ADVERTISEMENT

ಎಜಿಒಆರ್‌ಸಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಸೂಪರ್ ಡಿವಿಷನ್‌ ಫುಟ್‌ಬಾಲ್‌ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಎಜಿಒಆರ್‌ಸಿ ತಂಡಕ್ಕೆ ಗೆಲುವಿನ ಗೋಲು ತಂದುಕೊಟ್ಟ ಪ್ರದೀಪ್‌ ಕುಮಾರ್ (ನೀಲಿ ಪೋಷಾಕು) ಚೆಂಡನ್ನು ಗುರಿ ಸೇರಿಸಲು ಯತ್ನಿಸಿದ ರೀತಿ –ಪ್ರಜಾವಾಣಿ ಚಿತ್ರ
ಸೂಪರ್ ಡಿವಿಷನ್‌ ಫುಟ್‌ಬಾಲ್‌ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಎಜಿಒಆರ್‌ಸಿ ತಂಡಕ್ಕೆ ಗೆಲುವಿನ ಗೋಲು ತಂದುಕೊಟ್ಟ ಪ್ರದೀಪ್‌ ಕುಮಾರ್ (ನೀಲಿ ಪೋಷಾಕು) ಚೆಂಡನ್ನು ಗುರಿ ಸೇರಿಸಲು ಯತ್ನಿಸಿದ ರೀತಿ –ಪ್ರಜಾವಾಣಿ ಚಿತ್ರ   
ಬೆಂಗಳೂರು: ಮೊದಲರ್ಧದಲ್ಲಿಯೇ ಗೋಲು ಗಳಿಸಿ ಕೊನೆಯವರೆಗೂ ಮುನ್ನಡೆ ಉಳಿಸಿಕೊಂಡ ಎಜಿಒ ಆರ್‌ಸಿ ತಂಡ ಸೂಪರ್ ಡಿವಿಷನ್‌ ಫುಟ್‌ಬಾಲ್‌ ಲೀಗ್ ಚಾಂಪಿಯನ್‌ ಷಿಪ್‌ನ ಶನಿವಾರದ ಪಂದ್ಯದಲ್ಲಿ 1–0ಗೋಲಿನಿಂದ ಆರ್‌ಡಬ್ಲ್ಯುಎಫ್‌ ಎದುರು ಗೆಲುವು ಪಡೆಯಿತು.
 
ರಾಜ್ಯ ಫುಟ್‌ಬಾಲ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ವಿಜಯೀ ತಂಡದ ಪ್ರದೀಪ್‌ ಕುಮಾರ್ 34ನೇ ನಿಮಿಷದಲ್ಲಿ ಜಯದ ಗೋಲು ತಂದುಕೊಟ್ಟರು.
 
ಈ ಗೆಲುವಿನ ಮೂಲಕ ಎಜಿಒ ಆರ್‌ಸಿ ಪಾಯಿಂಟ್ಸ್‌ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿಕೊಂಡಿತು. ಟೂರ್ನಿ ಯಲ್ಲಿ ಮೂರು ಪಂದ್ಯಗಳನ್ನಾಡಿ ರುವ ತಂಡ ಪಡೆದ ಮೊದಲ ಗೆಲುವು ಇದು. ತಲಾ ಹತ್ತು ಪಾಯಿಂಟ್ಸ್ ಹೊಂದಿರುವ ಎಂಇಜಿ ಮತ್ತು ಎಎಸ್‌ಸಿ ಅಂಡ್ ಸೆಂಟರ್‌ ತಂಡಗಳು ಜಂಟಿಯಾಗಿ ಎರಡನೇ ಸ್ಥಾನ ಹೊಂದಿವೆ. ಸ್ಟೂಡೆಂಟ್‌ ಯೂನಿಯನ್‌ ಮೊದಲ ಸ್ಥಾನದಲ್ಲಿದೆ.
 
ಕ್ರೀಡಾ ಪ್ರಾಧಿಕಾರಕ್ಕೆ ಗೆಲುವು: ‘ಎ’ ಡಿವಿಷನ್ ಟೂರ್ನಿಯ ಪಂದ್ಯದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ 4–0 ಗೋಲುಗಳಿಂದ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ಇಂಡಿಪೆಂಡೆಂಟ್ಸ್‌ ಎದುರು ಗೆಲುವು ಸಾಧಿಸಿತು.
 
ವಿಜಯೀ ತಂಡದ ಕೆ.ಸಿ. ಸಿಂಗ್ ನಾಲ್ಕನೇ ನಿಮಿಷದಲ್ಲಿ ಮೊದಲು ಗೋಲು ಗಳಿಸಿದರೆ, ಇದಾದ ಎರಡು ನಿಮಿಷಗಳಲ್ಲಿ  ದೀಪ್‌ ಮಜಮು ದಾರ್‌ ಗೋಲು ತಂದಿತ್ತರು. ಇದೇ ಆಟಗಾರ 55ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ಗಳಿಸಿದರೆ, ಸುದರ್ಶನ್‌ 76ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಗೆಲುವಿನ ಅಂತರ ಹೆಚ್ಚಿಸಿದರು.
 
ಭಾನುವಾರದ ಪಂದ್ಯಗಳು: ಬಿಯುಎಫ್‌ಸಿ–ಬೆಂಗಳೂರು ಈಗಲ್ಸ್‌ (ಮಧ್ಯಾಹ್ನ 1.30ಕ್ಕೆ)  ಸೌತ್‌ ಯುನೈಟೆಡ್‌–ಎಎಸ್‌ಸಿ ಅಂಡ್ ಸೆಂಟರ್ (ಮಧ್ಯಾಹ್ನ 3.15ಕ್ಕೆ).
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.