ADVERTISEMENT

ಖಾಸಗಿ ಯೂಟ್ಯೂಬ್‌: ಒಂದಿಷ್ಟು ಮಾಹಿತಿ

ತಂತ್ರೋಪನಿಷತ್ತು

​ಪ್ರಜಾವಾಣಿ ವಾರ್ತೆ
Published 5 ಮೇ 2016, 3:14 IST
Last Updated 5 ಮೇ 2016, 3:14 IST
ಖಾಸಗಿ ಯೂಟ್ಯೂಬ್‌: ಒಂದಿಷ್ಟು ಮಾಹಿತಿ
ಖಾಸಗಿ ಯೂಟ್ಯೂಬ್‌: ಒಂದಿಷ್ಟು ಮಾಹಿತಿ   

ಕುಟುಂಬದೊಂದಿಗೆ ಮದುವೆಗೆ ಹೋಗಿರಲಿ, ಗೆಳೆಯರ ಜತೆಗೆ ಪ್ರವಾಸದಲ್ಲಿರಲಿ, ಜಾತ್ರೆ ನಡೆಯುತ್ತಿರಲಿ, ಮನೆಗೆ ಹಾವು ನುಗ್ಗಲಿ–ಮೊಬೈಲ್‌ ಹಿಡಿದು ವಿಡಿಯೊ ಮಾಡುವುದು ಕೆಲವರಿಗೆ ಅಭ್ಯಾಸ.

ಹೀಗೆ ರೆಕಾರ್ಡ್‌ ಮಾಡಿದ ವಿಡಿಯೊ ಫೈಲ್‌ಗಳನ್ನು ಮೆಮೊರಿ ಸ್ಪೇಸ್‌ನ ಕಾರಣಕ್ಕೆ ಡಿಲೀಟ್‌ ಮಾಡುವವರೇ ಹೆಚ್ಚು. ಕೆಲವರು ಎಕ್ಸ್‌ಪ್ಯಾಂಡ್ ಕಡೆಗೆ ವಿಡಿಯೊ ಫೈಲ್‌ಗಳನ್ನು ತಳ್ಳಿ ಅವುಗಳನ್ನು ಮರೆತು ಬಿಡುವುದೂ ಇದೆ. ಇನ್ನೂ ಕೆಲವರು ಪಿ.ಸಿಗೋ, ಲ್ಯಾಪ್‌ಟಾಪ್‌ಗೋ ಎಕ್ಸ್‌ಪೋರ್ಟ್‌ ಮಾಡಿಕೊಂಡು ಅವನ್ನು ಒಂದು ಕಡೆ ಗುಡ್ಡೆ ಹಾಕಿದಂತೆ

ಮಾಡುವುದು ಸಾಮಾನ್ಯ. ಇಷ್ಟಪಟ್ಟು ರೆಕಾರ್ಡ್‌ ಮಾಡಿದ ವಿಡಿಯೊ ಫೈಲ್‌ಗಳನ್ನು ಹೀಗೆಲ್ಲಾ ಮೂಲೆಗೆ ತಳ್ಳುವ ಬದಲು ಅವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡುವುದು ಒಂದು ಒಳ್ಳೆಯ ಅಭ್ಯಾಸ. ತಾವು ರೆಕಾರ್ಡ್‌ ಮಾಡಿದ ವಿಡಿಯೊ ಖಾಸಗಿಯಾಗಿರಬೇಕೆಂದರೆ ಅವನ್ನು ಯೂಟ್ಯೂಬ್‌ನಲ್ಲಿ ಖಾಸಗಿಯಾಗಿಡಲೂ ಅವಕಾಶವಿದೆ.

ರೆಕಾರ್ಡ್‌ ಮಾಡಿದ ವಿಡಿಯೊ ಫೈಲ್‌ ಅನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿ ಅದನ್ನು ಸಮಯ ಸಿಕ್ಕಾಗ ಅಂದಗಾಣಿಸುವುದೂ ಸಾಧ್ಯವಿದೆ. ನಿಮ್ಮ ವಿಡಿಯೊ ಚೆಂದಗಾಣಿಸಲೆಂದೇ ಯೂಟ್ಯೂಬ್‌ನಲ್ಲಿ ವಿಡಿಯೊ ಮ್ಯಾನೇಜರ್‌ ಇದೆ. ಇಲ್ಲಿ ನೀವು ನಿಮ್ಮ ವಿಡಿಯೊ ಎಡಿಟ್‌ ಮಾಡಬಹುದು, ವಿಡಿಯೊ ಮೇಲೆ ಕನ್ನಡದಲ್ಲೂ ಕ್ಯಾಪ್ಷನ್‌ ನೀಡಬಹುದು.

