ADVERTISEMENT

ಕರ್ನಾಟಕ ತಂಡಗಳು ರನ್ನರ್ಸ್ ಅಪ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:11 IST
Last Updated 17 ನವೆಂಬರ್ 2017, 20:11 IST
ಕರ್ನಾಟಕ ತಂಡಗಳು ರನ್ನರ್ಸ್ ಅಪ್
ಕರ್ನಾಟಕ ತಂಡಗಳು ರನ್ನರ್ಸ್ ಅಪ್   

ಬೆಂಗಳೂರು: ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡದವರು ಸ್ಕೂಲ್ ಗೇಮ್ಸ್ ಫೆಡರೇಷನ್‌ ಆಫ್‌ ಇಂಡಿಯಾ ವತಿಯಿಂದ ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ರಾಷ್ಟ್ರೀಯ ಶಾಲಾ ಬಾಲ್ ಬ್ಯಾಡ್ಮಿಂಟನ್ ಟೂರ್ನಿ ಯಲ್ಲಿ ರನ್ನರ್ಸ್ ಅಪ್ ಆಗಿದ್ದಾರೆ.

19 ವರ್ಷದೊಳಗಿನವರ ಬಾಲಕರ ವಿಭಾಗದ ಫೈನಲ್‌ನಲ್ಲಿ ಕರ್ನಾಟಕ ತಂಡ 32–35, 31–35ರ ನೇರ ಸೆಟ್‌ಗಳಿಂದ ತಮಿಳುನಾಡು ತಂಡಕ್ಕೆ ಶರಣಾಯಿತು.

ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ನಲ್ಲಿ ರಾಜ್ಯ ತಂಡ 35–26, 35–21ರ ನೇರ ಸೆಟ್‌ಗಳಿಂದ ಆಂಧ್ರಪ್ರದೇಶ ತಂಡವನ್ನು ಸೋಲಿಸಿತ್ತು.

ADVERTISEMENT

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಕರ್ನಾಟಕ ತಂಡದವರು 24–35, 26–35ರಲ್ಲಿ ತಮಿಳುನಾಡು ವಿರುದ್ಧ ಸೋತರು.

ರಾಜ್ಯ ತಂಡದಲ್ಲಿದ್ದ ಎಂಟು ಮಂದಿ ಮೂಡುಬಿದಿರೆಯ ಆಳ್ವಾಸ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.