ADVERTISEMENT

ಕರ್ನಾಟಕದ ಬಾಲಕರಿಗೆ ಪ್ರಶಸ್ತಿ

ರಾಷ್ಟ್ರೀಯ ಜೂನಿಯರ್‌ ವಾಲಿಬಾಲ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:55 IST
Last Updated 19 ಜನವರಿ 2017, 19:55 IST
ಕರ್ನಾಟಕದ ಬಾಲಕರಿಗೆ ಪ್ರಶಸ್ತಿ
ಕರ್ನಾಟಕದ ಬಾಲಕರಿಗೆ ಪ್ರಶಸ್ತಿ   

ಚಿತ್ರದುರ್ಗ:  ಕರ್ನಾಟಕ ತಂಡದವರು 43ನೇ ರಾಷ್ಟ್ರೀಯ ಜೂನಿಯರ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಗುರುವಾರ ನಡೆದ ಫೈನಲ್‌ನಲ್ಲಿ ಕರ್ನಾಟಕದ ಆಟಗಾರರು 27–25, 25–23, 25–23ರಿಂದ ತಮಿಳುನಾಡು ತಂಡವನ್ನು ಸೋಲಿಸಿದರು.

ಮಂಡ್ಯದಲ್ಲಿ 2009ರಲ್ಲಿ ನಡೆದಿದ್ದ ಇದೇ ಕೂಟದಲ್ಲಿ ಪ್ರಶಸ್ತಿ ಗೆದ್ದಿದ್ದ ಕರ್ನಾಟಕ ಇದೀಗ ಮತ್ತೆ ಈ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಆತಿಥೇಯ ತಂಡದ ಅನುಷ್‌, ನೂಮನ್‌, ಸೌರವ್‌ ಮತ್ತು ರಾಕೇಶ್‌ ಅತ್ಯುತ್ತಮವಾಗಿ ಆಡಿದರು.

ಬಾಲಕಿಯರ ವಿಭಾಗದಲ್ಲಿ 3ನೇ ಸ್ಥಾನ: ಕರ್ನಾಟಕದ ಬಾಲಕಿಯರ ತಂಡ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 25–17, 25–17, 25–10ರಿಂದ ಮಹಾರಾಷ್ಟ್ರ ತಂಡವನ್ನು ಸೋಲಿಸಿದರು.

ADVERTISEMENT

ಫೈನಲ್‌ ಪಂದ್ಯದಲ್ಲಿ ತಮಿಳುನಾಡಿನ ಆಟಗಾರ್ತಿಯರು 25–13, 25–20, 25–14 ರಿಂದ ಹರಿಯಾಣವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿಕೊಂಡರು.

ಬಾಲಕರ ವಿಭಾಗದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹರಿಯಾಣ 25–20, 19–25, 25–20, 25–20ರಿಂದ ಉತ್ತರ ಪ್ರದೇಶವನ್ನು ಮಣಿಸಿತು.
ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಪಡೆದ ತಂಡಗಳು ತಲಾ ₹50 ಸಾವಿರ ನಗದು ಬಹುಮಾನ ಪಡೆದರೆ, ಎರಡನೇ ಸ್ಥಾನ ಪಡೆದ ತಂಡಗಳು ತಲಾ ₹30 ಸಾವಿರ ನಗದು ಬಹುಮಾನ ಸ್ವೀಕರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.