ಆ ವಿಡಿಯೊ ಬಗ್ಗೆ ಒಂದಷ್ಟು ಮಾಹಿತಿಯನ್ನೂ ಹಂಚಿಕೊಳ್ಳಬಹುದು. ವಿಡಿಯೊ ಫೈಲ್‌ ಅನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ ತಕ್ಷಣವೇ ಅದು ಎಲ್ಲರಿಗೂ ಕಾಣಸಿಗುವುದಿಲ್ಲ. ನೀವು ಅದನ್ನು public ಮಾಡುವವರೆಗೂ ಅದು ನಿಮ್ಮ ಖಾಸಗಿ ವಿಡಿಯೊ. ನಿಮ್ಮ ಲಾಗ್‌ಇನ್‌ನಲ್ಲಿ ಮಾತ್ರ ನೋಡಲು ಸಿಗುವ ವಿಡಿಯೊ ಅದು. ನಿಮ್ಮ ಡಿವೈಸ್‌ನ ಸ್ಪೇಸ್‌ ಉಳಿಸಿ ನಿಮ್ಮ ವಿಡಿಯೊ ಕೂಡಾ ಉಳಿಯುವಂತೆ ಮಾಡಲು ಯೂಟ್ಯೂಬ್‌ನ ಈ ಚಾನೆಲ್‌ ಸಹಕಾರಿ.

my channelನಲ್ಲಿರುವ ವಿಡಿಯೊ ನಿಮ್ಮ ಖಾಸಗಿತನದಲ್ಲೇ ಉಳಿಸಿಕೊಂಡು ಬೇಕೆಂದಾಗ ಬೇಕೆಂದವರ ಜತೆಗಷ್ಟೇ ನೋಡಲು ಯೂಟ್ಯೂಬ್‌ನ ಪ್ರೈವೆಸಿ ಸೆಟ್ಟಿಂಗ್‌ ಹೆಚ್ಚು ಅನುಕೂಲಕರ. ಒಂದು ವೇಳೆ ಬೇಡವೆನಿಸಿದರೆ ಅಪ್‌ಲೋಡ್‌ ಮಾಡಿದ ವಿಡಿಯೊ ಫೈಲ್‌ ಅನ್ನು ಡಿಲೀಟ್‌ ಕೂಡ ಮಾಡಬಹುದು. ಒಂದು ವೇಳೆ ನಿಗದಿತ ವಿಡಿಯೊ ನಿಮ್ಮ my channel ನಲ್ಲಿಯೂ ಕಾಣಬಾರದೆಂದರೆ ವಿಡಿಯೊ ಎಡಿಟ್‌ಗೆ ಹೋಗಿ unlisted ಮಾಡಿದರೆ ಆಯಿತು. ನಿಮ್ಮ ವಿಡಿಯೊ ನಿಮಗೇ ಕಾಣುವುದಿಲ್ಲ.

ನಿಮ್ಮ ಆ ಕಾಣದ ವಿಡಿಯೊವನ್ನು ಮತ್ತೆ ಕಾಣಬೇಕೆಂದರೆ ನೀವು Uploads ಕ್ಲಿಕ್ಕಿಸಬೇಕು. ಅಲ್ಲಿ ಮತ್ತೆ ಆ ವಿಡಿಯೊವನ್ನು ಖಾಸಗಿಯಾಗಲು Private ಅನ್ನು ಕ್ಲಿಕ್ಕಿಸಿದರಾಯಿತು. ಅದೇ ವಿಡಿಯೊ ಎಲ್ಲರಿಗೂ ಕಾಣಸಿಗಲು Public ಕ್ಲಿಕ್ಕಿಸಿದರೆ ಮುಗಿಯಿತು. ಜಗತ್ತಿನ ಯಾವ ಮೂಲೆಯಿಂದಾದರೂ, ಯಾರು ಬೇಕಾದರೂ ಆ ವಿಡಿಯೊ ವೀಕ್ಷಿಸಬಹುದು.
*
 

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT