ADVERTISEMENT

ಫೇಸ್‌ಬುಕ್‌ ವಿಡಿಯೊ ಡೌನ್‌ಲೋಡರ್‌

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 22 ಫೆಬ್ರುವರಿ 2017, 19:30 IST
Last Updated 22 ಫೆಬ್ರುವರಿ 2017, 19:30 IST
ಫೇಸ್‌ಬುಕ್‌ನ ವಿಡಿಯೊಗಳನ್ನು ನೋಡಿ ಲೈಕ್‌ ಒತ್ತಿ ಮುಂದಕ್ಕೆ ಸ್ಕ್ರಾಲ್‌ ಮಾಡುವುದು ಬಹುತೇಕರ ರೂಢಿ. ಆದರೆ, ಹಲವರು ತಮಗೆ ಇಷ್ಟವಾದ ಫೇಸ್‌ಬುಕ್‌ ವಿಡಿಯೊವನ್ನು ತಮ್ಮ ಡಿವೈಸ್‌ನಲ್ಲಿ ಸೇವ್‌ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ.
 
ಈ ರೀತಿ ಸೇವ್‌ ಆಗಿರುವ ವಿಡಿಯೊ ಫೇಸ್‌ಬುಕ್‌ನಲ್ಲಿ Saved Video ಆಗಿ ಉಳಿದುಕೊಂಡಿರುತ್ತದೆಯೇ ಹೊರತು ಡೌನ್‌ಲೋಡ್‌ ಆಗಿರುವುದಿಲ್ಲ. ಫೇಸ್‌ಬುಕ್‌ನಲ್ಲಿ ಕಂಡ ನಿಮ್ಮಿಷ್ಟದ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳಲು ಹಲವು ವಿಧಾನಗಳಿವೆ. ಈ ಪೈಕಿ fbdown.net ಮೂಲಕ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳುವ ಬಗ್ಗೆ ಇಂದು ತಿಳಿದುಕೊಳ್ಳೋಣ.
 
ಫೇಸ್‌ಬುಕ್‌ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳಲು ಮೊದಲು ನಿಮ್ಮ ಫೇಸ್‌ಬುಕ್‌ ಅಕೌಂಟ್‌ಗೆ ಲಾಗ್‌ಇನ್‌ ಆಗಿ. ಬಳಿಕ ನೀವು ಡೌನ್‌ಲೋಡ್‌ ಮಾಡಬೇಕೆಂದಿರುವ ವಿಡಿಯೊ ಹುಡುಕಿ. ವಿಡಿಯೊ ಪ್ಲೇ ಆಗುತ್ತಿರುವಾಗ ವಿಡಿಯೊ ಮೇಲೆ ರೈಟ್‌ ಕ್ಲಿಕ್‌ ಮಾಡಿ. ಅಲ್ಲಿ ಕಾಣುವ show video URL ಮೇಲೆ ಕ್ಲಿಕ್ಕಿಸಿ.
 
ವಿಡಿಯೊ ಮೇಲೆ ಕಾಣುವ URL ಕಾಪಿ ಮಾಡಿಕೊಂಡು ಒಂದು ಟೆಕ್ಸ್ಟ್‌ ಫೈಲ್‌ನಲ್ಲಿ ಸೇವ್‌ ಮಾಡಿಕೊಳ್ಳಿ. ಈಗ ಮತ್ತೊಂದು ಟ್ಯಾಬ್‌ ತೆರೆಯಿರಿ. ಈ ಹೊಸ ಟ್ಯಾಬ್‌ನಲ್ಲಿ fbdown.net ಎಂದು ಟೈಪಿಸಿ ಎಂಟರ್‌ ಕೊಡಿ. ಈಗ ತೆರೆದುಕೊಳ್ಳುವ ಪುಟದಲ್ಲಿ Enter Facebook Video URL... ಎಂದು  ಇರುವಲ್ಲಿ ಫೇಸ್‌ಬುಕ್‌ ವಿಡಿಯೊ URL ಪೇಸ್ಟ್‌ ಮಾಡಿ. ಬಳಿಕ Download ಮೇಲೆ ಕ್ಲಿಕ್ಕಿಸಿ.
 
ಈಗ ತೆರೆದುಕೊಳ್ಳುವ ಪುಟದಲ್ಲಿ ಯಾವ ಗುಣಮಟ್ಟದಲ್ಲಿ ವಿಡಿಯೊ ಬೇಕೋ ಆ ಗುಣಮಟ್ಟದಲ್ಲಿ ನೀವು ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಆಯ್ಕೆಗಳನ್ನು ಕಾಣಬಹುದು. ಸಾಮಾನ್ಯ ಗುಣಮಟ್ಟದ ವಿಡಿಯೊ ಡೌನ್‌ಲೋಡ್‌ ಮಾಡಬೇಕಿದ್ದರೆ Download Video in Normal Quality ಮೇಲೆ ಕ್ಲಿಕ್ಕಿಸಿ. ಎಚ್‌ಡಿ ಗುಣಮಟ್ಟದ ವಿಡಿಯೊ ಬೇಕಿದ್ದರೆ Download Video in HD ಎಂಬಲ್ಲಿ ಕ್ಲಿಕ್‌ ಮಾಡಿ. ಈಗ ನೀವು ಆಯ್ಕೆ ಮಾಡಿಕೊಂಡ ಗುಣಮಟ್ಟದಲ್ಲಿ ವಿಡಿಯೊ ಡೌನ್‌ಲೋಡ್‌ ಆಗುತ್ತದೆ. ನಿಮ್ಮಲ್ಲಿನ ಇಂಟರ್ನೆಟ್‌ ವೇಗಕ್ಕೆ ಅನುಗುಣವಾಗಿ ಡೌನ್‌ಲೋಡ್‌ ವೇಗ ಹೆಚ್ಚು ಕಡಿಮೆ ಆಗುತ್ತದೆ.
 
ವಿಡಿಯೊ ಡೌನ್‌ಲೋಡ್‌ ಮಾಡಿಕೊಂಡ ಮಾತ್ರಕ್ಕೆ ಆ ವಿಡಿಯೊ ನಿಮ್ಮದಲ್ಲ. ವಿಡಿಯೊದ ಹಕ್ಕುಸ್ವಾಮ್ಯ ಅದರ ಮೂಲ ಕರ್ತೃವಿನದೇ. ಹೀಗಾಗಿ ಡೌನ್‌ಲೋಡ್‌ ಮಾಡಿದ ವಿಡಿಯೊ ಬಳಸುವ ಸಂದರ್ಭ ಬಂದರೆ ವಿಡಿಯೊ ಮೂಲದ ಸೈಟ್‌ಗೆ ಕ್ರೆಡಿಟ್‌ ಕೊಡುವುದನ್ನು ಮರೆಯಬೇಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.