ADVERTISEMENT

ಆನಂದ್‌ಗೆ ಒಂಬತ್ತನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಸೇಂಟ್‌ ಲೂಯಿಸ್‌, ಅಮೆರಿಕ (ಪಿಟಿಐ): ಭಾರತದ ಗ್ರ್ಯಾಂಡ್ ಮಾಸ್ಟರ್‌ ವಿಶ್ವ ನಾಥನ್‌ ಆನಂದ್‌ ಇಲ್ಲಿ ಕೊನೆಗೊಂಡ ಸಿಂಕ್ಯೂಫೀಲ್ಡ್‌ ಕಪ್‌ ಚೆಸ್‌ ಟೂರ್ನಿಯಲ್ಲಿ ಒಂಬತ್ತನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದ್ದಾರೆ. ಅರ್ಮೇನಿಯಾದ ಲೆವೊನ್‌ ಅರೋನಿಯನ್‌ ಟೂರ್ನಿಯ ಚಾಂಪಿಯನ್‌ ಆದರು.

ಬುಧವಾರ ರಾತ್ರಿ ನಡೆದ ಒಂಬತ್ತನೇ ಹಾಗೂ ಅಂತಿಮ ಸುತ್ತಿನ ಪೈಪೋಟಿ ಯಲ್ಲಿ ಐದು ಬಾರಿಯ ವಿಶ್ವ ಚಾಂಪಿ ಯನ್‌ ಆನಂದ್‌, ನಾರ್ವೆಯ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಜತೆ ಡ್ರಾ ಮಾಡಿಕೊಂಡರು. ಇದರೊಂದಿಗೆ ಎದುರಾಳಿ ಆಟಗಾ ರನ ಜತೆ ಪಾಯಿಂಟ್‌ ಹಂಚಿಕೊಂಡ ಅವರು ಒಂಬತ್ತು ಸುತ್ತುಗಳಿಂದ 3.5 ಪಾಯಿಂಟ್ಸ್‌ ಕಲೆ ಹಾಕಲಷ್ಟೇ ಶಕ್ತರಾದರು.

ಇಲ್ಲಿ ಪರಿಣಾಮಕಾರಿ ಆಟ ಆಡಲು ವಿಫಲವಾದ ಭಾರತದ ಆಟಗಾರ ಗ್ರ್ಯಾಂಡ್‌ ಚೆಸ್‌ ಟೂರ್‌ ಪಟ್ಟಿಯಲ್ಲಿ ಎರ ಡನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿ ದ್ದಾರೆ. ಈ ಟೂರ್ನಿಯು ಡಿಸೆಂಬರ್‌ನಲ್ಲಿ ಜರುಗಲಿದೆ. ಅರೋನಿಯನ್‌ಗೆ ಪ್ರಶಸ್ತಿ: ಅರ್ಮೇ ನಿಯಾದ ಲೆವೊನ್‌ ಅರೋನಿಯನ್‌ ನಿರೀಕ್ಷೆಯಂತೆ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಅವರು ಒಂಬತ್ತನೇ ಸುತ್ತಿನಲ್ಲಿ ಬಲ್ಗೇರಿಯಾದ ವೆಸೆಲಿನ್‌ ಟೊಪಲೊವ್‌ ಅವರ ಜತೆ ಪಾಯಿಂಟ್‌ ಹಂಚಿಕೊಂಡರು.

ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 6ಕ್ಕೆ ಹೆಚ್ಚಿಸಿಕೊಂಡ ಅವರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡರು.
ನೆದರ್‌ಲೆಂಡ್‌ನ ಅನಿಶ್‌ ಗಿರಿ (5) ಈ ಪಟ್ಟಿಯಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿ ಕೊಂಡರು. ಅವರು ಅಂತಿಮ ಸುತ್ತಿನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಮ್‌ ವಚೈರ್‌ ಲಾಗ್ರೇವ್‌ ಅವರೊಂದಿಗೆ ಡ್ರಾ ಮಾಡಿಕೊಂಡರು.

ಕಾರ್ಲ್‌ಸನ್‌ (5) ಮೂರನೇ ಸ್ಥಾನ ಗಳಿಸಲಷ್ಟೇ ಶಕ್ತರಾದರು. ಲಾಗ್ರೇವ್‌ ಮತ್ತು ಅಮೆರಿಕದ ಹಿಕಾರು ನಕಮುರ ಅವರ ಖಾತೆಯಲ್ಲೂ ತಲಾ ಐದು ಪಾಯಿಂಟ್ಸ್‌ ಇದ್ದು ಇವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು. ನಕಮುರಾ ಒಂಬತ್ತನೇ ಸುತ್ತಿನಲ್ಲಿ  ಅಲೆಕ್ಸಾಂಡರ್‌ ಗ್ರಿಸ್‌ಚುಕ್‌ ಅವ ರನ್ನು ಮಣಿಸಿದರು. ಅಮೆರಿಕದ ಫ್ಯಾಬಿಯಾನೊ ಕರು ವಾನ ಅಂತಿಮ ಸುತ್ತಿನಲ್ಲಿ ವೆಸ್ಲಿ ಸೋ ಜತೆ ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.