುವೆ ಸಂಭ್ರಮ ಆಚರಿಸುವ ಮೂಲಕ ನಾಯಿಗಳನ್ನು ದತ್ತು ಪಡೆಯಿರಿ ಎಂಬ ಸಂದೇಸ ರವಾನಿಸುವುದು ವಧುವಿನ ಆಶಯವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.