ADVERTISEMENT

ಅಧ್ಯಕ್ಷರ ಇಲೆವನ್‌ಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

ಬೆಂಗಳೂರು: ಮಧ್ಯಮ ವೇಗಿ ಟಿ. ಪ್ರದೀಪ್‌ (34ಕ್ಕೆ 6) ಮತ್ತು ಸ್ಪಿನ್ನರ್‌ ಜೆ. ಸುಚಿತ್‌ (38ಕ್ಕೆ3) ಅವರು ಮಂಗಳವಾರ ಬಿಜಿಎಸ್‌ ಮೈದಾನದಲ್ಲಿ ಸಂಯುಕ್ತ ಇಲೆವನ್‌ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾದರು.

ಇವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಅಧ್ಯಕ್ಷರ ಇಲೆವನ್‌ ತಂಡ ಶಫಿ ದಾರಾಶಾ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಅಧ್ಯಕ್ಷರ ಇಲೆವೆನ್‌ 53 ಓವರ್‌ಗಳಲ್ಲಿ 171ರನ್‌ಗಳಿಗೆ ಆಲೌಟ್‌ ಆಯಿತು. ಇದಕ್ಕುತ್ತರವಾಗಿ ಸಂಯುಕ್ತ ಇಲೆವೆನ್‌ ತಂಡ 32.1 ಓವರ್‌ಗಳಲ್ಲಿ 109 ರನ್‌ಗಳಿಗೆ ಹೋರಾಟ ಮುಗಿಸಿತು.

62ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಶುರುಮಾಡಿರುವ ಅಧ್ಯಕ್ಷರ ಇಲೆವೆನ್‌ ತಂಡ ಮೊದಲ ದಿನದಾಟದ ಅಂತ್ಯಕ್ಕೆ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 23ರನ್‌ ಗಳಿಸಿದೆ. ಇದರೊಂದಿಗೆ ಒಟ್ಟಾರೆ ಮುನ್ನಡೆಯನ್ನು 85ರನ್‌ಗಳಿಗೆ ಹೆಚ್ಚಿಸಿಕೊಂಡಿದೆ.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಅಧ್ಯಕ್ಷರ ಇಲೆವನ್‌: ಮೊದಲ ಇನಿಂಗ್ಸ್‌:  53 ಓವರ್‌ಗಳಲ್ಲಿ 171 (ಮಿರ್‌ ಕೌನೈನ್‌ ಅಬ್ಬಾಸ್‌ 24, ಕೆ.ಸಿ. ಅವಿನಾಶ್‌ 33, ಎಂ.ಜಿ. ನವೀನ್‌ 28, ಜೆ. ಸುಚಿತ್‌ 26; ವಿ. ಕೌಶಿಕ್‌ 29ಕ್ಕೆ3, ವೈಶಾಖ್‌ ವಿಜಯಕುಮಾರ್‌ 20ಕ್ಕೆ3, ಎಂ.ಬಿ. ದರ್ಶನ್‌ 22ಕ್ಕೆ2). ದ್ವಿತೀಯ ಇನಿಂಗ್ಸ್‌: 7 ಓವರ್‌ಗಳಲ್ಲಿ 1 ವಿಕೆಟ್‌ಗೆ 23. ಸಂಯುಕ್ತ ಇಲೆವನ್‌: ಪ್ರಥಮ ಇನಿಂಗ್ಸ್‌: 32.1 ಓವರ್‌ಗಳಲ್ಲಿ 109 (ವೈಶಾಖ ವಿಜಯಕುಮಾರ್‌ 36; ಟಿ. ಪ್ರದೀಪ್‌ 34ಕ್ಕೆ6, ಜೆ. ಸುಚಿತ್‌ 38ಕ್ಕೆ3).

ಉಪಾಧ್ಯಕ್ಷರ ಇಲೆವನ್‌: ಮೊದಲ ಇನಿಂಗ್ಸ್‌: 56.3 ಓವರ್‌ಗಳಲ್ಲಿ 229 (ಕುನಾಲ್‌ ಕಪೂರ್‌ 31, ಅನಿರುದ್ಧ್‌ ಎ. ಜೋಶಿ 23, ಪೃಥ್ವಿರಾಜ್‌ 85; ಭವೇಶ್‌ ಗುಲೇಚಾ 48ಕ್ಕೆ3, ಶರಣ್‌ ಗೌಡ 46ಕ್ಕೆ2, ವಿಕಾಸ್‌ ಕುಮಾರ್‌ ಸಿನ್ಹಾ 22ಕ್ಕೆ2, ಭರತ್‌ ಎಂ. ಕೊಂಡಜ್ಜಿ 27ಕ್ಕೆ2).
ಬೆಂಗಳೂರು ವಲಯ:  ಪ್ರಥಮ ಇನಿಂಗ್ಸ್‌: 10.1 ಓವರ್‌ಗಳಲ್ಲಿ 2 ವಿಕೆಟ್‌ಗೆ 42 (ಸಮರ್ಥ್‌ ಊಟಿ ಬ್ಯಾಟಿಂಗ್‌ 21; ದೀಪೇಶ್‌ ಪೂನಿಯಾ 25ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.