ADVERTISEMENT

ಏನ್‌ ಗುರು ಸಮಾಚಾರ?

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 19:30 IST
Last Updated 30 ಆಗಸ್ಟ್ 2017, 19:30 IST
ಏನ್‌ ಗುರು ಸಮಾಚಾರ?
ಏನ್‌ ಗುರು ಸಮಾಚಾರ?   

ಆರಾಧ್ಯ ದೈವದ ಸನ್ನಿಧಿಯಲ್ಲಿ...

ಕಳೆದ ವಾರವಷ್ಟೇ ಗಣೇಶ ಚತುರ್ಥಿ ಆಚರಿಸಿದೆವು ಅಲ್ಲವೆ? ಉದ್ಯಮಿ ಮುಕೇಶ್‌ ಅಂಬಾನಿ ತಮ್ಮ ಮನೆಯಲ್ಲಿ ಏರ್ಪಡಿಸಿದ್ದ ಆರಾಧ್ಯ ದೈವ ಗಣೇಶನ ಪೂಜೆಗೆ ಬಾಲಿವುಡ್‌ನ ತಾರೆಯರನ್ನೆಲ್ಲ ಆಮಂತ್ರಿಸಿದ್ದರು. ನಟ ಅಭಿಷೇಕ್‌ ಬಚ್ಚನ್‌ ಪತ್ನಿ ಐಶ್ವರ್ಯ ಹಾಗೂ ಪುತ್ರಿ ಆರಾಧ್ಯ ಅವರೊಂದಿಗೆ ಬಂದಿದ್ದರು. ಗಣೇಶನಿಗಿಂತ ಆರಾಧ್ಯಳೇ ನೆರೆದಿದ್ದ ಎಲ್ಲರ ಗಮನ ಸೆಳೆದಳಂತೆ!

***

ADVERTISEMENT

ಇದೆಂತಹ ಉಡುಪು ಲಿಯೋನ್?

ಮುಂಬೈನಲ್ಲಿ ಮೊನ್ನೆ ನಡೆದ ಲ್ಯಾಕ್ಮೆ ಫ್ಯಾಷನ್‌ ವೀಕ್‌ ಪ್ರದರ್ಶನದಲ್ಲಿ ಹೊಸ ವಿನ್ಯಾಸದ ಉಡುಪು ತೊಟ್ಟು ಫ್ಯಾಷನ್‌ಪ್ರಿಯರ ಮುಖದಲ್ಲಿ ರಂಗೇರಿಸಿದ ಬಾಲಿವುಡ್‌ ನಟಿ ಸನ್ನಿ ಲಿಯೋನ್‌.

***

ಬೆಕ್ಕುಗಳ ಬೆಚ್ಚನೆ ಮನೆ

ಕ್ಯಾಲಿಫೋರ್ನಿಯಾದ ಈ ‘ಕ್ಯಾಟ್‌ ಹೌಸ್‌’ನಲ್ಲಿ ಸಾವಿರ ಬೆಕ್ಕುಗಳಿಗೆ ಆಶ್ರಯ ನೀಡಲಾಗಿದೆ. ಬೆಕ್ಕಿನ ಮರಿಗಳು ಸಹ ದೊಡ್ಡ ಸಂಖ್ಯೆಯಲ್ಲೇ ಇವೆ. ಹನ್ನೆರಡು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ‘ಕ್ಯಾಟ್‌ ಹೌಸ್‌’ ನಿರ್ಮಾಣವಾಗಿದ್ದು ಸರಿಯಾಗಿ 25 ವರ್ಷಗಳ ಹಿಂದೆ. ಇದುವರೆಗೆ ಸುಮಾರು 25 ಸಾವಿರ ಬೆಕ್ಕುಗಳನ್ನು ಸಂರಕ್ಷಿಸಿ, ಆರೈಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.