ADVERTISEMENT

ಇಂಗ್ಲೆಂಡ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಬಾಂಗ್ಲಾದೇಶ  ತಂಡವನ್ನು ಮಣಿಸಿದ ಬಳಿಕ ಇಂಗ್ಲೆಂಡ್‌ ತಂಡದ ಆಟಗಾರರ ಸಂಭ್ರಮಿಸಿ ಕ್ಷಣ
ಬಾಂಗ್ಲಾದೇಶ ತಂಡವನ್ನು ಮಣಿಸಿದ ಬಳಿಕ ಇಂಗ್ಲೆಂಡ್‌ ತಂಡದ ಆಟಗಾರರ ಸಂಭ್ರಮಿಸಿ ಕ್ಷಣ   

ಚಿತ್ತಗಾಂಗ್‌ (ಎಎಫ್‌ಪಿ): ಗರೆತ್‌ ಬಟ್ಟಿ (65ಕ್ಕೆ3) ಮತ್ತು ಬೆನ್‌ ಸ್ಟೋಕ್ಸ್‌ (20ಕ್ಕೆ2) ಅವರ ಪರಿಣಾಮಕಾರಿ ದಾಳಿಯ ಬಲದಿಂದ ಇಂಗ್ಲೆಂಡ್‌ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 22ರನ್‌ ಗಳಿಂದ ಗೆದ್ದಿದೆ. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 1–0ಯ ಮುನ್ನಡೆ ಪಡೆದಿದೆ.

ಜಹುರ್‌ ಅಹ್ಮದ್‌ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಸೋಮವಾರ  ಆತಿಥೇಯ ಬಾಂಗ್ಲಾ ತಂಡದ ಗೆಲುವಿಗೆ 33ರನ್‌ಗಳ ಅಗತ್ಯವಿತ್ತು. ಶಬ್ಬೀರ್‌ ರಹಮಾನ್‌  ಕ್ರೀಸ್‌ನಲ್ಲಿ ಇದ್ದುದರಿಂದ ಆತಿಥೇಯರ ಜಯದ ಕನಸು ಚಿಗುರೊಡೆದಿತ್ತು.

ಆದರೆ ಆಂಗ್ಲರ ನಾಡಿನ ತಂಡದ ಬೌಲರ್‌ಗಳು ಮಿಂಚಿನ ದಾಳಿ ನಡೆಸಿ ಎದುರಾಳಿ ತಂಡವನ್ನು ದ್ವಿತೀಯ ಇನಿಂಗ್ಸ್‌ನಲ್ಲಿ 81.3 ಓವರ್‌ಗಳಲ್ಲಿ 263ರನ್‌ಗಳಿಗೆ ಕಟ್ಟಿಹಾಕಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: ಮೊದಲ ಇನಿಂಗ್ಸ್‌: 105.5 ಓವರ್‌ಗಳಲ್ಲಿ 293 ಮತ್ತು  80.2 ಓವರ್‌ಗಳಲ್ಲಿ 240. ಬಾಂಗ್ಲಾದೇಶ: ಪ್ರಥಮ ಇನಿಂಗ್ಸ್‌: 86 ಓವರ್‌ಗಳಲ್ಲಿ 248 ಮತ್ತು 81.3 ಓವರ್‌ಗಳಲ್ಲಿ 263 (ಶಬ್ಬೀರ್‌ ರಹಮಾನ್‌ ಔಟಾಗದೆ 64, ತೈಜುಲ್‌ ಇಸ್ಲಾಂ 16; ಗರೆತ್‌ ಬಟ್ಟಿ 65ಕ್ಕೆ3, ಮೋಯಿನ್‌ ಅಲಿ 60ಕ್ಕೆ2, ಆದಿಲ್‌ ರಶೀದ್‌ 55ಕ್ಕೆ1, ಸ್ಟುವರ್ಟ್‌ ಬ್ರಾಡ್‌ 31ಕ್ಕೆ2, ಬೆನ್‌ ಸ್ಟೋಕ್ಸ್‌ 20ಕ್ಕೆ2).

ಫಲಿತಾಂಶ:  ಇಂಗ್ಲೆಂಡ್‌ಗೆ 22ರನ್‌ ಗೆಲುವು ಹಾಗೂ 2 ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT