ADVERTISEMENT

ಅಜಯ್‌ ಮುಡಿಗೆ ಕಿರೀಟ

ಟೆನಿಸ್‌: ನಾಗೇಶ್‌ ಜೋಡಿಗೆ ಡಬಲ್ಸ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2014, 19:49 IST
Last Updated 19 ಏಪ್ರಿಲ್ 2014, 19:49 IST
ಬೆಂಗಳೂರಿನಲ್ಲಿ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಆಶ್ರಯದಲ್ಲಿ ನಡೆದ ಸೀನಿಯರ್‌ ಪುರುಷರ ರಾಷ್ಟ್ರೀಯ ರ್‍ಯಾಂಕಿಂಗ್‌ ಟೆನಿಸ್‌ ಟೂರ್ನಿಯ 45 ವರ್ಷಕ್ಕೂ ಮೇಲಿನವರ ವಿಭಾಗದ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಬಿ.ಎನ್‌.ಎಸ್‌.ರೆಡ್ಡಿ (ಬಲಬದಿ) ಮತ್ತು ಪೀಟರ್‌ ವಿಜಯ ಕುಮಾರ್‌
ಬೆಂಗಳೂರಿನಲ್ಲಿ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಆಶ್ರಯದಲ್ಲಿ ನಡೆದ ಸೀನಿಯರ್‌ ಪುರುಷರ ರಾಷ್ಟ್ರೀಯ ರ್‍ಯಾಂಕಿಂಗ್‌ ಟೆನಿಸ್‌ ಟೂರ್ನಿಯ 45 ವರ್ಷಕ್ಕೂ ಮೇಲಿನವರ ವಿಭಾಗದ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಬಿ.ಎನ್‌.ಎಸ್‌.ರೆಡ್ಡಿ (ಬಲಬದಿ) ಮತ್ತು ಪೀಟರ್‌ ವಿಜಯ ಕುಮಾರ್‌   

ಬೆಂಗಳೂರು: ಸಿ.ಡಿ.ಅಜಯ್‌ ಅವರು ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಆಶ್ರಯ­ದಲ್ಲಿ ನಡೆದ ಸೀನಿಯರ್‌ ಪುರುಷರ ರಾಷ್ಟ್ರೀಯ ರ್‍ಯಾಂಕಿಂಗ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ವಿವಿಧ ವಿಭಾಗಗಳ ಫೈನಲ್‌ ಪಂದ್ಯಗಳ ವಿವರ ಕೆಳಗಿನಂತಿವೆ.
35 ವರ್ಷಕ್ಕೂ  ಮೇಲಿನವರ ವಿಭಾಗ: ಸಿಂಗಲ್ಸ್‌ನಲ್ಲಿ  ಸಿ.ಡಿ. ಅಜಯ್‌  6–3, 7–5ರಲ್ಲಿ ವೆಂಕಟ ರಾಮ್‌  ಅವರನ್ನು ಮಣಿಸಿದರು. ಡಬಲ್ಸ್‌ನಲ್ಲಿ  ಸಿ.ಡಿ.ಅಜಯ್‌ ಮತ್ತು ಎಸ್‌.ಎನ್‌. ನಾಗೇಶ್‌ 6–1, 6–1ರಲ್ಲಿ ಕರಣ್‌ ಸಿಂಗ್‌ ಹಾಗೂ ನೀಲಕಂಠ ದಾಮ್ರೆ  ಎದುರು ಗೆದ್ದರು.
45 ವರ್ಷಕ್ಕೂ ಮೇಲಿನವರ ವಿಭಾಗ: ಸಿಂಗಲ್ಸ್‌ನಲ್ಲಿ ಪೀಟರ್‌ ವಿಜಯ ಕುಮಾರ್‌  6–0, 6–4ರಲ್ಲಿ ಅಲಿ ಸಜ್ಜದ್‌ ಎದುರು ಗೆದ್ದರೆ, ಡಬಲ್ಸ್‌ನಲ್ಲಿ ಬಿ.ಎನ್‌.ಎಸ್‌್. ರೆಡ್ಡಿ ಮತ್ತು ಪೀಟರ್‌ ವಿಜಯ್‌ ಕುಮಾರ್‌   6–1,  6–0ರಲ್ಲಿ ರಮೀಜ್‌ ಮತ್ತು ಜಿ.ಪಿ ಬಾಲಾಜಿ ವಿರುದ್ಧ ಗೆದ್ದರು.

55 ವರ್ಷಕ್ಕೂ ಮೇಲಿನವರ ವಿಭಾಗ: ಸಿಂಗಲ್ಸ್‌ನಲ್ಲಿ ಶ್ರೀನಿವಾಸ ರೆಡ್ಡಿ  2–6, 6–3, 10–6 ರಲ್ಲಿ ಯೋಗೇಶ್‌ ಎದುರು ಜಯ ಪಡೆ ದರು. ಡಬಲ್ಸ್‌ನಲ್ಲಿ  ರಾಮ ಬಾಬು ಮತ್ತು ಶ್ರೀನಿವಾಸ ರೆಡ್ಡಿ  6–4, 1–6, 10–5ರಲ್ಲಿ  ತುಳಸಿರಾಮ್‌ ಹಾಗೂ ಯೋಗೇಶ್‌  ಅವರನ್ನು ಸೋಲಿಸಿದರು.

65ವರ್ಷಕ್ಕೂ ಮೇಲ್ಪಟ್ಟವರ ವಿಭಾಗ: ಸಿಂಗಲ್ಸ್‌ನಲ್ಲಿ ಆರ್‌.ಐ.ಸಿಂಗ್‌ 6–2, 7–6 ರಿಂದ ಶ್ಯಾಮ್‌ ಗಾಯಕ್ವಾಡ್‌ ಅವರನ್ನು ಮಣಿಸಿದರು. ಡಬಲ್ಸ್‌ನಲ್ಲಿ ಬಿ. ಅಂಕಯ್ಯ ಮತ್ತು ಆರ್‌.ಐ. ಸಿಂಗ್‌   6–4, 6–3ರಲ್ಲಿ  ಮೋಹನ್‌ ಸಿಂಗ್‌ ಮತ್ತು ವೆಂಕಟಾಚಲಂ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.