ADVERTISEMENT

ಆನ್‌ಲೈನ್‌ನಲ್ಲಿ 115 ಸ್ಫರ್ಧಿಗಳ ನೋಂದಣಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಸುರತ್ಕಲ್‌ ಸಮೀಪದ ಸಸಿಹಿತ್ಲಿನಲ್ಲಿ ಇದೇ 26ರಿಂದ ಆರಂಭವಾಗಲಿರುವ ರಾಷ್ಟ್ರೀಯ ಸರ್ಫಿಂಗ್‌ ಸ್ಪರ್ಧೆಗಾಗಿ ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಮಂಗಳವಾರ ಪೂರ್ವತಯಾರಿ ನಡೆಸಿದ ಸ್ಪರ್ಧಿಗಳು ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಸುರತ್ಕಲ್‌ ಸಮೀಪದ ಸಸಿಹಿತ್ಲಿನಲ್ಲಿ ಇದೇ 26ರಿಂದ ಆರಂಭವಾಗಲಿರುವ ರಾಷ್ಟ್ರೀಯ ಸರ್ಫಿಂಗ್‌ ಸ್ಪರ್ಧೆಗಾಗಿ ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಮಂಗಳವಾರ ಪೂರ್ವತಯಾರಿ ನಡೆಸಿದ ಸ್ಪರ್ಧಿಗಳು ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ   

ಮಂಗಳೂರು: ಸುರತ್ಕಲ್‌ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ಇದೇ 26ರಿಂದ 28 ವರೆಗೆ ನಡೆಯಲಿರುವ 2ನೇ ಆವೃತ್ತಿಯ ರಾಷ್ಟ್ರೀಯ  ಸರ್ಫಿಂಗ್‌ ಚಾಂಪಿಯನ್‌ಷಿಪ್‌ಗೆ ಸಿದ್ಧತೆಗಳು ನಡೆಯುತ್ತಿವೆ.

ಭಾರತ ಸೇರಿದಂತೆ ಮಾಲ್ಡೀವ್ಸ್‌, ಯುರೋಪ್‌, ಆಸ್ಟ್ರೇಲಿಯಾಗಳ 115 ಕ್ಕೂ ಹೆಚ್ಚು ಸ್ಪರ್ಧಿಗಳು ಆನ್‌ಲೈನ್‌ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿದೇಶದ ಸ್ಪರ್ಧಿಗಳು ಮುಕ್ತ ವಿಭಾಗದಲ್ಲಿ ಪೈಪೋಟಿ ನಡೆಸಲಿದ್ದಾರೆ.

ಬೀಚ್‌ನಲ್ಲಿ  ಸ್ವಚ್ಛತೆ, ವಾಹನ ಸಂಚಾರಕ್ಕೆ ಬೇಕಾಗುವ ರಸ್ತೆ ಅಭಿವೃದ್ಧಿ ಮಾಡುವ ಕಾರ್ಯ ಬಿರುಸಿನಿಂದ ಸಾಗಿದೆ. ಬೀಚ್‌ನಲ್ಲಿ ನುರಿತ ಈಜು ತರಬೇತುದಾರರು, ಹೋಂ ಗಾರ್ಡ್‌ಗಳನ್ನು ನೇಮಕ ಮಾಡಲಾಗಿದೆ. 

ADVERTISEMENT

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಫಿಂಗ್‌ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.