ADVERTISEMENT

ಅಮೀರ್‌ಗೆ ಆಡಲು ಅನುಮತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ದುಬೈ/ ಕರಾಚಿ (ಪಿಟಿಐ): ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಐದು ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಮೊಹಮ್ಮದ್‌ ಅಮೀರ್‌ಗೆ ದೇಸಿ ಕ್ರಿಕೆಟ್‌ನಲ್ಲಿ ಆಡಲು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಅನುಮತಿ ನೀಡಿದೆ.

ಪಾಕಿಸ್ತಾನದ ಯುವ ವೇಗದ ಬೌಲರ್‌ 2010ರ ಸೆಪ್ಟೆಂಬರ್‌ನಲ್ಲಿ ನಿಷೇಧಕ್ಕೆ ಒಳಗಾಗಿದ್ದರು. ಅವರ ಐದು ವರ್ಷಗಳ ನಿಷೇಧ ಶಿಕ್ಷೆ 2015 ಸೆಪ್ಟೆಂಬರ್‌ 2ಕ್ಕೆ ಕೊನೆಗೊಳ್ಳಲಿದೆ. ಅದಕ್ಕೂ ಮುನ್ನವೇ ಅವರಿಗೆ ದೇಸಿ ಕ್ರಿಕೆಟ್‌ನಲ್ಲಿ ಆಡಲು ಐಸಿಸಿ ಅವಕಾಶ ನೀಡಿದೆ. ಆದರೆ ಸೆಪ್ಟೆಂಬರ್‌ 2ರ ಬಳಿಕವೇ ಅವರಿಗೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಸಾಧ್ಯ.

‘ಇದು ನನ್ನ ಜೀವನದ ಅತ್ಯಂತ ಸಂತಸದ ದಿನ. ನಾನು ತಕ್ಕ ಪಾಠ ಕಲಿತಿದ್ದೇನೆ. ಸಭ್ಯ ಆಟಗಾರ ಮತ್ತು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಮತ್ತೆ ಕ್ರಿಕೆಟ್‌ ಜೀವನ ಆರಂಭಿಸುತ್ತಿದ್ದೇನೆ’ ಎಂದು ಅಮೀರ್‌ ಪ್ರತಿಕ್ರಿಯಿಸಿದ್ದಾರೆ.

ನಿಷೇಧ ಶಿಕ್ಷೆಗೆ ಒಳಗಾಗುವ ಮುನ್ನ ಅಮೀರ್‌ 14 ಟೆಸ್ಟ್‌, 15 ಏಕದಿನ ಮತ್ತು 18 ಟ್ವೆಂಟಿ–20 ಪಂದ್ಯಗಳಲ್ಲಿ ಪಾಕ್‌ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.