ADVERTISEMENT

ಮೊಬೈಲ್‍ನಲ್ಲಿ ಚಾಟಿಂಗ್ ಮಾಡಲು ರಿಪ್ಲೈ ರೋಬೊ

ತಂತ್ರೋಪನಿಷತ್ತು

ರಶ್ಮಿ ಕಾಸರಗೋಡು
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಸ್ನೇಹಿತರ ಜತೆ ಚಾಟ್ ಮಾಡುತ್ತಾ ಸುಸ್ತಾಯಿತೇ? ಮೊಬೈಲ್‍ನಲ್ಲಿ ಸಂದೇಶ ಟೈಪ್ ಮಾಡುವುದು ಕಷ್ಟವೇ? ವಾಟ್ಸ್‌ಆ್ಯಪ್ ಮತ್ತು ಫೇಸ್‍ಬುಕ್‍ನಲ್ಲಿ ಚಾಟಿಂಗ್ ಮಾಡುವುದು ಕಷ್ಟ ಎಂದಾದರೆ ಇದಕ್ಕೆ ರೋಬೊ ಸಹಾಯ ಮಾಡಬಲ್ಲದು. ಕೃತಕ ಬುದ್ಧಿಮತ್ತೆ (AI)ಯಿಂದ ಕಾರ್ಯವೆಸಗುವ ರೋಬೊ ಒಂದನ್ನು ನಿರ್ಮಿಸುವ ಕಾರ್ಯವನ್ನು ಗೂಗಲ್ ಆರಂಭಿಸಿದೆ.

ಗೂಗಲ್ ಲ್ಯಾಬ್‍ನಿಂದ ಗೂಗಲ್‍ ಆ್ಯಪ್‍ಗಳಾದ ಹ್ಯಾಂಗ್ ಔಟ್, ಅಲೋ, ವಾಟ್ಸ್‌ಆ್ಯಪ್, ಫೇಸ್‍ಬುಕ್ ಮೆಸೆಂಜರ್, ಸ್ಕೈಪ್ ಮೊದಲಾದವುಗಳಲ್ಲಿ ಸಂದೇಶಗಳಿಗೆ ಮರು ಉತ್ತರಿಸಲು ‘ರಿಪ್ಲೈ’ ಎಂಬ ಹೆಸರಿಟ್ಟಿರುವ ಹೊಸ ಕಾರ್ಯವಿಧಾನದ ಬಗ್ಗೆ ಕೆಲಸಗಳು ಈಗಾಗಲೇ ಆರಂಭವಾಗಿದೆ ಎಂದು ‘ದಿ ಗಾರ್ಡಿಯನ್ ಪತ್ರಿಕೆ’ ವರದಿ ಮಾಡಿದೆ.

ನಮ್ಮ ಇನ್‍ಬಾಕ್ಸಿಗೆ ಬಂದ ಸಂದೇಶಗಳಿಗೆ ಹೇಗೆ ಉತ್ತರ ನೀಡಬೇಕೆಂದು ಸೂಚಿಸುವ ತಂತ್ರಜ್ಞಾನ ಈಗಾಗಲೇ ಇದೆ. ಇದೇ ತಂತ್ರಜ್ಞಾನದೊಂದಿಗೆ ಕೃತಕ ಬುದ್ಧಿಮತ್ತೆ ಸೇರಿದರೆ ಯಾವ ರೀತಿ ಸಂದೇಶಗಳಿಗೆ ಮರು ಉತ್ತರ ಕೊಡಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ.

ADVERTISEMENT

ನಿಮಗೆ ಲಭಿಸಿದ ಸಂದೇಶಗಳಿಗೆ ಉತ್ತರಿಸುವುದು ಮಾತ್ರವಲ್ಲ, ನಿಮ್ಮ ಲೊಕೇಷನ್, ಕ್ಯಾಲೆಂಡರ್ ಮೊದಲಾದ ಮಾಹಿತಿಗಳನ್ನು ಬಳಸಿ ಇದು ರಿಪ್ಲೈ ರೋಬೊ ಕಾರ್ಯ ನಿರ್ವಹಿಸುತ್ತದೆ.

ಉದಾಹರಣೆಗೆ, ನೀವು ಮನೆಗೆ ತಲುಪುವಾಗ ಎಷ್ಟು ಹೊತ್ತಾಗು ತ್ತದೆ ಎಂದು ನಿಮ್ಮಲ್ಲಿ ಚಾಟ್ ಮೂಲಕ ಯಾರಾದರೂ ಕೇಳಿದರೆ ನಿಮ್ಮ ಲೊಕೇಷನ್, ನೀವು ಸಂಚರಿಸುತ್ತಿರುವ ಮಾರ್ಗ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸಂದೇಶಕ್ಕೆ ಉತ್ತರ ನೀಡಲಾಗುತ್ತದೆ.ನೀವು ರಜೆಯಲ್ಲಿದ್ದರೆ ನಿಮ್ಮ ಕ್ಯಾಲೆಂಡರ್ ಮಾಹಿತಿ ಬಳಸಿ ಅದಕ್ಕೆ ತಕ್ಕಂತೆ ಉತ್ತರಗಳನ್ನು ನೀಡಲಾಗುತ್ತದೆ.

ನಿಮಗೆ ಚಾಟ್ ಮಾಡಲು ಇಷ್ಟವಿಲ್ಲ ಅಥವಾ ಕೆಲವು ಹೊತ್ತು ನೀವು ಮೊಬೈಲ್ ಸ್ವಿಚ್ ಆಫ್ ಮಾಡಿರುತ್ತೀರಿ ಎಂದಾದರೆ ಅದನ್ನೂ ಮುಂಚಿತವಾಗಿ ನಿಮ್ಮ ಗೆಳೆಯರಿಗೆ ತಿಳಿಸಿ, ತೊಂದರೆ ಕೊಡಬೇಡಿ ಎಂದು ಈ ರೋಬೊ ಹೇಳುತ್ತದೆ.

ಇದಲ್ಲದೆ ಡು ನಾಟ್ ಡಿಸ್ಟರ್ಬ್ ಮೋಡ್ ಕೂಡ ರಿಪ್ಲೈ ರೋಬೊನಲ್ಲಿದೆ. ಒಂದು ವೇಳೆ ನಿಮಗೆ ಸಂದೇಶ ಕಳಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನೂ ಈ ರೋಬೊ ಇನ್ನೊಬ್ಬರಿಗೆ ತಿಳಿಸುತ್ತದೆ. ಸಂದೇಶಗಳಲ್ಲಿ ಯಾವುದು ಪ್ರಧಾನವಾದದು ಎಂಬು ದನ್ನು ಗುರುತಿಸಿ, ಅದನ್ನು ನಿಮ್ಮ ಗಮನಕ್ಕೆ ತರುವ ಕೆಲಸವನ್ನೂ ಇದು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.