ADVERTISEMENT

ಐಪಿಎಲ್‌ನಲ್ಲಿ ಬ್ರಾವೊ ಆಟ ಇಲ್ಲ

ಪಿಟಿಐ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಡ್ವೇನ್‌ ಬ್ರಾವೊ
ಡ್ವೇನ್‌ ಬ್ರಾವೊ   

ರಾಜ್‌ಕೋಟ್‌: ಗಾಯ ಗೊಂಡಿರುವ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಅವರು ಐಪಿಎಲ್‌ ಹತ್ತನೇ ಆವೃತ್ತಿಯಲ್ಲಿ ಆಡುತ್ತಿಲ್ಲ. ಈ ವಿಷಯವನ್ನು ಭಾನುವಾರ ಗುಜರಾತ್ ಲಯನ್ಸ್‌ ತಂಡದ ನಾಯಕ ಸುರೇಶ್‌ ರೈನಾ ತಿಳಿಸಿದ್ದಾರೆ. ವೆಸ್ಟ್‌ ಇಂಡೀಸ್‌ನ ಬ್ರಾವೊ ಒಂಬತ್ತನೇ ಆವೃ ತ್ತಿಯ ಐಪಿಎಲ್‌ನಲ್ಲಿ ಲಯನ್ಸ್‌ ತಂಡದಲ್ಲಿ ಆಡಿದ್ದರು.

ಹೋದ ವರ್ಷದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಿಗ್‌ಬಾಷ್‌ ಕ್ರಿಕೆಟ್‌ ಲೀಗ್‌ ವೇಳೆ ಬ್ರಾವೊ ಅವರ ಎಡಗಾಲಿನ ಮಂಡಿಗೆ ಗಾಯವಾಗಿತ್ತು. ಹೀಗಾಗಿ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿ ಕೊಂಡಿದ್ದರು. ಇದರಿಂದ ಅವರು ಇನ್ನೂ ಗುಣಮುಖರಾಗಿಲ್ಲ.

‘ಬ್ರಾವೊ ಪೂರ್ಣವಾಗಿ ಫಿಟ್‌ ಆಗಲು ಇನ್ನೂ ನಾಲ್ಕು ವಾರಗಳು ಬೇಕಾಗುತ್ತದೆ. ಹೀಗಾಗಿ ಅವರು ಈ ಬಾರಿ ಐಪಿಎಲ್‌ನಲ್ಲಿ ಆಡುವುದಿಲ್ಲ’ ಎಂದು ರೈನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.