ADVERTISEMENT

ಪುಸ್ತಕಗಳ ದೇಣಿಗೆ

​ಪ್ರಜಾವಾಣಿ ವಾರ್ತೆ
Published 10 ಮೇ 2017, 19:30 IST
Last Updated 10 ಮೇ 2017, 19:30 IST
ಪುಸ್ತಕಗಳ ದೇಣಿಗೆ
ಪುಸ್ತಕಗಳ ದೇಣಿಗೆ   

ಐಎಸ್‌ ಉಗ್ರರ ದಾಳಿಗೆ ಸಿಕ್ಕು ನಲುಗಿದ ನಗರಗಳಲ್ಲಿ ಇರಾಕ್‌ನ ಮೊಸುಲ್‌ ಕೂಡ ಒಂದು. ಮೊಸುಲ್‌ ವಿಶ್ವವಿದ್ಯಾಲಯದ ಭಂಡಾರದಲ್ಲಿದ್ದ ಅಪರೂಪದ ಪುಸ್ತಕಗಳು, ದಾಖಲೆಗಳು ಈ ದಾಳಿಯಿಂದ ಸಂಪೂರ್ಣವಾಗಿ ನಾಶವಾಗಿದ್ದವು. ವಿ.ವಿ.ಯ ಜ್ಞಾನ ಭಂಡಾರ ಮುಂಚಿನಂತೆಯೇ ಸಂಪತ್ಭರಿತವಾಗಬೇಕು ಎಂಬ ಕನಸು ಹೊತ್ತ ಸಾವಿರಾರು ಇರಾಕ್‌ ಪ್ರಜೆಗಳು ಸೀದಾ ಬಾಗ್ದಾದ್‌ನ ಮುತಾನಬಿ ಬೀದಿಗೆ ಬಂದರು. ಅಲ್ಲಿ ಬಿಕರಿಗಿದ್ದ ಅಪರೂಪದ ಪುಸ್ತಕಗಳನ್ನು ಖರೀದಿಸಿ ವಿ.ವಿ.ಗೆ ದೇಣಿಗೆ ನೀಡಿ, ಕೃತಾರ್ಥಭಾವ ಅನುಭವಿಸಿದರು.

*


ಟೈರ್‌ ಹೊತ್ತಿದ್ದೇಕೆ?
‘ವಾಹನ ಹೊತ್ತು ಉರುಳಬೇಕಾದ ಟೈರ್‌ಗಳನ್ನೇ ಹೊತ್ತು ಈ ಯುವಪಡೆ ಎತ್ತ ಹೊರಟಿದೆ’ ಎಂದು ತಲೆ ಕೆರೆದುಕೊಳ್ಳುತ್ತಿದ್ದೀರಾ? ಅಷ್ಟೊಂದು ತಲೆ ಕೆಡಿಸಿಕೊಳ್ಳುವಂಥದ್ದು ಏನಿಲ್ಲ. ಕೊಯಮತ್ತೂರಿನ ನೆಹರೂ ಕ್ರೀಡಾಂಗಣದಲ್ಲಿ ಈ ನೋಟ ನಿತ್ಯ ಕಾಣಸಿಗುತ್ತದೆ. ಅಥ್ಲೀಟ್‌ಗಳ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಅವರ ಕೋಚ್‌ ಮಾಡಿಸುವ ಕಸರತ್ತಿನ ಪರಿ ಇದಾಗಿದೆ.

ADVERTISEMENT

*


ಮಕ್ಕಳನ್ನು ಹುಡುಕಿಕೊಡಿ
ಮೆಕ್ಸಿಕೊ ದೇಶದ ಗೆರೆರೋ ಪ್ರಾಂತ್ಯದ ಪುಟ್ಟ ಪಟ್ಟಣ ಐಗ್ವಾಲಾ. 2014ರ ಸೆಪ್ಟೆಂಬರ್‌ನಲ್ಲಿ ಈ ಪಟ್ಟಣ ದೊಡ್ಡ ಗಲಭೆಯೊಂದಕ್ಕೆ ಸಾಕ್ಷಿಯಾಯಿತು. ಆ ಸಂದರ್ಭದಲ್ಲಿ ಇಲ್ಲಿನ ಶಾಲೆಯ 43 ಮಕ್ಕಳು ಕಾಣೆಯಾದರು. ‘ಅವರು ಎಲ್ಲಿ ಹೋದರು, ಅವರಿಗೆ ಏನಾಯಿತು’ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶಾಲಾ ಆಡಳಿತ ಮಂಡಳಿಗೆ ಇನ್ನೂ ಸಾಧ್ಯವಾಗಿಲ್ಲ. ಕಳೆದ ವಾರ ಏರ್ಪಡಿಸಿದ್ದ ತಾಯಂದಿರ ದಿನದ ಸಂದರ್ಭ ‘ಕಾಣೆಯಾದ ಮಕ್ಕಳು ಎಲ್ಲಿ’ ಎಂದು ಕೇಳಲು ಮಹಿಳೆಯರು ಶಾಲೆಗೆ ಬಂದ ಪರಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.