ADVERTISEMENT

ಅಖಾಡಕ್ಕೆ ಮರಳಲಿರುವ ಮೇರಿ ಕೋಮ್‌

ಪಿಟಿಐ
Published 27 ಮಾರ್ಚ್ 2017, 19:18 IST
Last Updated 27 ಮಾರ್ಚ್ 2017, 19:18 IST
ಅಖಾಡಕ್ಕೆ ಮರಳಲಿರುವ ಮೇರಿ ಕೋಮ್‌
ಅಖಾಡಕ್ಕೆ ಮರಳಲಿರುವ ಮೇರಿ ಕೋಮ್‌   

ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಬಾರಿ ಪ್ರಶಸ್ತಿ ಹಾಗೂ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿ ರುವ ಭಾರತದ ಎಮ್‌.ಸಿ ಮೇರಿಕೋಮ್ ವಿಯೆಟ್ನಾಮ್‌ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯುವ ಮೂಲಕ ಬಾಕ್ಸಿಂಗ್‌ ರಿಂಗ್‌ಗೆ ಮರಳುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ನಡೆದ ವಿಶ್ವಚಾಂಪಿಯನ್‌ಷಿಪ್‌ ಬಳಿಕ ಮೇರಿ ಕೋಮ್ ಬಾಕ್ಸಿಂಗ್‌ನಿಂದ ದೂರ ಉಳಿದಿದ್ದರು. ಈಗ ಮತ್ತೊಮ್ಮೆ ಅಮೆಚೂರ್  ಸ್ಪರ್ಧೆ ಗಳಲ್ಲಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.

‘ಒಂದು ವರ್ಷ ಯಾವುದೇ ಸ್ಪರ್ಧೆಗಳಲ್ಲಿ ಆಡದಿದ್ದರೂ ತರಬೇತಿಯನ್ನು ನಿಲ್ಲಿಸಿಲ್ಲ. ಇನ್ನೂ ಒಂದು ವರ್ಷ ಆಡುವ ಕನಸು ಕಟ್ಟಿದ್ದೇನೆ’ ಎಂದು ಈಗ 34 ವರ್ಷದ ಬಾಕ್ಸರ್‌ ಹೇಳಿದ್ದಾರೆ.

ADVERTISEMENT

ನವೆಂಬರ್‌ನಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ  ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.