ADVERTISEMENT

ಆಸ್ಟ್ರೇಲಿಯಾ ಅತ್ಯಂತ ದುರ್ಬಲ ತಂಡ: ಹರಭಜನ್ ಸಿಂಗ್

ಪಿಟಿಐ
Published 18 ಫೆಬ್ರುವರಿ 2017, 18:22 IST
Last Updated 18 ಫೆಬ್ರುವರಿ 2017, 18:22 IST
ಆಸ್ಟ್ರೇಲಿಯಾ  ಅತ್ಯಂತ ದುರ್ಬಲ ತಂಡ: ಹರಭಜನ್ ಸಿಂಗ್
ಆಸ್ಟ್ರೇಲಿಯಾ ಅತ್ಯಂತ ದುರ್ಬಲ ತಂಡ: ಹರಭಜನ್ ಸಿಂಗ್   
ನವದೆಹಲಿ: ‘ಭಾರತದಲ್ಲಿ ಟೆಸ್ಟ್ ಸರಣಿ ಆಡಲು ಬಂದಿರುವ ಆಸ್ಟ್ರೇಲಿಯಾ ಬಳಗವು ಅತ್ಯಂತ ದುರ್ಬಲ ತಂಡವಾಗಿದೆ. ಇತಿಹಾಸದಲ್ಲಿ ಭಾರತಕ್ಕೆ ಇಂತಹ ಕಳಪೆ ತಂಡ ಬಂದಿರಲಿಲ್ಲ’ ಎಂದು ಹಿರಿಯ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಹೇಳಿದ್ದಾರೆ. 
 
ಶನಿವಾರ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ‘ಅತ್ಯುತ್ತಮ ಆಟಗಾರರು ಇದ್ದ ಆಸ್ಟ್ರೇಲಿಯಾ ತಂಡದ ವಿರುದ್ಧ ನಾನು ಈ ಹಿಂದೆ ಆಡಿದ್ದೇನೆ. ಆಗಿನ ಆಟಗಾರರು ಮತ್ತು ಈಗ ತಂಡದಲ್ಲಿರುವವರ ಸಾಮರ್ಥ್ಯವನ್ನು ಹೋಲಿಕೆ ಮಾಡಿ ನೋಡಿದರೆ ಈಗಿನದ್ದು ದುರ್ಬಲ ತಂಡ’ ಎಂದು ಹೇಳಿದರು. 
 
‘ಸ್ಟೀವ್ ಸ್ಮಿತ್ ನಾಯಕತ್ವದ ಬಳಗವನ್ನು ಭಾರತ ತಂಡವು 4–0 ಅಂತರದಿಂದ ಸರಣಿಯಲ್ಲಿ ಸೋಲಿಸಲು ಸಾಧ್ಯವಿದೆ’ ಎಂದು ಪಂಜಾಬ್ ಆಟಗಾರ ಹರಭಜನ್ ಆಭಿಪ್ರಾಯಪಟ್ಟಿದ್ದಾರೆ. 
 
‘2001ರಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಮ್ಯಾಥ್ಯೂ ಹೇಡನ್, ಮೈಕೆಲ್ ಸ್ಲೆಟರ್, ಆ್ಯಡಮ್ ಗಿಲ್‌ಕ್ರಿಸ್ಟ್, ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ಅವರು ಇದ್ದರು. ಅದರಿಂದಾಗಿ ಆಗಿನ ತಂಡವು ತುಂಬಾ ಕಠಿಣ ಎದುರಾಳಿಯಾಗಿತ್ತು. ಆದರೆ, ಈಗ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರನ್ನು ಬೇಗನೆ ಔಟ್ ಮಾಡಿದರೆ ಮುಂದಿನ ಹಾದಿ ಸುಲಭ. ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ಬೌಲಿಂಗ್ ಎದುರಿಸಲು ಉಳಿದ ಬ್ಯಾಟ್ಸ್‌ಮನ್‌ಗಳು ಪರದಾಡುವುದು ಖಚಿತ’ ಎಂದು ವಿಶ್ಲೇಷಿಸಿದರು. ಹರಭಜನ್ ಆ ಸರಣಿಯಲ್ಲಿ ಒಟ್ಟು 32 ವಿಕೆಟ್‌ ಗಳಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.