ರಿಚಾ ಫ್ಯಾಷನ್
ಬಾಲಿವುಡ್ ನಟಿ ರಿಚಾಚಡ್ಡ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡರು. ಅದೂ ಜೋಯಾ ಫ್ಯಾಷನ್ ಆ್ಯಂಡ್ ಲೈಫ್ಸ್ಟೈಲ್ ಎಕ್ಸಿಬಿಷನ್ ಫ್ಯಾಷನ್ ಶೋನಲ್ಲಿ. ಹೀಗೆ ಮಾದಕ ಭಂಗಿಯಲ್ಲಿ ಬಂದು ನಿಂತು ಎಲ್ಲರೆಡೆಗೂ ಹೂಮುತ್ತನ್ನೂ ಎಸೆದರಂತೆ...
***
ಪರೇಡ್ ಪರಿ
ಜರ್ಮನಿಯ ಮುನಿಚ್ನಲ್ಲಿ ಈಗ ಅಕ್ಟೋಬರ್ಫೆಸ್ಟ್ ಪರೇಡ್ನ ಸಂಭ್ರಮ. ಇದನ್ನು ವಿಶ್ವದ ಅತಿ ದೊಡ್ಡ ಬಿಯರ್ ಫೆಸ್ಟಿವಲ್ ಎಂದೂ ಕರೆಯುತ್ತಾರೆ. ಸಾಂಪ್ರದಾಯಿಕ ದಿರಿಸನ್ನು ತೊಟ್ಟ ವ್ಯಕ್ತಿಗಳಿಬ್ಬರು ರಸ್ತೆಯಲ್ಲಿ ಈ ರೀತಿ ಕಸರತ್ತು ತೋರುತ್ತಾ ಪರೇಡ್ ಮಾಡಿದರು
***
ನಿನ್ನ ಜೊತೆಗೊಂದು ಸೆಲ್ಫೀ
ಸೆಲ್ಫಿ ಮೋಹ ಯಾರನ್ನು ತಾನೆ ಬಿಟ್ಟಿದೆ? ರಾಜಸ್ತಾನದ ಅಜ್ಮೀರ್ನಲ್ಲಿ ಹಬ್ಬವೊಂದರ ಸಂಭ್ರಮದ ಸಮಯ ಮೇಕೆಯೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡ ಹುಡುಗಿಯ ನಗುವಿದು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.