ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST

1) ಬರೆಯುವ ಪೆನ್ಸಿಲ್ (ಸೀಸದ ಕಡ್ಡಿ)ನಲ್ಲಿ  ಯಾವ ರಾಸಾಯನಿಕ ವಸ್ತುವನ್ನು  ಬಳಸಲಾಗಿದೆ?
a) ಗ್ರಾಫೈಟ್‌  b) ಪಾಸ್ಪರಸ್‌
c) ಸಿಲಿಕಾನ್‌ d) ಚಾರ್‌ಕೋಲ್‌

2)ಕಲ್ಯಾಣ ಚಾಲುಕ್ಯರ ಪ್ರಖ್ಯಾತ ದೊರೆ ವಿಕ್ರಮಾದಿತ್ಯ ಆರಂಭಿಸಿದ ಕಾಲಗಣನೆಯನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
a) ಕಾಲ ಶಕೆ b) ವಿಕ್ರಮ ಶಕೆ
c) ಬುದ್ಧಶಕೆ d) ಶಾಲಿವಾಹನ ಶಕೆ

3) ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಇರುವ ರಾಜ್ಯ ಮತ್ತು ನಗರವನ್ನು ಗುರುತಿಸಿ.
a) ಉತ್ತರ ಪ್ರದೇಶ– ಕಾನ್ಪುರ  b) ಮಧ್ಯಪ್ರದೇಶ– ಭೋಪಾಲ್‌
c) ಮಹಾರಾಷ್ಟ್ರ– ಮುಂಬೈ    d) ಉತ್ತರ ಪ್ರದೇಶ– ಲಖನೌ

4) ದಕ್ಷಿಣ ಅಮೆರಿಕ ಖಂಡದಲ್ಲಿ ಕಂಡುಬರುವ ಅತಿ ಉದ್ದದ ನದಿ ಯಾವುದು? ಇದರ ಉದ್ದ  ಸುಮಾರು 6500 ಕಿ.ಮೀ. ಇದೆ.
a) ಮಡೇರಿಯಾ b) ಮಪೊಚೊ(Mapocho)
c) ಅಮೆಜಾನ್‌ d) ಪರಾನಾ (Paraná)

5) ಯಕ್ಷಗಾನ ಕೇಂದ್ರ ಎಂದು ಕರೆಯಲಾಗುವ ‘ರಾಷ್ಟ್ರೀಯ ಯಕ್ಷಗಾನ ತರಬೇತಿ ಕೇಂದ್ರ’ ರಾಜ್ಯದ ಯಾವ ಜಿಲ್ಲೆಯಲ್ಲಿದೆ?
a) ದಕ್ಷಿಣ ಕನ್ನಡ b) ಉತ್ತರ ಕನ್ನಡ
c) ಶಿವಮೊಗ್ಗ d) ಉಡುಪಿ

6) ಉತ್ತರಖಂಡ ರಾಜ್ಯದಲ್ಲಿ ಹರಿಯುವ ಪ್ರಸಿದ್ಧ ಮಂದಾಕಿನಿ ಮತ್ತು ಅಲಕ್‌ನಂದಾ (ಅಲಕಾನಂದಾ) ನದಿಗಳು ಸೇರುವ ಸಂಗಮ ಸ್ಥಳವನ್ನು ಯಾವ ಹೆಸರಿನಿಂದ ಕರೆಯುತ್ತಾರೆ?
a) ಕೇದಾರನಾಥ b) ಕೈಲಾಸಪರ್ವತ
c) ಕರ್ಣಪ್ರಯಾಗ d) ರುದ್ರಪ್ರಯಾಗ

7)1956ರಲ್ಲಿ ರಾಯಚೂರಿನಲ್ಲಿ ನಡೆದ 38ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ  ಹಿರಿಯ ಸಾಹಿತಿ ಯಾರು? 
a) ಶಿವರಾಮ ಕಾರಂತ b)ರಂ. ಶ್ರೀ. ಮುಗಳಿ
c) ಶ್ರೀರಂಗ                   d) ಎಸ್‌.ವಿ. ರಂಗಣ್ಣ

8)ಕೇಂದ್ರಾಡಳಿತ ಪ್ರದೇಶವಾಗಿರುವ ಅಂಡಮಾನ್‌ ನಿಕೋಬರ್‌ ದ್ವೀಪದಲ್ಲಿರುವ ಅತಿ ಎತ್ತರದ ಶಿಖರ ಯಾವುದು?
a) ಮೌಂಟ್‌ ಹರಿಯೇಟ್‌  b) ಸಾಡೇಲ್‌ ಪೀಕ್‌  (Saddle Peak)
c) ಅಂಡಮಾನ್‌ ಪರ್ವತ d) ಯಾವುದು ಅಲ್ಲ

9) ಕನ್ನಡದ ಪ್ರಸಿದ್ಧ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ ಅವರಿಗೆ 1986ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಇವರ ಯಾವ ಕೃತಿಗೆ ಈ ಪ್ರಶಸ್ತಿ ದೊರೆಯಿತು? 
a) ಕಾಡುಮಲ್ಲಿಗೆ  b) ವಾತ್ಸಲ್ಯಪಥ
c) ಅನುರಕ್ತೆ                   d) ಬಂಡಾಯ

10) ಆಫ್ರಿಕಾದ ಪ್ರಸಿದ್ಧ ಸರೋವರ ಯಾವುದು? ಇದನ್ನು ಉಗಾಂಡ ಸರೋವರ ಎಂದು ಸಹ ಕರೆಯಲಾಗುತ್ತದೆ. 
a) ವಿಕ್ಟೋರಿಯಾ ಸರೋವರ b) ಮಾಲವಿ ಸರೋವರ
c) ತಾಂಜೇನಿಯಾ  ಸರೋವರ d) ಆಫ್ರಿಕನ್‌ ಸರೋವರ
ಉತ್ತರಗಳು: 1-a, 2-b, 3-a, 4-c, 5-d, 6-d, 7-c, 8-b, 9-d, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.