ADVERTISEMENT

ಪದವೀಧರ ಪೋರ

ಏನ್‌ ಗುರು ಸಮಾಚಾರ?

​ಪ್ರಜಾವಾಣಿ ವಾರ್ತೆ
Published 17 ಮೇ 2017, 19:30 IST
Last Updated 17 ಮೇ 2017, 19:30 IST
ಪದವೀಧರ ಪೋರ
ಪದವೀಧರ ಪೋರ   
ಈ ಪೋರನಿಗೆ ಇನ್ನೂ ಹದಿನಾಲ್ಕು ವರ್ಷ. ಆತನ ಹೆಸರು ಕರ್ಸನ್‌ ಹ್ಯೂ ಯು. ವಯಸ್ಸು ಚಿಕ್ಕದಾದರೆ ಏನಂತೆ ಭೌತವಿಜ್ಞಾನದಲ್ಲಿ ಆತ ಘನವಾದ ಪಾಂಡಿತ್ಯ ಹೊಂದಿದ್ದಾನಂತೆ. ಎಂತಹ ಕ್ಲಿಷ್ಟ ಪ್ರಶ್ನೆಗಳಿಗೂ ಆತನಲ್ಲಿ ಉತ್ತರಗಳಿವೆಯಂತೆ. ಟೆಕ್ಸಾಸ್‌ ಕ್ರಿಶ್ಚಿಯನ್‌ ವಿಶ್ವವಿದ್ಯಾಲಯ ಆತನ ವಿದ್ವತ್ತಿಗೆ ಬೆರಗಾಗಿ ವಿ.ವಿಯ ಘಟಿಕೋತ್ಸವದಲ್ಲಿ ಭೌತವಿಜ್ಞಾನದಲ್ಲಿ ಪದವಿ ಪ್ರದಾನ ಮಾಡಿದೆ.  
****
ಮೀನುಗಳ ರಂಗೋಲಿ
ಟೊಟೊ ಟಯಾಂಗೊ ಎಂಬ ಈ ಮೀನುಗಾರ ತನ್ನ ಬಲೆಗೆ ಬಿದ್ದ ಮೀನುಗಳನ್ನು ಮನಿಲಾದ ಮಾರುಕಟ್ಟೆಗೆ ಸಾಗಿಸಬೇಕಿತ್ತು. ಅದಕ್ಕಿಂತ ಮುಂಚೆ ಅವುಗಳನ್ನು ಬಿಸಿಲಲ್ಲಿ ಒಣಗಿಸಬೇಕಿತ್ತಲ್ಲ?  ಅದಕ್ಕಾಗಿ ಆತ ಅಂಗಳದಲ್ಲಿ ಮೀನುಗಳ ಚಿತ್ತಾಕರ್ಷಕವಾದ ರಂಗೋಲಿಯನ್ನೇ ಬಿಡಿಸಿದ್ದ!
 
****
ಬೋಟರ್‌ ಹ್ಯಾಟ್‌
ಲಂಡನ್ನಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮೊನ್ನೆ ಸಮವಸ್ತ್ರ ತೊಟ್ಟು ವಿಕ್ಟೋರಿಯಾ ಅಂಡ್‌ ಅಲ್ಬರ್ಟ್‌ ಮ್ಯೂಸಿಯಂ ಮುಂದೆ ಫೋಟೊಕ್ಕೆ ಪೋಸು ನೀಡಲು ಬಂದಿದ್ದರು. ಇಂಗ್ಲೆಂಡಿನ ರಾಣಿ ಧರಿಸುವಂತಹ ‘ಬೋಟರ್‌ ಹ್ಯಾಟ್‌’ ತರಹದ್ದೇ ಟೋಪಿ ಹಾಕಿಕೊಳ್ಳುವುದು ಶಾಲಾ ಸಮವಸ್ತ್ರದ ಭಾಗವಂತೆ. ಮಕ್ಕಳೆಲ್ಲ ಟೋಪಿ ಹಾಕಿಕೊಂಡು ನಿಂತಾಗ ಮ್ಯೂಸಿಯಂ ಮೇಲಿನಿಂದ ಕಂಡ ನೋಟ ಇದು.
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.