ADVERTISEMENT

ಆಫ್‌ಲೈನ್‌ ಅನುಕೂಲಗಳು

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 30 ಆಗಸ್ಟ್ 2016, 16:00 IST
Last Updated 30 ಆಗಸ್ಟ್ 2016, 16:00 IST
ಆಫ್‌ಲೈನ್‌ ಅನುಕೂಲಗಳು
ಆಫ್‌ಲೈನ್‌ ಅನುಕೂಲಗಳು   

ಮೊಬೈಲ್‌ಗಳ ಮೂಲಕ ಅಂತರ್ಜಾಲ ಅಂಗೈಗೆ ಬಂದ ಮೇಲೆ ಸದಾ ಆನ್‌ಲೈನ್‌ ಜಗತ್ತಿನಲ್ಲಿ ವಿಹರಿಸುವವರ ಸಂಖ್ಯೆ ಹೆಚ್ಚಾಗಿದೆ. ಬಹುತೇಕರು ದಿನದ 24 ಗಂಟೆಯೂ ಆನ್‌ಲೈನ್‌ನಲ್ಲಿ ‘ಸಕ್ರಿಯ’ರಾಗಿರುತ್ತಾರೆ. ಕೆಲವರು ಆಫ್‌ಲೈನ್‌ ಆಗುವುದೇ ಅಪರೂಪ. ಆದರೆ, ಸ್ಮಾರ್ಟ್‌ಫೋನ್‌ಗಳಲ್ಲಿ ಆಫ್‌ಲೈನ್‌ನ ಅನುಕೂಲಗಳೂ ಸಾಕಷ್ಟಿವೆ.

ಆಫ್‌ಲೈನ್‌ ಎಂದಾಕ್ಷಣ ತಕ್ಷಣಕ್ಕೆ ನೆನಪಾಗುವುದು ಯೂಟ್ಯೂಬ್‌ ಆಫ್‌ಲೈನ್‌. ಯೂಟ್ಯೂಬ್‌ನಲ್ಲಿ ಆಫ್‌ಲೈನ್‌ ವಿಡಿಯೊ ನೋಡುವವರ ಸಂಖ್ಯೆಯೂ ಹೆಚ್ಚಿದೆ. ಆನ್‌ಲೈನ್‌ನಲ್ಲಿ ನೋಡಿದ ಯೂಟ್ಯೂಬ್‌ ವಿಡಿಯೊವನ್ನು ಡೇಟಾ ಖರ್ಚು ಮಾಡಿಕೊಳ್ಳದೆ ಮತ್ತೆ ಮತ್ತೆ ನೋಡಲು ಆಫ್‌ಲೈನ್‌ ಮೋಡ್‌ ಸಹಕಾರಿ. ಯೂಟ್ಯೂಬ್‌ ಆಫ್‌ಲೈನ್‌ ವಿಡಿಯೊ ಬಟನ್‌ ಟ್ಯಾಪ್‌ ಮಾಡುವ ಮೂಲಕ ನಿಮಗೆ ಬೇಕಾದ ವಿಡಿಯೊ ಸೇವ್‌ ಮಾಡಿಕೊಂಡು ಬೇಕೆಂದಾಗೆಲ್ಲಾ ನೋಡಬಹುದು.

ಸ್ಮಾರ್ಟ್‌ಫೋನ್‌ನ ಯೂಟ್ಯೂಬ್‌ ಆ್ಯಪ್‌ನಲ್ಲಿ ಆಫ್‌ಲೈನ್‌ ವಿಡಿಯೊ ಬಟನ್‌ ಕ್ಲಿಕ್‌ ಮಾಡಿದ ಕೂಡಲೇ ವಿಡಿಯೊದ ಗುಣಮಟ್ಟದ ಆಯ್ಕೆ ಕೇಳುತ್ತದೆ. ನಿಮಗೆ ಉತ್ತಮ ಗುಣಮಟ್ಟದ ವಿಡಿಯೊ ಬೇಕಿದ್ದರೆ High, ಮಧ್ಯಮ ಗುಣಮಟ್ಟದ ವಿಡಿಯೊ ಬೇಕಿದ್ದರೆ Medium ಮತ್ತು ಕಡಿಮೆ ಗುಣಮಟ್ಟದ ವಿಡಿಯೊ ಬೇಕಿದ್ದರೆ Low ಕ್ಲಿಕ್ಕಿಸಿ ಓಕೆ ಮಾಡಿ.

ನೀವು ಸೇವ್‌ ಮಾಡಿದ ವಿಡಿಯೊ ಯೂಟ್ಯೂಬ್‌ ಆ್ಯಪ್‌ನಲ್ಲಿ Offline videosನಲ್ಲಿರುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಇರಲಿ, ಇಲ್ಲದಿರಲಿ ನೀವು ಸೇವ್‌ ಮಾಡಿದ ವಿಡಿಯೊವನ್ನು ಬೇಕೆಂದಾಗೆಲ್ಲಾ ವೀಕ್ಷಿಸಬಹುದು.

ಯೂಟ್ಯೂಬ್‌ ಮಾತ್ರವಲ್ಲ ಹಲವು ಸುದ್ದಿ ಆ್ಯಪ್‌ಗಳಲ್ಲಿ (News App) ಆನ್‌ಲೈನ್‌ನಲ್ಲಿ ಲೋಡ್‌ ಆಗಿರುವ ಸುದ್ದಿಗಳು ಆಫ್‌ಲೈನ್‌ನಲ್ಲೂ ಓದಲು ಸಿಗುತ್ತವೆ. ಉದಾಹರಣೆಗೆ ನೀವು ‘ಪ್ರಜಾವಾಣಿ’ ಆ್ಯಂಡ್ರಾಯ್ಡ್‌ ಆ್ಯಪ್‌ ತೆರೆದು ಪ್ರಮುಖ ಸುದ್ದಿ ಮಾತ್ರ ಓದಿ ಬಳಿಕ ಆಫ್‌ಲೈನ್‌ ಆಗಿದ್ದರೆ ಆ್ಯಪ್‌ನಲ್ಲಿ ಲೋಡ್‌ ಆಗಿರುವ ಇತರೆ ಸುದ್ದಿಗಳನ್ನು ಓದಬಹುದು. ಆದರೆ, ಕೆಲವು ಆ್ಯಪ್‌ಗಳು ಆಫ್‌ಲೈನ್‌ನಲ್ಲಿ ತೆರೆದುಕೊಳ್ಳುವುದಿಲ್ಲ.

ಲೋಡ್‌ ಆಗಿ ಬಳಿಕ ಓದಲು ತೆರೆದುಕೊಳ್ಳುವ ಆ್ಯಪ್‌ಗಳ ಮೂಲಕ ಆಫ್‌ಲೈನ್‌ನಲ್ಲಿ ದೀರ್ಘವಾದ ಲೇಖನಗಳನ್ನು  ಓದಬಹುದು. ಡೇಟಾ ಉಳಿಸುವ ಮಾರ್ಗವಾಗಿಯೂ ಆಫ್‌ಲೈನ್‌ ಮೋಡ್‌ ಬಳಸಬಹುದು. ಆದರೆ, ದಿನದಲ್ಲಿ ಆಗೀಗ ಅಂತರ್ಜಾಲದ ಸಂಪರ್ಕಕ್ಕೆ ಬರುತ್ತಿರಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.