ADVERTISEMENT

ಮಾಸದ ಮಾರ್ಚ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ಮಾಸದ ಮಾರ್ಚ್‌
ಮಾಸದ ಮಾರ್ಚ್‌   

ವರ್ಷಾಂತ್ಯದ ಡಿಸೆಂಬರ್, ಹೊಸವರ್ಷಾಚರಣೆಯ ಜನವರಿಗಳಿಗಿಂತ ಬೇರೆಯದೇ ಆದ ಮಹತ್ವ ಮಾರ್ಚ್ ತಿಂಗಳಿಗಿದೆ. ಅದು ಫೆಬ್ರುವರಿಯ ನಿರುಮ್ಮಳತೆಗಿಂತ ಭಿನ್ನವಾದದ್ದು.

ಏಪ್ರಿಲ್, ಮೇ ತಿಂಗಳ ಬೇಗೆಗೂ ಹೊರತಾಗಿದ್ದು. ಅಂಕದ ಬೆನ್ನುಬಿದ್ದ ವಿದ್ಯಾರ್ಥಿಗಳಿಗೆ ಈ ತಿಂಗಳು ಪರೀಕ್ಷಾಕದನಕ್ಕೆ ಹತ್ಯಾರ ಹರಿತಗೊಳಿಸಿಕೊಂಡು ತಾಲೀಮು ನಡೆಸುವ ಅವಧಿಯಾದರೆ, ವರ್ಷವಿಡೀ ಕ್ಲಾಸು ತಪ್ಪಿಸಿ ಸರ್ಕಸ್ಸು ಮಾಡಿ ಅಂತೂ ಪ್ರೇಮದ ಅಂತಿಮ ಮಜಲಿಗೆ ಏರಿದ ಹುಡುಗರಿಗೆ ಇದು ಬೀಳ್ಕೊಡುಗೆಯ ಪರಿತಾಪದ ಕಾಲ...

ಕಚೇರಿ ವರ್ಗಾವಣೆ ಪಟ್ಟಿ, ಸಾಲ ಮರುಪಾವತಿ, ಬೀಳ್ಕೊಡುಗೆ ಸಮಾರಂಭ, ವಿಫಲ ಪ್ರೇಮದ ಫಲಿತಾಂಶ, ವಿಪುಲ ಆಯ್ಕೆಯ ಅವಕಾಶ ಹೀಗೆ ನಮ್ಮ ಬದುಕಿನ ಹಲವು ನಿರ್ಣಾಯಕ ಸಂಗತಿಗಳು ಜರುಗುವುದು ಮಾರ್ಚ್‌ನಲ್ಲೇ. ಆದ್ದರಿಂದ ಹರೆಯದ ಹುಡುಗರ ಬದುಕನ್ನು ಮಹಾಭಾರತ ಎನ್ನುವುದಾದರೆ ಮಾರ್ಚ್ ತಿಂಗಳನ್ನು ಗೀತೋಪದೇಶ ಸಂದರ್ಭ ಎನ್ನಲಡ್ಡಿಯಿಲ್ಲ! 

ಮಾರ್ಚ್ ತಿಂಗಳು ನಿಮ್ಮ ಬದುಕಿನ ದಿನದರ್ಶಿಕೆಯಲ್ಲಿ ಯಾವ ಸ್ಥಾನ ಪಡೆದುಕೊಂಡಿದೆ? ನಿಮ್ಮ ಭಾವಜಗತ್ತು ಈ ತಿಂಗಳನ್ನು ಹೇಗೆ ಒಳಗೊಂಡಿದೆ ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಫೆ.25ರ ಒಳಗೆ ಪತ್ರಗಳು ತಲುಪಬೇಕು. ವಿಳಾಸಕ್ಕೆ 7ನೇ ಪುಟದ ಅಂಚನ್ನು ನೋಡಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.